ಸಿಂಧನೂರು :- ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆ ನಂತರ ವೈದ್ಯರ ನಿರ್ಲಕ್ಷದಿಂದ ಮೂವರು ಬಾಣಂತಿಯಾರಾದ, ಆರ್ ಎಚ್. 3 ಕ್ಯಾಂಪಿನ ಮೌಸಂಬಿ ಮಂಡಲ್, ಉದ್ಬಾಳ್. ಜೆ. ಗ್ರಾಮದ ಚಂದ್ರಕಲಾ, ಅಂಕುಶದೊಡ್ಡಿಯ ರೇಣುಕಮ್ಮ, ಇವರು ಹೆರಿಗೆ ಬಳಿಕ ಸರಿಯಾದ ಚಿಕಿತ್ಸೆ ಸಿಗದೇ ಸಾವನಪ್ಪಿದ್ದ ಹಿನ್ನೆಲೆಯಲ್ಲಿ ವೈದ್ಯರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ನಮ್ಮ ಕರ್ನಾಟಕ ಸೇನೆ ಸಂಘಟನೆ ತಹಸೀಲ್ ಕಚೇರಿ ಮುಂಭಾಗದಲ್ಲಿ ನಡೆಸಿರುವ ಧರಣಿ ನಾಲ್ಕನೇ ದಿನಕ್ಕೆ ಮುಂದುವರೆದ ಹಿನ್ನೆಲೆ ಸೋಮವಾರ ಧರಣಿ ಸ್ಥಳಕ್ಕೆ ಲಿಂಗಸುಗೂರು ಸಹಾಯಕ ಆಯುಕ್ತ ಬಸಣ್ಣ ಕಲ್ ಶೆಟ್ಟಿ, ಹಾಗೂ ರಾಯಚೂರು ಡಿಎಚ್ಒ, ಬರುವುದಾಗಿ ತಿಳಿಸಿದರು ಅವರು ಬರುವ ಸಮಯ ಮೀರಿದ್ದರಿಂದ ಪ್ರತಿಭಟನಾಕಾರರು ರಸ್ತೆ ಗಿಳಿದು ವೈದ್ಯರ ವಿರುದ್ಧ ಘೋಷಣೆ ಕೂಗುತ್ತಾ ರಸ್ತೆ ಮಧ್ಯೆ ಪ್ರತಿಭಟನಾಕಾರರು ಕುಳಿತ ಹಿನ್ನೆಲೆ ಸ್ವಲ್ಪ ಸಮಯ ಟ್ರಾಫಿಕ್ ಜಾಮ್ ಕಂಡು ಬಂತು ಡಿವೈಎಸ್ಪಿ. ಬಿಎಸ್. ತಳವಾರ್. ಪಿ ಐ. ದುರ್ಗಪ್ಪ ನವರು ಪ್ರತಿಭಟನಾಕಾರರ ಮನವೂಲಿಸಿ ಧರಣಿ ಸ್ಥಳಕ್ಕೆ ಹೋಗಲು ಸೂಚಿಸಿದರು.
ಸ್ವಲ್ಪ ಸಮಯದಲ್ಲಿ ಸಹಾಯಕ ಆಯುಕ್ತ ಬಸಣ್ಣ ಕಲ್ ಶೆಟ್ಟಿ, ತಹಸಿಲ್ದಾರ್ ಅರುಣ್ ಎಚ್. ದೇಸಾಯಿ ಡಿಎಚ್ಒ. ಧರಣಿ ಸ್ಥಳಕ್ಕೆ ಬಂದು ರಾಜ್ಯ ಕಾರ್ಯಧ್ಯಕ್ಷರಾದ ಉಮೇಶ್ ಗೌಡ ಅರಳಹಳ್ಳಿ ಹಾಗೂ ತಾಲೂಕು ಘಟಕ ಅಧ್ಯಕ್ಷ ಮಂಜುನಾಥ್ ಗಾಣಿಗೇರ್ ಇವರ ಮೂಲಕ ಆಸ್ಪತ್ರೆ ಅವ್ಯವಸ್ಥೆ ವೈದ್ಯರ ನಿರ್ಲಕ್ಷ ತನ ಕೇಳಿ ಬಂತು ಧರಣಿಯಲ್ಲಿ ನಿರತರದ ಮೃತರ ಕುಟುಂಬಕ್ಕೆ ಸಾಂತ್ವನ ಹೇಳುವುದರ ಮೂಲಕ ಮೃತರ ಕುಟುಂಬಕ್ಕೆ ಸ್ಥಳೀಯ ಶಾಸಕರ ಗಮನಕ್ಕೆ ತಂದು ಸೂಕ್ತವಾದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿ ಮೃತ ಬಾಣಂತಿಯರ ಸಾವಿಗೆ ಕಾರಣ ಯಾರೆಂದು ತನಿಖೆ ಮಾಡಿ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯಧ್ಯಕ್ಷರಾದ ಉಮೇಶ್ ಗೌಡ ಅರಳಹಳ್ಳಿ, ತಾಲೂಕ ಘಟಕ ಅಧ್ಯಕ್ಷರಾದ ಮಂಜುನಾಥ್ ಗಾಣಿಗೇರ್, ಜಿಲ್ಲಾ ಸಂಚಾಲಕ ಹುಸೇನ್ ಬಾಷಾ, ಜಿಲ್ಲಾ ಉಪಾಧ್ಯಕ್ಷ ರಾಘವೇಂದ್ರ, ಜಿಲ್ಲಾ ಯುವ ಘಟಕ ಪ್ರ ಕಾರ್ಯದರ್ಶಿ ಬೂದೇಶ್ ಮರಾಠ, ತಾಲೂಕು ಉಪಾಧ್ಯಕ್ಷ ಗದ್ಯಪ್ಪ, ಪ್ರವೀಣ್ ಧೂಮತಿ, ಮಂಜು, ಪ್ರಶಾಂತ.ಅಶೋಕ. ಮಹಮ್ಮದ್. ಸಂತೋಷ ಸ್ವಾಮಿ. ಸುರೇಶ್ ಅನೇಕರಿದ್ದರು,
ವರದಿ:- ಬಸವರಾಜ ಬುಕ್ಕನಹಟ್ಟಿ