Ad imageAd image

ಕೆರೆಗಳ ನಿರ್ವಹಣೆಯಲ್ಲಿ ಅಧಿಕಾರಿಗಳ ನಿರ್ಲಕ್ಷತೆ ಜೀವ ಜಲಕ್ಕಿಲ್ಲ ಸುರಕ್ಷತೆ

Bharath Vaibhav
ಕೆರೆಗಳ ನಿರ್ವಹಣೆಯಲ್ಲಿ ಅಧಿಕಾರಿಗಳ ನಿರ್ಲಕ್ಷತೆ ಜೀವ ಜಲಕ್ಕಿಲ್ಲ ಸುರಕ್ಷತೆ
WhatsApp Group Join Now
Telegram Group Join Now

ಸಿರುಗುಪ್ಪ : -ನಗರ, ಪಟ್ಟಣಗಳಿಗೆ ಕುಡಿಯಲು ಸರಬರಾಜು ಮಾಡಲೆಂದು ನಿರ್ಮಿಸಿರುವ ಕೆರೆಗಳಿಗೆ ರಕ್ಷಣೆಯಿಲ್ಲದಂತಾಗಿದ್ದು, ಸಂಬಂದಿಸಿದ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ನಿರ್ವಹಣೆಯ ಕೊರತೆಯಿಂದ ಸಾರ್ವಜನಿಕರು ತೊಂದರೆಯನ್ನು ಅನುಭವಿಸುವಂತಾಗಿದೆ.ಸಿರುಗುಪ್ಪ ನಗರಕ್ಕೆ ಕೆರೆ ನಿರ್ಮಾಣವಾಗಿ ವರ್ಷಗಳೇ ಕಳೆದರೂ ಸುತ್ತುಬೇಲಿ ಅಳವಡಿಕೆಯಾಗಿಲ್ಲ. ತೆಕ್ಕಲಕೋಟೆ ಕೆರೆಗೆ ತಂತಿಬೇಲಿಗೆ ಬೇಕಾಬಿಟ್ಟಿಯಾಗಿ ಅಳವಡಿಸಲಾಗಿದ್ದು, ಕೆರೆಯ ಒಳಗಡೆ ದನಕರುಗಳು ನುಸುಳುತ್ತಿವೆೆ.

ಜಲಶುದ್ದೀಕರಣ ಕೇಂದ್ರದಲ್ಲಿ ವಿದ್ಯುತ್ ಪರಿವರ್ತಕಗಳ ತಂತಿಗಳು ಕೆಳಗಡೆಯಲ್ಲಿದ್ದು ಜಾನುವಾರುಗಳ ಅಪಾಯಕ್ಕೆ ದಾರಿ ಮಾಡಿಕೊಟ್ಟಿದೆ. ಹಲವು ವರ್ಷಗಳಿಂದಲೂ ತುಕ್ಕುಹಿಡಿದ ಯಂತ್ರಗಳು, ಕಾಲ ಕಾಲಕ್ಕೆ ಸರಿಯಾಗಿ ನೀರು ಶುದ್ದೀಕರಣ ಘಟಕಗಳ ದುರಸ್ತಿಯಾಗದಿರುವುದು ಜೀವಜಲಕ್ಕೆ ಸಂಕಷ್ಟ ಎದುರಾಗಿದೆಂದರೆ ತಪ್ಪಾಗಲಾರದು.ಕೆರೆಯ ದಡದಲ್ಲಿ ಮೇವು ಮತ್ತು ನೀರು ಅರಸಿಕೊಂಡು ಹೋಗುವ ಜಾನವಾರುಗಳಿಂದಾಗುವ ಅಪಾಯಗಳನ್ನು ಕೇಳುವವರಿಲ್ಲದಂತಾಗಿದೆ. ಕೆಲವು ದಿನಗಳ ತೆಕ್ಕಲಕೋಟೆ ಪಟ್ಟಣದಲ್ಲಿ ಸರಬರಾಜು ಆದ ನಳದ ನೀರಿನಲ್ಲಿ ರಕ್ತದ ನೀರು ಹರಿದು ಸಾರ್ವಜನಿಕ ವಲಯದಲ್ಲಿ ಭೀತಿಯನ್ನುಂಟು ಮಾಡಿತ್ತು.

ಆದರೂ ಅದೇ ಪಟ್ಟಣಕ್ಕೆ ಸರಬರಾಜು ಆಗುವ ದೇವಿನಗರ ಕೆರೆಯ ಒಳಭಾಗದಲ್ಲಿ ಕುರಿಗಳನ್ನು ಮೇಯಿಸುತ್ತಿದ್ದರೂ ಅಧಿಕಾರಿಗಳು ಮಾತ್ರ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ.ಬೇಸಿಗೆ ಅವಧಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕೆರೆ ತುಂಬಲಾಗದೇ 15ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗಿದ್ದು, ನಗರ ಮತ್ತು ಪಟ್ಟಣದಲ್ಲಿ ಆರ್.ಓ ಘಟಕಗಳು ದುರಸ್ತಿಯಲ್ಲಿದ್ದು ಅದರಲ್ಲಿ ಶೇ.70ರಷ್ಟು ಘಟಕಗಳು ಶಿಥಿಲಗೊಂಡು ಕೆಲವು ಘಟಕಗಳು ಅದರಲ್ಲಿನ ಸಾಮಾಗ್ರಿಗಳೇ ಮಾಯವಾಗಿರುತ್ತವೆ.

ಆದರೂ ಸಹ ಶುದ್ದ ಕುಡಿಯುವ ನೀರಿನ ನಿರ್ವಹಣೆಗಾಗಿ ಸರ್ಕಾರದಿಂದ ಕೋಟಿ ಕೋಟಿ ಹಣ ವ್ಯಯಿಸಲಾಗುತ್ತಿದ್ದು ಸಂಬಂದಿಸಿದ ಅಧಿಕಾರಿಗಳ ಗಮನಹರಿಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ವರದಿ:- ಶ್ರೀನಿವಾಸ ನಾಯ್ಕ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!