ಬೆಳಗಾವಿ: ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿಯೇ ವಿದ್ಯಾರ್ಥಿನಿ ನೇಹಾ ಹಿರೇಮಠ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಫಯಾಜ್ ತಾಯಿ ಮುಮ್ತಾಜ್ ಅಚ್ಚರಿ ಹೇಳಿಕೆಗಳನ್ನು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಆರೋಪಿ ಫಯಾಜ್ ತಾಯಿ ಮುಮ್ತಾಜ್, ಮಗ ಇಂತಹ ಕೆಲಸ ಮಾಡುತ್ತಾನೆ ಎಂಬುದು ಗೊತ್ತಿರಲಿಲ್ಲ.
ನೇಹಾಳನ್ನು ಕೊಲೆ ಮಡಿದ್ದಾನೆ ಎಂಬುದು ಕೇಳಿ ಸಂಕಟವಾಗುತ್ತಿದೆ. ಮಗಳನ್ನು ಕಳೆದುಕೊಂಡಿರುವ ತಂದೆ-ತಾಯಿಗಳ ನೋವು ಅರ್ಥವಾಗುತ್ತದೆ. ನನ್ನ ಮಗ ಮಾಡಿದ ತಪ್ಪಿಗೆ ನಾನು ರಾಜ್ಯದ ಜನರ ಕ್ಷಮೆ ಕೇಳುತ್ತೇನೆ. ಆತನಿಗೆ ಈ ಮಣ್ಣಿನ ಕಾನೂನು ಪ್ರಕಾರ ಏನು ಶಿಕ್ಷೆಯಾಗಬೇಕೋ ಆಗಲಿ ಎಂದು ಹೇಳಿದ್ದಾರೆ.
ನೇಹಾ ಹಾಗೂ ಫಯಾಜ್ ಕ್ಲಾಸ್ ಮೇಟ್ ಆಗಿದ್ದರು. ಇಬ್ಬರ ನಡುವೆ ಸ್ನೇಹವಿತ್ತು. ಆಕೆಯೇ ನನ್ನ ಮಗನಿಗೆ ಪ್ರಪೋಸ್ ಮಾಡಿದ್ದಳು. ಮಗ ವಿಷಯ ಹೇಳಿದಾಗ ನಾನು ಬೇಡ ಎಂದು ಹೇಳಿದ್ದೆ. ಆಕೆ ಕೂಡ ತುಂಬಾ ಒಳ್ಳೆಯ ಹುಡುಗಿ. ಇಬ್ಬರೂ ಮದುವೆ ಆಗಬೇಕು ಅಂತಾ ಇದ್ದರು.
ಕಳೆದ ಒಂದು ವರ್ಷದಿಂದ ಮಗ ಮನೆಯಲ್ಲಿಯೇ ಇದ್ದ. ಎರಡು ದಿನಗಳ ಹಿಂದೆ ಮನೆಯಲ್ಲಿ ಬೋರ್ ಆಗುತ್ತೆ ಕೆಲಸ ಹುಡುಕುತ್ತೇನೆ ಎಂದು ಹೇಳಿ ಹೋಗಿದ್ದ. ಈಗ ಈ ರೀತಿ ಮಾಡಿದ್ದಾನೆ ಎಂಬುದನ್ನು ಕೇಳಿ ಸಂಕಟವಾಗುತ್ತಿದೆ. ತಪ್ಪು ಮಾಡಿದ್ದಾನೆ. ಆತನಿಗೆ ಶಿಕ್ಷೆಯಾಗಲೇಬೇಕು ಎಂದು ಕಣ್ಣೀರಿಟ್ಟಿದ್ದಾರೆ.