Ad imageAd image

ನನ್ನ ಕೊಲೆ ಮಾಡಲು ಸಂಚು ರೂಪಿಸಿದ್ದರು ಆದರೆ ನನ್ನ ಮಗಳ ಹತ್ಯೆ ಮಾಡಿದರು : ನೇಹಾ ತಂದೆ 

Bharath Vaibhav
WhatsApp Group Join Now
Telegram Group Join Now

ಹುಬ್ಬಳ್ಳಿ : ನನ್ನ ಕೊಲೆ ಮಾಡಲು ಸಂಚು ರೂಪಿಸಿದ್ದರು ಆದರೆ ನನ್ನ ಮಗಳನ್ನು ಹತ್ಯೆ ಮಾಡಿದರು. ಮೊದಲು ನನ್ನ ಮಗಳ ಕೊಲೆ ನಡೆಯಿತು. ಬಳಿಕ ಅಂಜಲಿ ಯುವತಿಯ ಕೊಲೆ ನಡೆಯಿತು.

ಸಂಚು ರೂಪಿಸಿ ಕೊಲೆ ಮಾಡಿದ್ದಾರೆ ಎಂದು ನೇಹಾ ತಂದೆ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಾರ್ಪೋರೇಟರ್ ನಿರಂಜನ್ ಹಿರೇಮಠ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನನ್ನ ವಾರ್ಡಿನಲ್ಲಿಯೇ ಒಂದು ತಿಂಗಳಲ್ಲೇ ಎರಡು ಕೊಲೆ ನಡೆದಿದೆ. ಮೊದಲನೆಯದು ನನ್ನ ಮಗಳದ್ದು ಎರಡನೆಯದು ಇದೀಗ ಅಂಜಲಿ ಅಂಬಿಗೇರದ್ದು, ಇವೆರಡು ಕೊಲೆಗಳನ್ನು ಸಂಚು ರೂಪಿಸಿಯೇ ಮಾಡಲಾಗಿದೆ.ಇದರ ಹಿಂದೆ ರಾಜಕೀಯ ಷಡ್ಯಂತರವಿದೆ. ಕೊಲೆ ಮಾಡಿದ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.

ಕೂಲಿ‌ ಮಾಡಿ ಬದುಕುವ ಜನಾಂಗದ ಯುತಿ ಕೊಲೆ ಮಾಡಿದ್ದಾರೆ. ನನ್ನ ಮಗಳ ಬಲಿ ಪಡೆದಿದ್ದಕ್ಕೆ ಇಡೀ‌ ಜಗತ್ತು ಆಕ್ರೋಶ ವ್ಯಕ್ತ ಪಡಿಸಿದರು. ಅನೇಕ ರಾಜಕೀಯ ನಾಯಕರು ಮನೆ ಬರುವುದನ್ನು ತಪ್ಪಿಸಿದರು. ರೇವಣ್ಣ ಅವರು ಮನೆ ಬರುತ್ತಿದ್ದರು ಅವರನ್ನು ಬರದಂತೆ ಮಾಡಿದರು.

ವೀಣಾ ಕಾಶಪ್ಪನವರ ಅವರು ಕೂಡ ಮನೆ ಬರುವುದಾಗಿ ಹೇಳಿದ್ದರು. ಆದರೆ ಅವರು ಬರದಂತೆ‌ ಮಾಡಿದರು. ಯಾರೊಂದಿಗೆ ಯಾರು ಮಾತನಾಡಿದ್ದಾರೆ ಎಂದು ಎಲ್ಲ ಫೋನ್ ರೆಕಾರ್ಡ್ ಇವೆ ಎಂದು ವಾಗ್ದಾಳಿ ನಡೆಸಿದರು.

ಸರ್ಕಾರ ಗುಂಡಾ, ರೌಡಿ ಶೀಟರ್​ಗಳ ದಂಧೆ ಬಂದ್ ಮಾಡಬೇಕು. ಅಲ್ಲದೆ ರೌಡಿಗಳ ಚಲನವಲನ ಮೇಲೆ‌ ಕಣ್ಣಿಡಬೇಕು. ಅಂಜಲಿ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಬೇಕು.

ಅಂಜಲಿ ಕುಟುಂಬಕ್ಕೆ ಭದ್ರತೆ ನೀಡಬೇಕು. ಅವರು ಕುಟುಂಬಕ್ಕೆ ಒಂದು‌ ಮನೆ, ತಾತ್ಕಾಲಿಕ ಕೆಲಸ ನೀಡಬೇಕು. ಈ ಬಗ್ಗೆ ವಾಗ್ದಾನ ಪತ್ರ ನೀಡಬೇಕು. ಅಲ್ಲದೆ ಜಂಗಮ, ಅಂಬಿಗರ ಸಮುದಾಯ ಸೇರಿ ಮುಂದೆ ಉಗ್ರ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

 

 

 

WhatsApp Group Join Now
Telegram Group Join Now
Share This Article
error: Content is protected !!