ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಡೆದ ನೇಹಾ ಕೊಲೆ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಈ ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ.
ಈ ನಡುವೆ ಕಾರಗೃಹದ ಅಧಿಕಾರಿಗಳಿಗೆ ಆರೋಪಿ ಹೇಳಿದ್ದಾನೆ ಎನ್ನಲಾಗಿರುವ ಮಾತುಗಳು ವೈರಲ್ ಆಗುತ್ತಿದ್ದು, ಅಲ್ಲಿ ಆತ ನೇಹಾ ನನ್ನೊಂದಿಗೆ ಸಂಬಂಧವಿತ್ತು, ಆಕೆ ನನ್ನೊಂದಿಗೆ ಮಾತನ್ನು ಬಿಟ್ಟಿದ್ದಳು ಅಂತ ತನ್ನ ನೋವನ್ನು ಹೇಳಿಕೊಂಡಿದ್ದಾಳೆ ಎನ್ನಲಾಗಿದೆ.
ಕೊಲೆಯಾದ ದಿನ ನೇಹಾಳನ್ನು ಭೇಟಿಯಾಗುವ ಸಲುವಾಗಿ ಫಯಾಜ್ ಆಗಮಿಸಿದ್ದ ವೇಳೇಯಲ್ಲಿ ಆಕೆಯನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ. ಇನ್ನೂ ನೇಹಾ ಹಾಗೂ ಫಯಾಜ್ ಇಬ್ಬರು ಕೂಡ ಪ್ರೇಮಿಸುತ್ತಿದ್ದರು ಎನ್ನಲಾಗುತ್ತಿದೆ, ಆದರೆ ಎಲ್ಲವೂ ತನಿಖೆ ಬಳಿ ಮಾತ್ರವೇ ಸತ್ಯ ಹೊರಬರಲಿದೆ.
ಈ ನಡುವೆ ವೈರಲ್ ಆಗುತ್ತಿರುವ ಫೋಟೋಗಳ ಬಗ್ಗೆ ನೇಹಾ ತಾಯಿ ಪ್ರತಿಕ್ರಿಯಿಸಿದ್ದು, ಫೋಟೊಗಳನ್ನು ಎಡಿಟ್ ಮಾಡಿದ್ದಾರೆ, ಸೈನ್ಸ್ ತುಂಬಾ ಮುಂದುವರೆದಿದೆವರಿಬ್ಬರು ಒಂದೇ ಕಾಲೇಜಿನಲ್ಲಿ ಓದುತಿದ್ದರು.
ಕ್ಲಾಸ್ಮೆಟ್ಸ್ ಅನ್ಸುತ್ತೆ ಅವಳು ಈ ಕುರಿತಾಗಿ ಏನು ಹೇಳಿಲ್ಲ. ನಾವು ಅದರ ಕಡೆ ತಲೆ ಹಾಕಬೇಡ ನೀನು ಚೆನ್ನಾಗಿ ಓದು ಅಂತ ಹೇಳಿದ್ದೆವು ನನ್ನ ಮಗಳು ತುಂಬಾ ಬುದ್ದಿವಂತೆ ಆಗಿದ್ದಳು ಅಂತ ಹೇಳಿದ್ದಾರೆ.