ಸಿಂಧನೂರು : ನಗರದ ಸಮೀಪದಲ್ಲಿರುವ ಕೆ. ಹಂಚಿನಾಳ ಕ್ಯಾಂಪ್ ನಲ್ಲಿ ಶನಿವಾರ 9 ನವೆಂಬರ್ 2024 ರಂದು ಡಾ. ಬಿ. ಆರ್. ಅಂಬೇಡ್ಕರ್ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮ ನಡೆಯಿತು ಈ ಕಾರ್ಯಕ್ರಮದಲ್ಲಿ ಸುತ್ತಮುತ್ತ ಹಳ್ಳಿಯ ಮುಖಂಡರು ಊರಿನ ಗುರು ಹಿರಿಯರು ಪ್ರಗತಿಪರ ಚಿಂತಕರು. ದಲಿತ ಮತ್ತು ಪ್ರಗತಿಪರ ಸಂಘಟನೆಯ ಮುಖಂಡರು ಭಾಗವಹಿಸಿದ್ದರು ಈ ಸಂದರ್ಭದಲ್ಲಿ ಗಣ್ಯರಿಗೆ ಮಾಲಾರ್ಪಣೆ ಮಾಡುವ ಮುಖಾಂತರ ಕಾರ್ಯಕ್ರಮ ನಡೆಯಿತು, ಈ ಸಂದರ್ಭದಲ್ಲಿ ಅಂಬಣ್ಣ ಆರೋಲಿಕರ್, ಡಿ. ಎಚ್. ಪೂಜಾರಿ, ಎಚ್. ಎನ್. ಬಡಿಗೇರ್, ಮಾತನಾಡಿ ಬಾಬಾ ಸಾಹೇಬರು ಭಾರತಕ್ಕೆ ವಿಶ್ವವೇ ಮೆಚ್ಚುವಂತಹ ಸಂವಿಧಾನವನ್ನು ಕೊಟ್ಟರು ಆದರೆ ಸಂವಿಧಾನದ ಆಶಯಗಳಿಗೆ ತಕ್ಕಂತೆ ಬದುಕುತ್ತಿದ್ದೇವೆಯೇ ಎಂಬ ಬಗ್ಗೆ ಅವಲೋಕನ ಮಾಡಿಕೊಳ್ಳಬೇಕಾಗಿದೆ
ಸ್ವಾತಂತ್ರ್ಯ ಪೂರ್ವದಲ್ಲಿ ಏನೇನು ಸಮಸ್ಯೆಗಳಿದ್ದವು ಸ್ವಾತಂತ್ರ್ಯ ಬಂದ ಮೇಲೆ ದೇಶ ಯಾವ ರೀತಿ ಇರಬೇಕೆಂಬ ವಿಚಾರದ ಕಲ್ಪನೆ ಇಟ್ಟುಕೊಂಡಂತ ಮಹಾನ್ ವ್ಯಕ್ತಿ ಅಂಬೇಡ್ಕರ್ ಅವರು ಕೇವಲ ದಲಿತರ ಬಗ್ಗೆ ಯೋಚನೆ ಮಾಡದೆ ಸಮಾಜದ ಏಳಿಗೆಗೆ ಜೊತೆಯಾಗಿ ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯುವ ಯೋಚನೆ ಮಾಡಿದವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶತಮಾನಗಳಿಂದ ತುಳಿತಕ್ಕೆ ಒಳಗಾದ ದಲಿತ ಸಮುದಾಯವನ್ನು ಅಂತಂತವಾಗಿ ಮೇಲೆತ್ತುವ ಕೆಲಸ ಮಾಡಿದರೆ ಹೊರತು ಬೇರೆಯವರನ್ನು ತುಳಿಯುವ ಕೆಲಸ ಮಾಡಲಿಲ್ಲ ಅವರ ಆಶಯಗಳಂತೆ ನಡೆದರೆ ಭಾರತ ವಿಶ್ವಗುರುವಾಗಿ ಬೆಳೆಯುವುದನ್ನು ಯಾರಿಂದಲೂ ತಡೆಯಲಾಗದು ಎಂದರು, ಈ ಒಂದು ಶುಭ ಸಂದರ್ಭದಲ್ಲಿ ಭಾಗವಹಿಸಿದ ಹಿರಿಯ ದಲಿತಪರ ಹೋರಾಟಗಾರ ಅಂಬಣ್ಣ ಆರೋಲಿಕರ್, ಡಿ. ಎಚ್. ಪೂಜಾರ್, ಎಚ್. ಎನ್. ಬಡಿಗೇರ್, ಅಲ್ಲಮಪ್ರಭು ಪೂಜಾರ್, ಪಂಪನಗೌಡ ಕಾಂಗ್ರೆಸ್ ಮುಖಂಡರು, ಸೋಮನ ಗೌಡ ಆರ್.ಡಿಸಿಸಿ ಬ್ಯಾಂಕ್ ನಿರ್ದೇಶಕರು, ವೆಂಕಟೇಶ್ ತಾಲೂಕ ಪಂಚಾಯತಿ ಮಾಜಿ ಅಧ್ಯಕ್ಷರು, ಮರಿಯಪ್ಪ ಗೊರೆಬಾಳ, ಪಂಪಾಪತಿ ಕೆ. ಹಂಚಿನಾಳ, ವಿರುಪಣ್ಣ ನಂದವಾಡಗಿ, ಹಸೇನಪ್ಪ ಸಿಂಧನೂರು ಇದ್ದರು.
ವರದಿ: ಬಸವರಾಜ ಬುಕ್ಕನಹಟ್ಟಿ