ವಿಜಯಪುರ : ಜಿಲ್ಲೆ ನಿಡಗುಂದಿ ಪಟ್ಟಣದಲ್ಲಿ ಆಲಮಟ್ಟಿ ರೈಲ್ವೆ ಅಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ಆಲಮಟ್ಟಿ ಇಂದ ಯಾದಗಿರಿ ಮತ್ತು ಆಲಮಟ್ಟಿಯಿಂದ ಚಿತ್ರದುರ್ಗ ಹೊಸ ರೈಲ್ವೆ ಕಾಮಗಾರಿ ಆರಂಭಿಸುವ ಕುರಿತು ತಹಸಿಲ್ದಾರ್ ಎನ ಎಚ ಬಡಿಗೇರ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಪಟ್ಟಣದ ಪ್ರಮುಖ ಹೋರಾಟಗಾರರಿಂದ ಮನವಿ ಸಲ್ಲಿಸಿದ ನಂತರ ಭರತರಾಜ ದೇಸಾಯಿ
ಮಾತನಾಡಿ ಆಲಮಟ್ಟಿಯಿಂದ ಯಾದಗಿರಿ ನೂತನ ರೈಲ್ವೆ ಯೋಜನೆಯನ್ನು ಪ್ರಾರಂಭಿಸಬೇಕು ಮತ್ತು ಆಲಮಟ್ಟಿಯಿಂದ ಚಿತ್ರದುರ್ಗ ಮಾರ್ಗ ಆಲಮಟ್ಟಿ ರೈಲ್ವೆ ನಿಲ್ದಾಣದಲ್ಲಿ ಅಂಡರ್ ಕ್ರಾಸ್ ನಿರ್ಮಾಣ ಮಾಡಬೇಕು ಮತ್ತು ಹುಬ್ಬಳ್ಳಿಯ ನಿಜಾಮುದ್ದೀನ್ ರೈಲನ್ನು ಆಲಮಟ್ಟಿ ಸ್ಟೇಷನ್ ಗೆ ನಿಲುಗಡೆ ಸಲ್ಲಿಸಬೇಕು ಮತ್ತು ಆಲಮಟ್ಟಿ ರೈಲ್ವೆ ನಿಲ್ದಾಣದಲ್ಲಿ ಸುಸಜ್ಜಿತವಾಗಿ ಕೊಠಡಿಗಳನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಶಿವಾನಂದ ಅವಟಿ ಮಾತ್ತನಾಡಿ. ನೂತನ ರೈಲ್ವೆ ಮಾರ್ಗ ಯಶಸ್ವಿಯಾದರೆ ರೈತರಿಗೆ ಕೂಲಿ ಕಾರ್ಮಿಕರಿಗೆ ಮತ್ತು ತಾಲೂಕ ಕೇಂದ್ರವಾದ ನಿಡಗುಂದಿ ಪಟ್ಟಣದ ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಹೊಸ ರೈಲ್ವೆ ಮಾರ್ಗ ಆಗಬೇಕು ಆಗೋತನಕ ನಮ್ಮ ಹೋರಾಟ ನಿರಂತರವಾಗಿ ಮಾಡುತ್ತಿವೆ ಎಂದು ಎಚ್ಚರಿಕೆ ನೀಡಿದರು