ಹಳೆಯ ವರ್ಷ ೨೦೨೫ ಕಳೆದು, ಹೊಸ ವರ್ಷ ೨೦೨೬ ಬಂದಿದೆ. ಹೊಸ ವರ್ಷದಲ್ಲಿ ಸುಖಿಯಾದ ಜೀವನ ಅರಸಿ ರಾಜ್ಯಾದ್ಯಂತ, ಕೋಟ್ಯಂತರ ಜನರು ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ಸುಖಿ ಜೀವನಕ್ಕೆ ಪ್ರರ್ಥನೆ ಸಲ್ಲಿಸಿದರು.
ಗುರುವಾರ ಜನವರಿ ೧ ರಂದು ಜನರು ಸ್ನಾನಾದಿಗಳನ್ನು ಮುಗಿಸಿಕೊಂಡು ಕುಟುಂಬ ಸಮೇತ ದೇವಸ್ಥಾನಗಳಿಗೆ ತೆರಳಿ ತಮ್ಮ ಇಷ್ಟದ ದೇವರಿಗೆ ಮೋರೆ ಹೋಗಿ ತಮ್ಮ ತಮ್ಮ ಉದ್ಯೋಗ, ವ್ಯವಹಾರ, ಹೊಸ ವರ್ಷದಲ್ಲಿ ಸುಸೂತ್ರವಾಗಿ ನಡೆಯಲಿ ಎಂದು ದೇವರಿಗೆ ಶ್ರದ್ಧಾ ಭಕ್ತಿಯಿಂದ ಬೇಡಿಕೊಂಡ ದೃಶ್ಯಗಳು ಸಾಮಾನ್ಯವಾಗಿದ್ದವು.
ಯುವಕ, ಯುವತಿಯರು ಕೂಡ ಹೊಸ ವರ್ಷದಲ್ಲಿ ದೇವಸ್ಥಾನಗಳಿಗೆ ಹೋಗಿ ತಮ್ಮ ಇಷ್ಟದ ದೇವರ ದರ್ಶನ ಪಡೆದು, ತಮಗೆ ಬೇಗ ಮದುವೆಯಾಗಿ ಲೈಫ್ ಸೆಟ್ಲ್ ಆಗಲಿ ಎಂದು ಪ್ರರ್ಥಿಸಿದರು.
ವಿಘ್ನಗಳನ್ನು ನಿವಾರಣೆ ಮಾಡುವ ಗಣೇಶ, ಹಣ, ವಿದ್ಯೆ ಪ್ರಾಪ್ತಿ ಮಾಡುವ ಮಹಾಲಕ್ಷಿö್ಮÃ ದೇವಸ್ಥಾನಗಳು ಸೇರಿದಂತೆ ತಮ್ಮ ಇಷ್ಟದ ದೇವರಿಗೆ ಮೋರೆ ಹೋದ ದೃಶ್ಯಗಳು ಹೊಸ ರ್ಷದ ಮೊದಲ ದಿನದಂದು ಸಾಮಾನ್ಯವಾಗಿದ್ದವು.
ಹೊಸ ವರ್ಷ: ದೇವಸ್ಥಾನಗಳಲ್ಲಿ ವಿಶೇಷ ಪೂಜೆ




