———————————————ವರ‍್ಷಾಚರಣೆ ಇತಿಮಿತಿಯಲ್ಲಿರಲಿ
ರಾಜ್ಯಾದ್ಯಂತ ಜನರು ಹೊಸ ವರ‍್ಷಾಚರಣೆ ಗುಂಗಿನಲ್ಲಿದ್ದಾರೆ. ೨೦೨೫ ನೇ ಸಾಲಿನ ಕಡೆಯ ದಿನ ಇಂದು ಡಿಸೆಂಬರ್ ೩೧. ಪ್ರತಿಬಾರಿಯಂತೆ ಈ ಬಾರಿಯೂ ಕಾಲೆಂಡರ್ ತಿರುಗಿ ೨೦೨೬ ಕ್ಕೆ ಬಂದು ನಿಂತಿದೆ.
ಇAದು ರಾತ್ರಿ ೧೨ ಗಂಟೆ ಆಗುತ್ತಿದ್ದಂತೆಯೇ ೨೦೨೬ ಕ್ಕೆ ನಾವು ಕಾಲಿಡಲಿದ್ದು, ಜೀವನದ ಹೊಸ ಕನಸುಗಳೊಂದಿಗೆ ಮುನ್ನುಗ್ಗುತ್ತೇವೆ. ೨೦೨೫ ರಲ್ಲಿ ಜನರು ಸಾಕಷ್ಟು ಸುಖ: ದುಖ ಎರಡನ್ನೂ ಅನುಭವಿಸಿರುತ್ತಾರೆ. ಆದರೆ ಮುಂದಿನ ಹೊಸ ವರ‍್ಷ ೨೦೨೬ ರ ಜನ ಜೀವನದಲ್ಲಿ ಸುಖ; ಶಾಂತಿ ನೆಮ್ಮದಿ ತರಲೆಂಬ ಮಹಾದಾಸೆಯೊಂದಿಗೆ ನಾವು ಹೊಸ ವರ‍್ಷಕ್ಕೆ ಕಾಲಿಡುತ್ತಿದ್ದೇವೆ.
ಜನರ ಜೀವನ ಚೆನ್ನಾಗಿರಲಿ ಎಂಬ ಆಸೆ ಎಲ್ಲರಲ್ಲೂ ಇರುವುದು ಸಾಮಾನ್ಯ. ನಾವೆಲ್ಲರೂ ಜೀವನದಲ್ಲಿ ಸುಖ; ಶಾಂತಿ ಬರಲೆಂದೇ ಹಾರೈಸುತ್ತೇವೆ. ಯಾರಿಗೂ ದು:ಖ ಬೇಕಾಗಿಲ್ಲ. ಆದರೆ ಜೀವನ ಎಂದ ಮೇಲೆ ಸುಖ ಒಂದೇ ಬರಲಾರದು. ಸುಖ: ದು:ಖ ಸಮ, ಸಮನಾಗಿ ಬರುವುದು ನಿಸರ‍್ಗ ನಿಯಮ. ಅದುವೇ ಜೀವನ.
ಹೊಸ ವರ‍್ಷದಲ್ಲಿ ನಾವೆಲ್ಲ ಸುಖವನ್ನೇ ಬಯಸುತ್ತೇವೆಯಾದರೂ ಜೀವನದ ಭಾಗವಾದ ದು:ಖವೂ ಸಮ್ಮೀಶ್ರವಾಗಿ ಬರುವುದು. ಬಂದ ಸುಖವನ್ನು ಎಂಜಾಯ್ ಮಾಡುತ್ತ, ಬಂದ ದು:ಖವನ್ನೂ ಎದುರಿಸುತ್ತ ಹೊಸ ವರ‍್ಷವನ್ನೂ ಮತ್ತಷ್ಟು ದೃಢವಾದ ಮನಸ್ಸಿನಿಂದ ಗಟ್ಟಿ ನರ‍್ಧಾರಗಳಿಂದ ಎದುರಿಸಲು ನಾವೆಲ್ಲ ಸಜ್ಜಾಗಬೇಕು.
ವರ‍್ಷಾಚರಣೆ ಕೇಡು ಮಾಡದಿರಲಿ: ಹೊಸ ವರ‍್ಷಾಚರಣೆ ಎಂಬುದು ಪ್ರತಿ ವರ‍್ಷ ಸಾಮಾನ್ಯ. ಅದನ್ನು ಇತಿ ಮಿತಿಯಲ್ಲಿ ಮಾಡಿಕೊಂಡು ನಷ್ಟ, ನೋವುಗಳು ಆಗದಂತೆ ಹೊಸ ವರ‍್ಷಾಚರಣೆ ಮಾಡೋಣ. ಹೊಸ ವರ‍್ಷ ನಮಗೆಲ್ಲ ಒಳ್ಳೆಯದು ಮಾಡಲಿ ಎಂದು ಆ ದೇವರಲ್ಲಿ ಪ್ರರ‍್ಥಿಸೋಣ.
ಹೊಸ ವರ‍್ಷ ನಮಗೆಲ್ಲ ಒಳೀತು ಮಾಡಲಿ




