Ad imageAd image

ಮಹಿಳಾ ಘಟಕ ಜಮಾತೆ ಇಸ್ಲಾಮಿ ಹಿಂದ ವತಿಯಿಂದ ಸುದ್ದಿ ಗೋಷ್ಠಿ

Bharath Vaibhav
ಮಹಿಳಾ ಘಟಕ ಜಮಾತೆ ಇಸ್ಲಾಮಿ ಹಿಂದ ವತಿಯಿಂದ ಸುದ್ದಿ ಗೋಷ್ಠಿ
WhatsApp Group Join Now
Telegram Group Join Now

ಇಲಕಲ್ :- ನಾವು ದೇಶದಾದ್ಯಂತ 78ನೇ ಸ್ವಾತಂತ್ರೋತ್ಸವವನ್ನು ಬಹಳ ಸಂಭ್ರಮದಿಂದ ಆಚರಿಸಿದೆವು. ಆದರೆ ದೇಶದ ಜನತೆಗೆ ಸ್ವಾತಂತ್ರ್ಯ ದೊರಕಿದೆಯೇ ? ಸಾಮಾಜಿಕ ಸ್ಥಿತಿ ಮತ್ತು ಸಮೂಹದಲ್ಲಿ ಎಷ್ಟರಮಟ್ಟಿಗೆ ಸ್ವಾತಂತ್ರ್ಯದ ಕಲ್ಪನೆಯು ಕಾಣಸಿಗುತ್ತದೆ ಎಂಬುದರ ಕುರಿತು ಆಲೋಚಿಸಬೇಕಾದ ಅಗತ್ಯವಿದೆ.

ಮಾನವ ಹಕ್ಕುಗಳ ಘೋಷಣೆಯ ಪ್ರಕಾರ ಸ್ವಾತಂತ್ರ್ಯದ ವ್ಯಾಖ್ಯಾನದಲ್ಲಿ ಅದು ಯಾರಿಗೂ ಹಾನಿಕರ ಆಗಿರಬಾರದು ಎಂಬ ಅಂಶವು ಸೇರಿದೆ ಪ್ರಸಕ್ತ ಸಮಾಜವು ಅನೇಕ ರೀತಿಯ ಸಮಸ್ಯೆಗಳಲ್ಲಿ ತೊಳಲಾಡುತ್ತಿದೆ ಎಂಬುದನ್ನು ನಾವು ಕಾಣುತ್ತಿದ್ದೇವೆ.

ಸಾಮ್ರಾಜ್ಯಶಾಹಿ ಶಕ್ತಿಗಳು ಸಾಂಸ್ಕೃತಿಕ ಮತ್ತು ಆರ್ಥಿಕ ನೆಲೆಯಲ್ಲಿ ಮಾನವರ ಹಕ್ಕುಗಳನ್ನು ಕಸಿದುಕೊಂಡು, ಅವರನ್ನು ಆರ್ಥಿಕ ಗುಲಾಮರನ್ನಾಗಿ ಮಾಡಿದೆ. ಜೀವನದ ಮಟ್ಟ, ಸಮಾನತೆ ಗ್ಲಾಮರ್ ಇತ್ಯಾದಿಗಳ ಹೆಸರಿನಲ್ಲಿ ಕೊಳ್ಳುಬಾಕತೆಯ ಬಲೆಯಲ್ಲಿ ಬೀಳಿಸಿ ಅವರನ್ನು ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಗುಲಾಮರನ್ನಾಗಿ ಮಾಡಲಾಗಿದೆ.

ಬಂಡವಾಳಶಾಹಿ ಶಕ್ತಿಗಳ ಯೋಜನೆಗಳು ಸಮಾನತೆ ಮತ್ತು ಸ್ವಾತಂತ್ರ್ಯದ ಜಾಡಿನಲ್ಲಿ ಆಧುನಿಕ ಯುಗವನ್ನು ದಾರಿ ತಪ್ಪಿಸಿದೆ. ಮೊಬೈಲ್ ಫೋನ್, ಇಂಟರ್ನೆಟ್, ಫೇಸ್ಟುಕ್, ಇನ್ಸಾಗ್ರಾಮ್ ಮುಂತಾದ ಸಾಮಾಜಿಕ ಜಾಲತಾಣಗಳ ಮೂಲಕ ಮನೆ ಮೊಹಲ್ಲಗಳು ಮಾತ್ರವಲ್ಲ ಎಲ್ಲ ಕಡೆಗಳಲ್ಲೂ ಅಶ್ಲೀಲತೆಯು ಸಾಮಾನ್ಯವಾಗಿ ಬಿಟ್ಟಿದೆ .

ಇಂದು ಹೆಚ್ಚುತ್ತಿರುವ ನಗ್ನತೆ ಜೂಜು ಮಧ್ಯಪಾನ ಮತ್ತು ಮಾದಕ ವಸ್ತುಗಳ ವ್ಯಸನ, ಲಿವಿಂಗ್ ರಿಲೇಶನ್ಶಿಪ್, ಸಲಿಂಗ ಕಾಮ ಹಾಗೂ ವೇಶ್ಯಾವಾಟಿಕೆಗಳಂತಹ ಕೆಡುಕುಗಳು ಒಂದೆಡೆ ಸಮಾಜದ ಹದಗೆಡುತ್ತಿರುವ ನೈತಿಕ ಮಟ್ಟಕ್ಕೆ ಕನ್ನಡಿ ತೋರಿಸುತ್ತಿದ್ದರೆ, ಇನ್ನೊಂದೆಡೆ ನೈತಿಕ,ಸಾಮಾಜಿಕ ಮತ್ತು ಜೈವಿಕ ಮಟ್ಟದಲ್ಲಿ ಅಸಂಖ್ಯ ಸಮಸ್ಯೆಗಳನ್ನು ಹುಟ್ಟು ಹಾಕಿದೆ .

ಇಂದು ಯುವ ಜನಾಂಗವು ಪಥಭ್ರಷ್ಟವಾಗುತ್ತಿದೆ. ಕುಟುಂಬಗಳು ಛಿದ್ರಗೊಳ್ಳುತ್ತಿವೆ ಸಮಾಜದ ಸ್ಥಿತಿಗತಿಯು ಚಿಂತಾಜನಕವಾಗಿ ಬಿಟ್ಟಿದೆ.ಎಂದು ಜಮಾತೆ ಇಸ್ಲಾಮಿ ಹಿಂದ ಮಹಿಳಾ ಘಟಕ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು ಇದೆ ಸಂದರ್ಭದಲ್ಲಿ
ಖುಲ್ಸೂಮ್ ಅಬೂಬಕರ ಉಡುಪಿ,
ಯಾಸ್ಮೀನ ಅಬೂಬಕರ ಉಡುಪಿ,
ಫರ್ಜಾನಾ ಢಾಲಾಯತ,
ಹನೀಫಾ ಹುಣಚಗಿ,
ಖಾಲೀದಾ ಕರ್ನೂಲ್,
ಯಾಸ್ಮೀನ್ ಗಬ್ಬೂರ,
ನುಸ್ರತ್ ಜಹಾಂ ಮೊಮಿನಾತಿ,
ಜಿ,ಆಯ್,ಓ ರಾಜ್ಯಾಧ್ಯಕ್ಷೆ ಸೀಮಾ ತಾಜ್ ಉಪಸ್ಥಿತರಿದ್ದರು

ವರದಿ ದಾವಲ್ ಶೇಡಂ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!