Ad imageAd image

ಸುದ್ದಿ ಸಮಾಚಾರ: ಇಂದಿನಿಂದ ಆಸ್ತಿಗಳ ನೋಂದಣಿ ಶುಲ್ಕ ಹೆಚ್ಚಳ

Bharath Vaibhav
ಸುದ್ದಿ ಸಮಾಚಾರ: ಇಂದಿನಿಂದ ಆಸ್ತಿಗಳ ನೋಂದಣಿ ಶುಲ್ಕ ಹೆಚ್ಚಳ
WhatsApp Group Join Now
Telegram Group Join Now

ಬೆಂಗಳೂರು:  ಇಂದಿನಿಂದ (ಭಾನುವಾರದಿಂದಲೇ) ಜಾರಿಗೆ ಯಾಗುವಂತೆ ಹಲವು ಆಸ್ತಿಗಳ ನೋಂದಣಿ ಶುಲ್ಕ ಹೆಚ್ಚಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಇದರೊಂದಿಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ರಾಜ್ಯದ ಜನತೆಗೆ ಬೆಲೆ ಏರಿಕೆ  ಆಘಾತ ನೀಡಿದೆ. 1908ರ ನೋಂದಣಿ ಕಾಯ್ದೆಯ ಅಡಿಯಲ್ಲಿ ನೋಂದಣಿ ಶುಲ್ಕವನ್ನು ಪರಿಷ್ಕರಿಸಲಾಗಿದ್ದು, ನೋಂದಣಿ ಮತ್ತು ಮುದ್ರಾಂಕ ಶುಲ್ಕ ಹೆಚ್ಚಳದ ಹೊಸ ದರಗಳು ಇಂದು ಭಾನುವಾರದಿಂದಲೇ ಜಾರಿಯಾಗಲಿವೆ. ಕಂದಾಯ ಇಲಾಖೆ ಶುಕ್ರವಾರ ಹೊರಡಿಸಿದ ಅಧಿಸೂಚನೆಯ ಪ್ರಕಾರ  ಶುಲ್ಕವನ್ನು ಶೇ. 1 ರಿಂದ ಶೇ.2 ರಷ್ಟು ಹೆಚ್ಚಿಸಲಾಗಿದೆ.

ರಾಜ್ಯದ ಹಲವೆಡೆ ಮುಂದುವರೆದ ಮಳೆ ಅಬ್ಬರ

ಬೆಂಗಳೂರು: ರಾಜ್ಯದ ಕೆಲವು ಕಡೆಗಳಲ್ಲಿ ಇಂದು ಬೆಳಗ್ಗೆಯಿಂದ ಮಳೆ ಸುರಿಯುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ವಿವಿಧ ಜಿಲ್ಲೆಗಳಿಗೆ ಎಚ್ಚರ ವಹಿಸುವಂತೆ ಸೂಚಿಸಿದೆ.

ಮಳೆ ಹೆಚ್ಚು ಸುರಿಯುವ ಪ್ರದೇಶಗಳಿಗೆ  ಹಾಗೂ ಸಾಧಾರಣದಿಂದ ಮಳೆ ಆಗುವ ಪ್ರದೇಶಗಳಿಗೆ ಹವಾಮಾನ ಇಲಾಖೆಯ ಪ್ರತ್ಯೇಕವಾಗಿ ಸೂಚನೆಗಳನ್ನು ಹೊರಡಿಸಿದ್ದು ಎಚ್ಚರ ವಹಿಸುವಂತೆ ಹೇಳಿದೆ.

ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನಲ್ಲಿ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಭಾಲ್ಕಿ ತಾಲ್ಲೂಕಿನ ಬಾದಲ್‌ಗಾಂವ್-ಚೊಂಡಿಮುಖೇಡ್‌ನಲ್ಲಿರುವ ದಾಡಗಿ ಸೇತುವೆ ಸೇರಿದಂತೆ ಹಲವಾರು ಸೇತುವೆಗಳ ಮೇಲೆ ನೀರು ಉಕ್ಕಿ ಹರಿದು ಸಂಚಾರ ಸಂಪೂರ್ಣ ನಿಂತು ಹೋಗಿದೆ.

‘ಪರಮ ಸುಂದರಿ’ ಯ ಕೇಶ ವಿನ್ಯಾಸ

ಖ್ಯಾತ ಬಾಲಿವುಡ್ ನಟಿ ಜಾನ್ವಿ ಕಪೂರ್ ತಮ್ಮ ಮುಂಬರುವ ಚಿತ್ರ ‘ಪರಮ ಸುಂದರಿ’ ಗೆ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದು, ಇದಕ್ಕೆ ಮುನ್ನ ಅವರು ತಮ್ಮ ವಿಶಿಷ್ಠ ಕೇಶ ವಿನ್ಯಾಸದಿಂದ ಸುದ್ದಿಯಾಗಿದ್ದಾರೆ.

ತಮ್ಮ ನೀಳವಾ ಕೇಶ ರಾಶಿಗೆ ಅವರು ಟಿಸು ಪೇಪರ್ ನಿಂದ ವಿನ್ಯಾಸ ಮಾಡಿಕೊಂಡಿದ್ದು, ವಿಶಿಷ್ಠ ಫ್ಯಾಶನ್ ನಿಂದ ಸುದ್ದಿ ಮಾಡಿದ್ದಾರೆ. ‘ಪರಮ ಸುಂದರಿ’ ಯಲ್ಲಿ ಸಿದ್ದಾರ್ಥ್ ಅವರೊಂದಿಗೆ ನಟಿಸುತ್ತಿರುವ ಜಾನ್ವಿ ಕಪೂರ್ ತಮ್ಮ ಮುಂಬರುವ ಚಿತ್ರ ಪ್ರಚಾರಕ್ಕಾಗಿಯೂ ಸಾಕಷ್ಟು ಶ್ರಮಿಸುತ್ತಿದ್ದಾರೆ.

———————————————————-

ಗಣೇಶ್ ಮಹೋತ್ಸವದ ಪ್ರಯುಕ್ತ ಡಾ.ಬಸವಲಿಂಗ ಅವದೂತರಿಂದ ಪ್ರವಚನ

ಚಿಂಚೋಳಿ : ತಾಲೂಕಿನ ಹಸರಗುಂಡಗಿ ಗ್ರಾಮದಲ್ಲಿ 3ನೇ ವರ್ಷದ ಗಣೇಶ್ ಮಹೋತ್ಸವದ ಪ್ರಯುಕ್ತ ಡಾ.ಬಸವಲಿಂಗ ಅವದೂತರಿಂದ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಸಾನಿಧ್ಯವನ್ನು ಜಹಿರಭಾದ ಮಲ್ಲಯ್ಯಗಿರಿ ಹಾಗೂ ದೇಗಲಮಡಿ ಮತ್ತು ಬಸವಕಲ್ಯಾಣ ಆಶ್ರಮದ ಶ್ರೀ ಡಾ.ಬಸವಲಿಂಗ ಅವಧೂತರು, ವಹಿಸಿಕೊಂಡು ಆಶೀರ್ವಚನ ನೀಡಿದರು.  ಶ್ರೀ ರಾಮ್ ಸೇನೆ ಗಣೇಶ ಯುವಕ ಮಂಡಳಿಯವರು ಕಾರ್ಯಕ್ರಮ ಆಯೋಜಿಸಿದ್ದಾರೆ.

ಹಸರಗುಂಡಗಿ ಗ್ರಾಮದ ಮುಖಂಡರಾದ ರಾಜಶೇಖರ ನಿಪ್ಪಾಣಿ, ರಾಹುಲ್.ವಿ.ರಾಯರೆಡ್ಡಿ,ರಾಜು ನೀರ್ಣ, ವೀರೇಶ್ ಚಿಂಚೋಳಿಕರ್, ಅನಿಲ್ ಹೇಮರೆಡ್ಡಿ, ಆಕಾಶ್ ಹೀರಾಪುರ್,ಹನಮಂತ ಹತ್ತಿ,ಮುರಳಿಧರ್ ಪಾಟೀಲ,ಶ್ರೀಕಾಂತ ವಡ್ಡನಕೇರಿ,ರವಿ ಹಾಬ್ಬುಲ್, ಚನ್ನವೀರ್ ಪುರಾಣಿಕ, ಆಕಾಶ ಕುಡಮಾಬಲ್, ಗುಂಡಯ್ಯ ಮಡಪತಿ, ಸಚಿನ ಉಪ್ಪಿನ,ಕಿರಣ ವಡ್ಡನಕೇರಿ, ಮತ್ತು ಅನೇಕ ಹಸರಗುಂಡಗಿ ಭಾಗವಹಿಸಿದ್ದರು. —-  ವರದಿ: ಸುನಿಲ್ ಸಲಗರ

ಮೊರಾರ್ಜಿ ಶಾಲೆಗಳಿಂದ ಬಡ ವಿದ್ಯಾರ್ಥಿಗಳ ಕನಸು ಸಾಕಾರ: ಶಾಸಕ ರಾಜು ಕಾಗೆ

ಕಾಗವಾಡ: ರಾಜ್ಯ ಸರ್ಕಾರ ಶಿಕ್ಷಣಕ್ಕೆ ಬಹಳಷ್ಟು ಪ್ರೋತ್ಸಾಹ ನೀಡುತ್ತಿದ್ದು, ಮೊದಲೆಲ್ಲ ಜಿಲ್ಲೆಗೊಂದು, ತಾಲೂಕಿಗೊಂದು ಇರುತ್ತಿದ್ದ ನವೋದಯ, ಮೊರಾರ್ಜಿ ವಸತಿ ಶಾಲೆಗಳನ್ನು ಸರ್ಕಾರ ಇಂದು ಗ್ರಾಮೀಣ ಭಾಗದ ಹಳ್ಳಿ ಹಳ್ಳಿಗಳಲ್ಲಿಯೂ ಪ್ರಾರಂಭಿಸಿ, ಬಡ ವಿದ್ಯಾರ್ಥಿಗಳ ಶಿಕ್ಷಣದ ಕನಸನ್ನು ಸಾಕಾರಗೊಳಿಸಿದೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದ್ದಾರೆ.

ಅವರು ತಾಲೂಕಿನ ಐನಾಪೂರ ಪಟ್ಟಣದಲ್ಲಿ ಅಲ್ಪಸಂಖ್ಯಾತರ ಇಲಾಖೆಯ ಮುರಾರ್ಜಿ ವಸತಿ ಶಾಲೆಯ ನೂತನ ಕಟ್ಟಡದ ಭೂಮಿ ಪೂಜೆ ನೆರವೇರಿಸಿ, ಮಾತನಾಡುತ್ತಿದ್ದರು. ಅವರು, ಕ್ಷೇತ್ರದ ಕಲವಗುಡ್ಡ, ಬಮ್ಮನಾಳ, ಹಣಮಾಪೂರ, ಕಲೂತಿ, ತಾಂವಶಿ ಗ್ರಾಮಗಳಲ್ಲಿ ವಿವಿಧ ಸಮುದಾಯ ಭವನಗಳ ನಿರ್ಮಾಣ ಹಾಗೂ ಸಂಬರಗಿ ಗ್ರಾಮದಲ್ಲಿ ಜೆಜೆಎಂ 2ನೇ ಹಂತದ ಕಾಮಗಾರಿಗೆ ಚಾಲನೆ ನೀಡಿದರು.

ಈ ಸಮಯದಲ್ಲಿ ಕವಲಗುಡ್ಡದ ಸಿದ್ದಾಶ್ರಮದ ಅಮರೇಶ್ವರ ಮಹಾರಾಜರು, ಎಎಇ ವೀರಣ್ಣಾ ವಾಲಿ, ಜ್ಯೋತಿ ನಗಾರೆ, ಮೊರಾರ್ಜಿ ಶಾಲೆಯ ಪ್ರಾಚಾರ್ಯ ಯಲ್ಲಪ್ಪಾ ಕೊಂಗAಟ್ಟಿ, ಗಿರೀಶ ಕಲಮಡಿ, ಮುಖಂಡರಾದ ಪ್ರವೀಣ ಗಾಣಿಗೇರ, ಅರುಣ ಗಾಣಿಗೇರ, ಸಂಜೀವ ಭಿರಡಿ, ಕುಮಾರ ಜಯಕರ, ಅರವಿಂದ ಕಾರ್ಚಿ, ವಿನಾಯಕ ಬಾಗಡಿ, ರಾವಸಾಹೇಬ ಐಹೊಳೆ, ಬಸನಗೌಡಾ ಪಾಟೀಲ (ಬಮ್ಮನಾಳ), ಗುರು ಮಡಿವಾಳ, ಮಮತಾ ಕನ್ಸಟ್ರಕ್ಷನ್‌ನ ಗುತ್ತಿಗೆದಾರ ವಾಸುದೇವ, ಗುತ್ತಿಗೆದಾರಾದ ತಿಪ್ಪಣ್ಣಾ ಬಜಂತ್ರಿ, ಎಸ್.ಬಿ. ಪೂಜಾರಿ ಉಪಸ್ಥಿತರಿದ್ದರು.

ವರದಿ: ಚಂದ್ರಕಾಂತ ಕಾಂಬಳೆ

 

 

 

 

 

 

 

 

 

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!