Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ,ಕಾಂಗ್ರೇಸ್ಸಿನಿಂದ ಪೂರ್ವಭಾವಿ ಸಭೆ

Advertisement
ಸಿರುಗುಪ್ಪ : -ಈಶಾನ್ಯ ಪದವೀಧರ ಕ್ಷೇತ್ರ ವಿಧಾನ ಪರಿಷತ್ ಚುನಾವಣೆ ನಿಮಿತ್ತ ನಗರದ ಜಿ.ಎಸ್.ಲಾಡ್ಜಿನ ಸಭಾಂಗಣದಲ್ಲಿ ಕಾಂಗ್ರೇಸ್ ತಾಲೂಕು ಘಟಕದ ವತಿಯಿಂದ ನಡೆದ ಪೂರ್ವಭಾವಿ ಸಭೆ ಹಾಗೂ ರಾಜೀವ್ ಗಾಂಧೀ ಅವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಶಾಸಕ ಬಿ.ಎಮ್.ನಾಗರಾಜ ಅವರು ಜ್ಯೋತಿ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು.


ನಂತರ ಮಾತನಾಡಿ ತಾಲೂಕಿನ ಎಲ್ಲಾ ಕಾರ್ಯಕರ್ತರು ಹಾಗೂ ಮುಖಂಡರು ಶ್ರಮವಹಿಸಿ ಅವರಿಗೆ ಕಳೆದ ಚುನಾವಣೆಯಲ್ಲಿ ಹೆಚ್ಚಿನ ಮತಗಳನ್ನು ಕೊಟ್ಟಿದ್ದೇವೆ. ಇದು ಬುದ್ದಿವಂತರ ಚುನಾವಣೆಯಾಗಿದೆ.



ಜಾತಿ, ಮತ, ಕೋಮುದ್ವೇಷವನ್ನು ಹತ್ತಿಕ್ಕಿ ದೇಶದ ಸಮಗ್ರ ಅಭಿವೃದ್ದಿಯ ದೃಷ್ಟಿಕೋನವನ್ನು ಹೊಂದಿರುವ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾದ ಡಾ.ಚಂದ್ರಶೇಖರ ಬಿ.ಪಾಟೀಲ್ ಅವರಿಗೆ ಮತವನ್ನು ಹಾಕುವುದರೊಂದಿಗೆ ಅವರನ್ನು ಬಹುಮತದೊಂದಿಗೆ ಗೆಲ್ಲಿಸಬೇಕು.ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷವು ಐದು ಗ್ಯಾರಂಟಿಗಳ ಮೂಲಕ ಆಡಳಿತವನ್ನು ಒಂದು ವರ್ಷ ಪೂರೈಸಿದೆ. ಉತ್ತಮ ಆಡಳಿತದ ನಿರ್ಧಾರಗಳಿಗೆ ವಿಧಾನಪರಿಷತ್ತಿನಲ್ಲಿಯೂ ಸದಸ್ಯರ ಬಲವೂ ಅಗತ್ಯವಿದೆ. ಆದ್ದರಿಂದ ನಮ್ಮ ಅಭ್ಯರ್ಥಿಗೆ ಮಾತ್ರ ಪ್ರಾಶಸ್ತ್ಯದ ಮತ ಹಾಕಬೇಕು.

ಇದೇ ವೇಳೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ನಿಟ್ಟೂರು ಕರಿಬಸಪ್ಪ, ಈಶಾನ್ಯ ಪದವೀಧರ ಕ್ಷೇತ್ರದ ತಾಲೂಕು ಘಟಕದ ಅಧ್ಯಕ್ಷ ಹೆಡಗಿನಾಳ್ ವೆಂಕಟೇಶ ನಾಯಕ, ಪ್ರಧಾನ ಕಾರ್ಯದರ್ಶಿ ದೊಡ್ಡನಗೌಡ,ಮುಖಂಡರಾದ ಬಿ.ಎಮ್.ಸತೀಶ್, ಕೊಡ್ಲೆ ಮಲ್ಲಿಕಾರ್ಜುನ, ಶಫಿ ಹಾಗೂ ಇನ್ನಿತರ ಪದಾಧಿಕಾರಿಗಳು ಇದ್ದರು.

ವರದಿ.ಶ್ರೀನಿವಾಸ ನಾಯ್ಕ
Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಿಂಬಾಬ್ವೆ ವಿರುದ್ಧ ಸುಲಭವಾಗಿ ಗೆದ್ದ ಭಾರತ ಕಾಂಗ್ರೆಸ್ ತಿಗಣೆಗಳು ಹೋಗಿ ಜಿರಳೆಗಳ ಜೊತೆ ಸೇರಿಕೊಂಡಿದ್ದಾರೆ : ಪ್ರತಾಪ್ ಸಿಂಹ ನಂದಿನಿ ತುಪ್ಪದ ಬೆಲೆ ಪ್ರತಿ ಕೆಜಿಗೆ 15 ರೂ. ಹಾಗೂ ಬೆಣ್ಣೆಯ ದರ ಪ್ರತಿ ಕೆಜಿಗೆ 22 ರೂ. ಹೆಚ್ಚಳ ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲಿಯೇ ಮಯಾಂಕ ಯಾದವ್‌ಗೆ ವಿಕೆಟ್  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆ ಅಂಗಳದಲ್ಲಿ ಗಿಡ ನಾಟಿ ಕಾರ್ಯಕ್ರಮ ಜಾತ್ರೆಗೆ ಹೋಗುವ ವಿಚಾರಕ್ಕೆ ದಂಪತಿ ನಡುವೆ ಜಗಳ : ದೂದಗಂಗಾ ನದಿಗೆ ಹಾರಿದ ಪತ್ನಿ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವಂತಿಲ್ಲ : ರಾಜ್ಯ ಸರ್ಕಾರ ಆದೇಶ ಹೆಣ್ಣು ಮಗು ಎಂಬ ಕಾರಣಕ್ಕೆ ನೀರಿನ ಸಂಪ್ ಗೆ ಎಸೆದು ಕೊಂದು ಪಾಪಿ ತಂದೆಸುಳ್ಳು ಸುದ್ದಿ ಪ್ರಕಟ : ಸಂಪಾದಕ ಆನಂದ್ ಕೌಶಿಕ್ 6 ತಿಂಗಳು ಸಜೆ ಮತ್ತು 1 ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಲಯಬಾಗಲಕೋಟೆ ಬೇಕರಿ ತಪಾಸಣೆ ತಾಜಾ ಎಣ್ಣೆ ಬಳಸಿ : ಸಿಲಿಂಡರ್ ಹೊರಗಿಡಿ ಉಪಲೋಕಾಯುಕ್ತರ ಎಚ್ಚರಿಕೆ