Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

 ಪಟ್ಟಣದ ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ,ಒಕ್ಕೂಟ ಪದಾಧಿಕಾರಗಳ ಸಮಾವೇಶ.

Advertisement
ಬಾಗಲಕೋಟೆ:-ಸಮಾವೇಶ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಡಾ " ವಿಷ್ಣುವರ್ಧನ. ಕುಲಪತಿಗಳು ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾಲಯ ಬಾಗಲಕೋಟ ರವರು ಕಾರ್ಯಕ್ರಮ ಉದ್ಘಾಟಿಸಿದರು.

ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಕುಲಪತಿಗಳು ಸಂಸ್ಥೆಯು ಸರ್ಕಾರ ಮಾಡುವ ಕಾರ್ಯಕ್ರಮಗಳಿಗಿಂತ ಹೆಚ್ಚಿನ ಸೇವಾ ಕಾರ್ಯ ನಿರ್ವಹಿಸಿ ಬಡ ಹಾಗೂ ನಿರ್ಗತಿಕರ ಜೀವನಕ್ಕೆ ಆಶ್ರಯದಾತವಾಗಿ ಕಾರ್ಯ ನಿರ್ವಹಿಸುತ್ತಿದೆ ನಮ್ಮ ವಿಶ್ವವಿದ್ಯಾಲಯ ಸದಾಕಾಲ ನಿಮ್ಮ ಜೊತೆಗೆ ಇದೆ ನಿಮ್ಮ ಸ್ವ ಸಹಾಯ ಸಂಘಗಳ ಸದಸ್ಯರು ಪ್ರಯೋಜನ ಪಡೆಯುವಂತೆ ತಿಳಿಸಿದರು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖಾ ಸಹ ಪ್ರಭಂದಕರು ರಮೇಶ ಬಾಬು ಮಾತಾಡಿ, ಈಗಿನ ಸಮಯದಲ್ಲಿ ಒಂದು ಸಣ್ಣ ಸಾಲ ಕೊಡಬೇಕು ಅಂದ್ರೆ ಹತ್ತಾರು ಕಾಗದ ಪತ್ರ ಬೇಕಾಗುತ್ತೆ ಆದರೆ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ ಸಂಸ್ಥೆಯ ಗ್ಯಾರಂಟಿಯಾಗಿ ಇವತ್ತು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಾಲ ಸಿಗುವಂತಾಗಿದೆ, ಅವಶ್ಯಕತೆ ಇದ್ದವರಿಗೆ ಸಹಾಯ ಆಗಬೇಕು ಅನ್ನೋ ದೃಷ್ಟಿಯಿಂದ ಸಂಸ್ಥೆ ಮುಖಾಂತರ ಸಾಲ ಕೊಡ್ತಾ ಇರೋದು ಇದೊಂದು ಕಲ್ಪ ವೃಕ್ಷವಾಗಿದೆ ಎಂದು ಹೆಮ್ಮೆ ಯಿಂದ ಹೇಳಿದರು.

ಸಂಪನ್ಮೂಲ ವ್ಯಕ್ತಿ ಕನ್ನಡ ಸಾಹಿತ್ಯ ಪರಿಷತ್ ಬಾಗಲಕೋಟ ಸಂಚಾಲಕರಾದ ಹನುಮಂತ ಹೊಸಕೋಟೆ ಮಾತನಾಡಿ, ಮಹಿಳಾ ಸಬಲೀಕರಣ, ಗ್ರಾಮೀಣ ಭಾಗದ ಅಭ್ಯುದಯಕ್ಕೇ ಸಂಸ್ಥೆ ಮಾಡುತ್ತಿರುವ ಕಾರ್ಯ ಅಸಮಾನ್ಯವಾದದ್ದು, ಪೂಜ್ಯ ಖಾವಂದರ ರಾಜ್ಯಸಭಾ ಸದಸ್ಯರ ಅನುದಾನ ಮೊದಲನೇ ಹಂತದ 2.5 ಕೋಟಿ ಹಾಗೂ ಎರಡೇ ಹಂತದ 2.5 ಕೋಟಿ ರೂಪಾಯಿ ಅನುದಾನವನ್ನು ಬೀದರ ಜಿಲ್ಲೆಯ ಕ್ಷೀರ ಕ್ರಾಂತಿಗೆ ಮೀಸಲು ಇಟ್ಟು ಇವತ್ತು ಅವನತಿಯ ಅಂಚಿನಲ್ಲಿದ್ದ ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಗೂ ಕಲಬುರ್ಗಿ ವಿಭಾಗೀಯ ಸಂಸ್ಥೆ ಇವತ್ತು 6 ಸಾವಿರ ಲೀಟರ್ ಹಾಲಿನಿಂದ 58 ಸಾವಿರ ಲೀಟರ್ ಪ್ರತಿ ದಿನಕ್ಕೆ ಹೋಗ್ತಾ ಇದೇ ಇದು ಹೆಮ್ಮೆಯ ಸಂಗತಿ ನಿರ್ಗತಿಕರಿಗೆ ಮಾಶಾಸನ, ವಿಕಲ ಚೇತನರಿಗೆ ವೀಲ್ ಚೇರ್, ವಾಟರ್ ಬೆಡ್, ವೃದ್ಯಾಪ್ಯ ವೇತನ, ವಾತ್ಸಲ್ಯ ಮನೆ ಕಟ್ಟಿಕೊಡೋದು, ತಾಲೂಕಿನ 5 ಕೆರೆಗಳನ್ನು ಪುನಃಚೇತನ ಗೊಳಿಸಿದ್ದು, 135 ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ, ಹೀಗೆ ಸಾಮಾಜಿಕ ಕಾರ್ಯ ಮಾಡ್ತಾ ಇರೋದು ಬಹಳ ಹೆಮ್ಮೆಯ ವಿಷಯ, ಸಂಸ್ಥೆಯಿಂದ ಸಹಾಯ ಪಡೆದ ತಾವೆಲ್ಲರೂ ಸಂಸ್ಥೆಯ ಬೆನ್ನಿಗೆ ನಿಲ್ಲಬೇಕು ಅವರು ಮಾಡುತ್ತಿರುವ ಮಹತ್ವದ ಕಾರ್ಯಕ್ಕೆ ಶಕ್ತಿ ತುಂಬಬೇಕು ಎಂದು ತಿಳಿಸಿದರು.

ಸಂಸ್ಥೆಯ ಜಿಲ್ಲಾ ನಿರ್ದೇಶಕರು ಚನ್ನಕೇಶವ ಅವರು ಒಕ್ಕೂಟದ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿ, ಸಂಸ್ಥೆಯು ಬ್ಯಾಂಕ್ ಮತ್ತು ಸ್ವ ಸಹಾಯ ಸಂಘಗಳ ನಡುವೆ ಕೊಂಡಿಯಾಗಿ ಕೆಲಸ ಮಾಡುತ್ತಿದ್ದು ಅತೀ ಕಡಿಮೆ ಬಡ್ಡಿ ದರದಲ್ಲಿ ಸಂಘಗಳಿಗೆ ಬ್ಯಾಂಕಿನಿಂದ ಆರ್ಥಿಕ ಸೌಲಭ್ಯ ದೊರೆಯುವಂತೆ ಮಾಡಿದೆ, ಸಂಸ್ಥೆಯ ವ್ಯವಹಾರದ ಪಾರದರ್ಶಕತೆಯ ಬಗ್ಗೆ ಸದಸ್ಯರು ಗಮನವಹಿಸುವುದು ಅಲ್ಲದೆ ಸಂಸ್ಥೆಯು ಬಿ. ಸಿ ಟ್ರಸ್ಟ್ ಆಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಸಮುದಾಯಕ್ಕೆ ಹಲವಾರು ಉಪಯುಕ್ತ ಕಾರ್ಯಕ್ರಮಗಳನ್ನು ಪೂಜ್ಯರು ನೀಡಿರುತ್ತಾರೆ ಎಂದು ತಿಳಿಸಿದರು.

ಯೋಜನಾಧಿಕಾರಿಗಳಾದ ಬಸವರಾಜ ಅಂಗಡಿ ಅವರು ಮಾತನಾಡಿ, ಸಮುದಾಯದ ಅಭಿವೃದ್ಧಿಗಾಗಿ ಜ್ಞಾನದೀಪ ಶಾಲಾ ಶಿಕ್ಷಣ ಕಾರ್ಯಕ್ರಮ ಶಾಲೆಗಳಿಗೆ ಪೀಟೋಪಕರಣ ಒದಗಣೆ ಹಿಂದೂ ರುದ್ರಭೂಮಿ ಅಭಿವೃದ್ಧಿ ಕಾರ್ಯಕ್ರಮ ವೃತ್ತಿಪರ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯವೇತನ ವಿಕಲಚೇತನರಿಗೆ ಆಶಕ್ತರಿಗೆ ಜನಮಂಗಳ ಕಾರ್ಯಕ್ರಮದಡಿಯಲ್ಲಿ ವಾಕರ್ ವಾಟರ್ ಬೆಡ್ ವೀಲ್ ಚೇರ್ ಉಪಕರಣ ಒದಗಿಸಲಾಗುತ್ತಿದೆ ನಿರ್ಗತಿಕರಿಗೆ ಮಾಶಾಸನ ನಮ್ಮೂರು ನಮ್ಮ ಕೆರೆ ಇನ್ನೂ ಮುಂತಾದ ಸಮುದಾಯಕ್ಕೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ಯೋಜನೆಯಲ್ಲಿ ಅನುಷ್ಟಾನ ಮಾಡಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶ್ರೀನಿವಾಸ್ ತಿಮ್ಮಪ್ಪ ಬಳ್ಳಾರಿ ನಿರ್ದೇಶಕರು ಶ್ರೀ ಬಸವೇಶ್ವರ ಸಹಕಾರ ಬ್ಯಾಂಕ, ರವೀಂದ್ರ ಒಂದಕುದುರಿ ನಿಕಟ ಪೂರ್ವ ಅಧ್ಯಕ್ಷರು ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ, ರಾಜು ನಾಯ್ಕರ್ ಉದ್ಯಮಿಗಳು ಮತ್ತು ಸಮಾಜಸೇವಕರು, ರಂಗನಗೌಡ ದಂಡಣ್ಣವರ್ ಸದಸ್ಯರು ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ, ಶ್ರೀಮತಿ ರಾಜ್ಯಶ್ರೀ ಒಂದು ಕುದುರೆ ಸದಸ್ಯರು ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ 1000/- ಕ್ಕೂ ಮಿಕ್ಕಿದ 88 ಒಕ್ಕೂಟ ಪದಾಧಿಕಾರಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮ ನಿರ್ವಹಣೆಯನ್ನು ದ್ಯಾಮಪ್ಪ ಗಾಳಿ ಕೃಷಿ ಮೇಲ್ವಿಚಾರಕರು, ಸವಿತಾ ಮೇಲ್ವಿಚಾರಕರು ನೆರವೇರಿದರು

ವರದಿ :-ದಾವಲ್ ಶೇಡಂ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ