ಇದರ ಜೊತೆಗೆ ಅಪಘಾತದ ಸಂಖ್ಯೆ ಕೂಡ ಹೆಚ್ಚಾಗುತ್ತಿದ್ದು, ಉತ್ತರ ಪ್ರದೇಶದ ತ್ರಿವೇಣಿ ಸಂಗಮಕ್ಕೆ ಹೋಗಿ ವಾಪಸ್ ಬರುವ ಸಮಯದಲ್ಲೇ ಭಕ್ತರು ಭೀಕರ ಅಪಘಾತಕ್ಕೆ ಬಲಿಯಾಗಿದ್ದಾರೆ.
ಪ್ರಯಾಗ್‌ರಾಜ್ ರಸ್ತೆಯಲ್ಲೇ ಈ ರೀತಿಯಾಗಿ ಭೀಕರ ಅಪಘಾತ ಸಂಭವಿಸಿದ್ದು, ಮಿರ್ಜಾಪುರ ಹೆದ್ದಾರಿಯಲ್ಲಿ ಬಸ್ & ಬೊಲೆರೊ ನಡುವಿನ ಭೀಕರ ಅಪಘಾತಕ್ಕೆ 10 ಜನ ಬಲಿಯಾಗಿದ್ದಾರೆ. ಇದೇ ಅಪಘಾತದಲ್ಲಿ 19 ಮಂದಿ ಗಾಯಗೊಂಡಿದ್ದು, ತ್ರಿವೇಣಿ ಸಂಗಮಕ್ಕೆ ತೆರಳಿ ಪವಿತ್ರ ಸ್ನಾನ ಮುಗಿಸಿ ಇವರು ತಮ್ಮ ಊರುಗಳಿಗೆ ತೆರಳುತ್ತಿದ್ದರು.
ಈ ಅಪಘಾತ ಸಂಭವಿಸಿದ ಬೊಲೆರೊದಲ್ಲಿ ಬರುತ್ತಿದ್ದವರು ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯವರು, ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಭಕ್ತರು ಮಧ್ಯಪ್ರದೇಶ ಮೂಲದವರು ಎಂದು ತಿಳಿದುಬಂದಿದೆ

