Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅ-07. ವಿಜಯದಶಮಿ: ಆರ್‍ಎಸ್‍ಎಸ್ ನಿಂದ ಪಥ ಸಂಚಲನ

Advertisement
ಗುಳೇದಗುಡ್ಡ: -ವಿಜಯದಶಮಿ ಉತ್ಸವದ ಅಂಗವಾಗಿ ನಗರದಲ್ಲಿ ರವಿವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಘೋಷದೊಂದಿಗೆ ಘಣವೇಷಧಾರಿ ಸ್ವಯಂಸೇವಕರ ಆಕರ್ಷಕ ಪಥಸಂಚಲನ ನಡೆಯಿತು.
ನಗರದ ಭಂಡಾರಿ ಹಾಗೂ ರಾಠಿ ಮಹಾವಿದ್ಯಾಲಯದಿಂದ ಮಧ್ಯಾಹ್ನ 3.45 ಗಂಟೆಗೆ ಆರಂಭಗೊಂಡ ಪಥಸಂಚಲನ ನಗರದ ಕೆಳಗಿನ ಮಾರ್ಕೇಟ್, ಹರದೊಳ್ಳಿ, ಸಾಲೇಶ್ವರ ದೇವಸ್ಥಾನ,ಪವಾರ ಕ್ರಾಸ್,ಪುರಸಭೆ, ಕಂಠಿಪೇಟೆ, ಗಚ್ಚಿನಕಟ್ಟಿ,ಚೌಬಜಾರ, ಅರಳಿಕಟ್ಟಿ, ಗುಗ್ಗರಿ ಪೇಟೆಯ ಮೂಲಕ ಹಾಯ್ದು ಭಂಡಾರಿ ಕಾಲೇಜು ಮೈದಾನ ತಲುಪಿತು. ಪಥಸಂಚಲನದಲ್ಲಿ ನಗರದ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಗಣವೇಷದಾರಿ ಸ್ವಯಂಸೇವಕರು, ಘೋಷ ಸಹಿತ ಸಂಚಲನದಲ್ಲಿ ಭಾಗವಹಿಸಿದರು.



ದಾರಿಯುದ್ದಕ್ಕೂ ಸೇರಿದ ಮಹಿಳೆಯರು, ಮಕ್ಕಳು ಹರ್ಷೋದ್ವಾರದಿಂದ ಪಥಸಂಚಲನವನ್ನು ಸ್ವಾಗತಿಸಿದರು.ಮುಖ್ಯ ರಸ್ತೆಯಲ್ಲಿ ಶ್ರೀರಾಮ,ಶಿವಾಜಿ, ಗೋವು ಹಾಗೂ ಕರು ಭಾರತಮಾತೆಯ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಶಿವಾಜಿ, ಸುಭಾಷಚಂದ್ರ ಭೋಸ್, ವಿವೇಕಾನಂದ, ಝಾನ್ನಿರಾಣ ಲಕ್ಷ್ಮೀಬಾಯಿ,ಒನಕೆ ಓಬವ್ವ, ಭಗತ್‍ಸಂಗ್, ಶ್ರೀರಾಮ, ಕಿತ್ತೂರುರಾಣಿ ಚನ್ನಮ್ಮ ಸೇರಿದಂತೆ ವಿವಿಧ ರಾಷ್ಟ್ರನಾಯಕ್ರ ವೇಷಧಾರಿ ಮಕ್ಕಳು ಪಥ ಸಂಚಲನವನ್ನು ಸ್ವಾಗತಿಸಿದರು.



ಎಲ್ಲೆಲ್ಲೂ ಕೇಸರಿಮಯ ಪಥಸಂಚಲ ಸಾಗುವ ದಾರಿಗುಂಟ ನಗರದ ಕಟ್ಟಡಗಳ ಮೇಲೆ ಭಗವಾಧ್ವಜಗಳು ರಾರಾಜಿಸುತ್ತಿದ್ದವು. ಸಾರ್ವಜನಿಕರು ರಸ್ತೆಗಳಲ್ಲಿ ರಂಗೋಲಿ, ಹೂವಿನ ಅಲಂಕಾರ ಮಾಡಿ ಪಥ ಸಂಚಲನವನ್ನು ಸ್ವಾಗತಿಸಿದರು. ಸ್ವಯಂ ಸೇವಕರ ಮೇಲೆ ಹೂಮಳೆಗರೆದು ಹರ್ಷವ್ಯಕ್ತಪಡಿಸಿದರು.

ಅಲ್ಲಲ್ಲಿ ವೀರಪುಲಕೇಶಿ, ವೀರಸಾರ್ವಕರ,ಭಗತ್ ಸಿಂಗ, ಪ್ರಮೋದ ಮುತಾಲಿಕ, ಸರದಾರ ವಲ್ಲಬಾಯಿ ಪಟೇಲ, ಶಿವಾಜಿ ಮಹಾರಾಣಾ ಪ್ರತಾಪಸಿಂಗ್, ಡಾ ಅಂಬೇಡ್ಕರ ಅವರ ಭಾವಚಿತ್ರಗಳನ್ನು ಅಳವಡಿಸಲಾಗಿತ್ತು.ಪಥಸಂಚಲನದಲ್ಲಿ ಬಸವರಾಜ ಕುಂಬಾರ, ಬಸವರಾಜ ಒಣರೊಟ್ಟಿ, ಈರಣ್ಣ ಕಂಠಿ, ಈರಣ್ಣ ಬಂಡಿ, ಸಂಪತ್ತಕುಮಾರ ರಾಠಿ, ರವಿ ಶೇಬಿನಕಟ್ಟಿ, ಸಾಗರ ಮಲಜಿ, ವಿಠ್ಠಲ ಪತ್ತಾರ, ಭುವನೇಶ ಪೂಜಾರ, ವಿವೇಕಾನಂದ ದೇವಾಂಗಮಠ, ಸಂಗಣ್ಣ ಹುನಗುಂದ ಸೇರಿದಂತೆ ನೂರಾರು ಸ್ವಯಂಸೇವಕರು ಭಾಗವಹಿಸಿದರು.

ವರದಿ: -ಮಹಾಲಿಂಗೇಶ ಯಂಡಿಗೇರಿ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ