
ಪ್ರತಿವರ್ಷ ಈ ಗ್ರಾಮದಲ್ಲಿ ಪ್ರತಿವರ್ಷ ಹಂಪಿ ಹುಣ್ಣಿಮೆಯಂದು ಶ್ರೀ ಉತ್ತರೇಶ್ವರ ಸ್ವಾಮಿ ರಥೋತ್ಸವ ನಡೆಯುತ್ತದೆ. ಶ್ರೀ ಉತ್ತರೇಶ್ವರ ಸ್ವಾಮಿ ರಥೋತ್ಸವ ಜರುಗುವುದರಿಂದ ಇಡೀ ಗ್ರಾಮದ ಪ್ರತಿಯೊಂದು ಮನೆಯಲ್ಲೂ ಜಾತ್ರೆಯ ಸಂಭ್ರಮ ಸಡಗರ ಕಾಣಬಹುದಾಗಿದೆ.

ಹರಕೆ ಹೊತ್ತ ಭಕ್ತರು ಕಾಯಿ ಕರ್ಪೂರ ಎಡೆ ನೈವೇದ್ಯ ಸಮರ್ಪಣೆ ಮಾಡಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿವಿಧ ವಾದ್ಯಗಳೊಂದಿಗೆ ಜರುಗಿದ ರಥೋತ್ಸವವಕ್ಕೆ ನೆರೆಯ ಹಳ್ಳಿಗಳಿಂದ ಬಂದಿದ್ದ ಭಕ್ತಾದಿಗಳು ಹೂಹಣ್ಣು ಎಸೆದು ಭಕ್ತಿಯಿಂದ ನಮಿಸಿದರು.
ರಥೋತ್ಸವ ಅಂಗವಾಗಿ ರಾತ್ರಿ ರೇಣುಕಾ ಎಲ್ಲಮ್ಮನ ಕಥೆ ಅರ್ಥಾತ್ ಕಾರ್ತಿಯ ವೀರನ ವಧೆ ಎಂಬ ಬಯಲಾಟ ನಡೆಯಿತು.
ವರದಿ ಶ್ರೀನಿವಾಸ ನಾಯ್ಕ

