
ಸರ್ಕಾರದ ಆದೇಶದಂತೆ ಎಲ್ಲ ವ್ಯಾಪಾರಸ್ಥರು ತಮ್ಮ ಅಂಗಡಿಯ ನಾಮಫಲಕವನ್ನು ಕನ್ನಡದಲ್ಲಿ ಬರೆದು ಹಾಕಬೇಕು ಇಲ್ಲವಾದಲ್ಲಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಚಡಚಣ ತಾಲೂಕದ ದಂಡಾಧಿಕಾರಿಗಳಾದ ಸಂಜಯ ಇಂಗಳ ಇವರು ಆದೇಶವನ್ನು ಹೊರಡಿಸಿದರು.ದೀಪಾವಳಿ ಹಬ್ಬದೊಳಗೆ ಸರ್ಕಾರದ ನಿಯಮದ ಪ್ರಕಾರ ಎಲ್ಲ ವ್ಯಾಪಾರಸ್ಥರು ತಮ್ಮ ಅಂಗಡಿಯ ನಾಮಫಲಕವನ್ನು ಕನ್ನಡದಲ್ಲಿ ಸರಿಪಡಿಸಬೇಕು
ಈ ಸಂದರ್ಭದಲ್ಲಿ ಚಡಚಣ ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿವಾನಂದ ಪೂಜಾರಿ, ಪೊಲೀಸ್ ಅಧಿಕಾರಿಗಳು, ತಾಲೂಕು ಮತ್ತು ಗ್ರಾಮದ ವ್ಯಾಪಾರಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವರದಿ :-ಉಮಾಶಂಕರ ಕ್ಷತ್ರಿ

