ಹೂವಿನಹಡಗಲಿ: ತಾಲೂಕಿನ ಮಿರಾಕೋರನಹಳ್ಳಿಯ ಶ್ರೀ ಶರಣಬಸವೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ನಾಗತಿ ಬಸಾಪುರ ವಲಯ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಕ್ಷೇತ್ರ ಸಮನ್ವಯಾಧಿಕಾರಿ ಅರೇಕಟ್ಟಿ ಕೋಟೆಪ್ಪ ಅವರು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿದರು. ಕುಮಾರಿ ಸಂಜನಾ ಹೆಚ್. ಅವರು ಭರತನಾಟ್ಯ ಪ್ರದರ್ಶಿಸುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.ಭರತನಾಟ್ಯ ಪ್ರದರ್ಶನಕ್ಕೆ ಅತಿಥಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಸಂತಸದ ವ್ಯಕ್ತಪಡಿಸಿದರು.
ಶಾಲೆಯ ಮುಖ್ಯಶಿಕ್ಷಕರಾದ ಸೂರ್ಯಕಾಂತ್ ಬಾರೀಕರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿಭಾ ಕಾರಂಜಿ ಕಾರ್ಯಕ್ರಮದ ಉದ್ದೇಶ, ಮಹತ್ವ ಹಾಗೂ ನಡೆದು ಬಂದ ಹಾದಿಯ ಕುರಿತು ತುಂಬಾ ಅರ್ಥಗರ್ಭಿತವಾಗಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಮಹಮದ್ ರಫಿ ಹೆಚ್.ಆರ್. ಮಾತನಾಡಿ ಮಕ್ಕಳನ್ನು ಸರಿಯಾಗಿ ಶಾಲೆಗೆ ಕಳಿಸಿ, ಶಾಲೆಯಿಂದ ಬಂದ ನಂತರ ಪೋಷಕರು ಮಕ್ಕಳನ್ನು ಅವರ ಕಲಿಕೆಯ ಬಗ್ಗೆ ವಿಚಾರಿಸಿ,ಮಕ್ಕಳನ್ನು ವಿವಿಧ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಪೋಷಕರು ಪ್ರೋತ್ಸಾಹ ನೀಡಬೇಕು ಎಂದರು.
ಗ್ರಾಮದ ಹಿರಿಯರಾದ ತಳದಳ್ಳಿ ಹನುಮಂತಪ್ಪ, ಕೊಟ್ರೇಶಪ್ಪ ಗೌಡ್ರು, ಮಾಜಿ ಎಸ್‌ಡಿಎಂಸಿ ಅಧ್ಯಕ್ಷ ಬಿ.ಎಂ. ಬಸವರಾಜಯ್ಯ, ಎಸ್ ಗಿರಿಯಪ್ಪ,ಸೇರಿದಂತೆ ವಿವಿಧ ಪ್ರೌಢಶಾಲೆಗಳ ಮುಖ್ಯಶಿಕ್ಷಕರು, ಶಿಕ್ಷಕರು ಹಾಗೂ ನಿರ್ಣಾಯಕರು ಉಪಸ್ಥಿತರಿದ್ದರು.
ರೇಣುಕಾ ಊಳಿಗದ ಕಾರ್ಯಕ್ರಮ ನಿರೂಪಿಸಿದರು. ಪ್ರತಿಭಾ ಎಚ್. ವಂದನಾರ್ಪಣೆ ಸಲ್ಲಿಸಿದರು.
ವರದಿ :ಎಂ ಮಂಜುನಾಥ್


