LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ನ.8ರಂದು ತಿಡಿಗೋಳ ಚಲೋ ಬೈಕ್ ರ‍್ಯಾಲಿಗೆ ಬೆಂಬಲ ನೀಡಿ: ಶ್ರವಣಕುಮಾರ ಮುದ್ದಂಗುಡ್ಡಿ

Advertisement

ಮಾನ್ವಿ: ರಾಯಚೂರು ಜಿಲ್ಲೆಯಲ್ಲಿ ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿದ್ದರೂ ರಾಜ್ಯದ ಗೃಹ ಸಚಿವರು ಜಿಲ್ಲೆಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿ ಅಗತ್ಯ ಕ್ರಮ ಕೈಗೊಳ್ಳದಿರುವುದು ವಿಷಾದನೀಯ ಎಂದು ಸಾಮಾಜಿಕ ಕಾರ್ಯಕರ್ತ ಶ್ರವಣಕುಮಾರ ಮುದ್ದಂಗುಡ್ಡಿ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಿಂಧನೂರು ತಾಲೂಕಿನ ತಿಡಿಗೋಳ ಗ್ರಾಮದಲ್ಲಿ ಇತ್ತೀಚೆಗೆ ದೇವಸ್ಥಾನ ಪ್ರವೇಶ ವಿಚಾರವಾಗಿ ದಲಿತರ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸಿ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ ಸಿಂಧನೂರು ವತಿಯಿಂದ ನವೆಂಬರ್ 8ರಂದು ಸಿಂಧನೂರಿನಿಂದ ತಿಡಿಗೋಳ ಗ್ರಾಮದವರೆಗೆ ಬೈಕ್ ರ‍್ಯಾಲಿ ಹಾಗೂ ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿದೆ. ಈ ಹೋರಾಟಕ್ಕೆ ಮಾನ್ವಿ ತಾಲೂಕು ದಲಿತ ಮತ್ತು ಪ್ರಗತಿಪರ ಸಂಘಟನೆಗಳು ಸಂಪೂರ್ಣ ಬೆಂಬಲ ನೀಡಿದ್ದು ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಕರೆ ನೀಡಿದರು.
ತಿಡಿಗೋಳ ಗ್ರಾಮದ ದಲಿತರ ವಿರುದ್ಧ ದಾಖಲಿಸಿರುವ ಸುಳ್ಳು ಪ್ರಕರಣಗಳನ್ನು ಹಿಂಪಡೆಯಬೇಕು. ಸಾಮಾಜಿಕ ಬಹಿಷ್ಕಾರಕ್ಕೆ ಪ್ರಚೋದನೆ ನೀಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ದೌರ್ಜನ್ಯ ಎಸಗಿದ ಪ್ರಮುಖ ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಕರ್ತವ್ಯಲೋಪ ಎಸಗಿದ ತೂರ್ವಿಹಾಳ ಪೊಲೀಸ್ ಠಾಣೆಯ ಠಾಣಾಧಿಕಾರಿ ಯರಿಯಪ್ಪ ಅಂಗಡಿ ಅವರನ್ನು ಅಮಾನತುಗೊಳಿಸಬೇಕು. ಗ್ರಾಮದಲ್ಲಿನ ಅಸ್ಪೃಶ್ಯತೆ ಆಚರಣೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ಒತ್ತಾಯಿಸಿದರು.
ಬಪೂರು ಮತ್ತು ತಿಡಿಗೋಳ ರಸ್ತೆಯ ತಿರುವಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪಿಸಿ ಸರ್ಕಲ್ ಹಾಗೂ ಕಮಾನು ನಿರ್ಮಿಸಬೇಕು. ಗ್ರಾಮದ ಸಮೀಪದ ಸರ್ಕಾರಿ ಭೂಮಿಯಲ್ಲಿ ದಲಿತರಿಗೆ ನಿವೇಶನ ಹಕ್ಕುಪತ್ರ ನೀಡಿ ವಾಸಿಸಲು ಅವಕಾಶ ಕಲ್ಪಿಸಬೇಕು. ಮಹಿಳೆಯರಿಗಾಗಿ ಸಾಮೂಹಿಕ ಶೌಚಾಲಯ ನಿರ್ಮಿಸಬೇಕು. ಭೂ ಒಡೆತನ ಯೋಜನೆಯಡಿ ಅಂಬೇಡ್ಕರ್ ಹಾಗೂ ಆದಿ ಜಾಂಬವ ನಿಗಮಗಳ ಮೂಲಕ ಪ್ರತಿ ದಲಿತ ಕುಟುಂಬಕ್ಕೆ ಎರಡು ಎಕರೆ ಜಮೀನು ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ದಲಿತರ ವಾರ್ಡ್‌ಗಳಿಗೆ ರಸ್ತೆ ಚರಂಡಿ ಹಾಗೂ ಕುಡಿಯುವ ನೀರಿನ ಪ್ರತ್ಯೇಕ ಪೈಪ್‌ಲೈನ್ ವ್ಯವಸ್ಥೆ ಕಲ್ಪಿಸಬೇಕು. ಅಂಗನವಾಡಿ ಕೇಂದ್ರದ ಸಹಾಯಕಿ ಸಹಕಾರಿ ಸಂಘದ ಸಹಾಯಕ ಸೇರಿದಂತೆ ವಿವಿಧ ಉದ್ಯೋಗಗಳಲ್ಲಿ ದಲಿತರಿಗೆ ಆದ್ಯತೆ ನೀಡಬೇಕು. ಸರ್ಕಾರಿ ಶಾಲೆಗಳ ಬಿಸಿಯೂಟ ತಯಾರಿಕೆಗೆ ದಲಿತ ಮಹಿಳೆಯರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ ಭೂಮಾನಂದ ಕೊಲೆ ಪ್ರಕರಣ ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದ ಅಶ್ವಿನಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಹಾಗೂ ಲಿಂಗಸುಗೂರು ತಾಲೂಕಿನ ಕರಡಕಲ್ ಗ್ರಾಮದ ರಾಣೆಮ್ಮ ಹತ್ಯೆ ಪ್ರಕರಣಗಳನ್ನು ಸಿಐಡಿ ತನಿಖೆಗೆ ಒಪ್ಪಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ತಿಡಿಗೋಳ ನಿಡಿಗೋಳ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ದಲಿತರು ಮತ್ತು ದುರ್ಬಲ ವರ್ಗಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ತಿಡಿಗೋಳ ಗ್ರಾಮದಲ್ಲಿ ಪೊಲೀಸ್ ಉಪ ಠಾಣೆ ಆರಂಭಿಸಿ ಜನರಿಗೆ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಿಪ್ಪಣ್ಣ ಬಾಗಲವಾಡ ಮತ್ತು ಶೇಖ್ ಫರೀದ್ ಉಮ್ರಿ ಮಾತನಾಡಿದರು. ಅಬ್ರಾಹಂ ಪನ್ನೂರು ಅನಿಲ್ ನೀಲಕಂಠ ಹನುಮಂತಕೋಟೆ ರವೀಂದ್ರ ಜಾನೇಕಲ್ ನಾಸಿರ್ ಅಲಿ ಬಸಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ :ಆಂಜನೇಯ ನಸಲಾಪುರ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
3ನೇ ವ್ಯಕ್ತಿ ಸಿಎಂ ಆಗಲ್ಲ, ಡಿಕೆಶಿಯವರೇ ಸಿಎಂ: ಸತೀಶ್ ಜಾರಕಿಹೊಳಿ ಬೈಕ್ ಮೇಲೆ ನಿಂತು 154 ಕಿ.ಮೀ ಸವಾರಿ : ವಿಶ್ವ ದಾಖಲೆ ಬರೆದ ಸೇನಾ ಮೇಜರ್ದೊಡ್ಡ ಮೊತ್ತ ದಾಖಲಿಸಿದ ಜಿಂಬಾಬೆ ನ.8ರಂದು ತಿಡಿಗೋಳ ಚಲೋ ಬೈಕ್ ರ‍್ಯಾಲಿಗೆ ಬೆಂಬಲ ನೀಡಿ: ಶ್ರವಣಕುಮಾರ ಮುದ್ದಂಗುಡ್ಡಿಬಾಗಲಕೋಟೆ ಅಧಿಕಾರಿಗಳ ವಿರುದ್ಧ ಆಕ್ರೋಶ : ಹಾಸ್ಟೆಲ್‌ನಲ್ಲಿ ಕನಿಷ್ಠ ಸೌಲಭ್ಯಗಳಿಲ್ಲದೆ ವಿದ್ಯಾರ್ಥಿನಿಯರ ನರಕಯಾತನೆ.ರಾತ್ರಿ 10ರ ರಾಜ್ಯಾಧ್ಯಂತ ನಂತರ ಪಟಾಕಿ ನಿಷೇಧ :  ನಿಯಮ ಮೀರಿದ್ರೆ ಬೀಳುತ್ತೆ ಕೇಸ್ ಬೆಳಗಾವಿ ಅಧಿವೇಶನ ದಿನಾಂಕ ಬದಲು : ಡಿ.2ರಿಂದ 11ರವರೆಗೆ ನಡೆಸಲು ಸಂಪುಟ ಸಭೆ ತೀರ್ಮಾನಯುಪಿಐ ಪಾವತಿಗೆ ಹೆಚ್ಚುವರಿ ಶುಲ್ಕ ವಿಧಿಸುವಂತಿಲ್ಲ: ಸುಪ್ರೀಂ ಕೋರ್ಟ್‌ಗೆ NPCI ಸ್ಪಷ್ಟನೆಜುವೆಲ್ಲರಿ ಬೀಗ ಮುರಿದು 2 ಕೋಟಿ ಮೌಲ್ಯದ ಬೆಳ್ಳಿ, ಚಿನ್ನಾಭರಣ ದೋಚಿದ ಕಳ್ಳರು ಬಾಂಗ್ಲಾದೇಶ ವಿರುದ್ಧ ವೆಸ್ಟ್ ಇಂಡೀಸ್ ಉತ್ತಮ ಮೊತ್ತ