
ತಾಲೂಕು ಆರೋಗ್ಯಾಧಿಕಾರಿ ಡಾ.ಈರಣ್ಣ ಅವರು ಮಾತನಾಡಿ ನಗರದ ಪ್ರಮುಖ ಬೀದಿಗಳಲ್ಲಿ ಜಾಥಾವನ್ನು ನಡೆಸಿ ಸಾರ್ವಜನಿಕ ಸ್ಥಳಗಳಲ್ಲಿನ ದೂಮಪಾನ ನಿಷೇದದ ಕುರಿತು ಮಾಹಿತಿ ನೀಡಿ ಹಾಗೂ ಅದರಿಂದಾಗು ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಗುಲಾಬಿ ಹೂ ನೀಡುವುದರೊಂದಿಗೆ ಗುಲಾಬಿ ಆಂದೋಲನ ಮಾಡಲಾಗುತ್ತಿದೆಂದು ತಿಳಿಸಿದರು.

ಇದೇ ವೇಳೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಖಾಸೀಂ, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಭೀಮರೆಡ್ಡಿ, ನಗರ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಚಂದ್ರಶೇಖರ ಹಾಗೂ ಆಶಾ ಕಾರ್ಯಕರ್ತೆಯರು, ಇನ್ನಿತರ ಸಿಬ್ಬಂದಿಗಳಿದ್ದರು.
ವರದಿ. ಶ್ರೀನಿವಾಸ ನಾಯ್ಕ

