LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ದೌರ್ಜನ್ಯ ವಿರೋಧಿ ಸಂಘಟನೆಗಳ ಒಕ್ಕೂಟದಿಂದ ಸಮಾಜ ಕಲ್ಯಾಣ ಸಚಿವರಿಗೆ ಮನವಿ

Advertisement

ಮಾನ್ವಿ: ತಾಲೂಕಿನ ಹೊಕ್ರಾಣಿ ಗ್ರಾಮದಲ್ಲಿ ಅಶ್ವಿನಿ ಹೊಕ್ರಾಣಿ,ಭೂಮಾನಂದ,ರಾಣೆಮ್ಮ ಅತ್ಯಾಚಾರ-ಕಗ್ಗೊಲೆ.ದೌರ್ಜನ್ಯ ವಿರೋಧಿ ಸಂಘಟನೆಗಳ ಒಕ್ಕೂಟ ರಾಯಚೂರು ವತಿಯಿಂದ ರಾಜ್ಯ ಸಮಾಜ ಕಲ್ಯಾಣ ಸಚಿವ ಕೆ.ಹೆಚ್. ಮುನಿಯಪ್ಪ ರವರಿಗೆ ಒಕ್ಕೂಟದ ಸಂಚಾಲಕರಾದ ತಿಪ್ಪಣ್ಣ ಬಾಗಲವಾಡ ವಕೀಲರು ಮನವಿ ಸಲ್ಲಿಸಿ ಮಾತನಾಡಿ ಜಿಲ್ಲೆಯಲ್ಲಿ ನಡೆದ ಅಶ್ವಿನಿ ಹೊಕ್ರಾಣಿ,ಭೂಮಾನಂದ,ರಾಣೆಮ್ಮ ಹಾಗೂ ರಮೇಶ ನಕ್ಕುಂದಿ ಕೊಲೆ ಪ್ರಕರಣಗಳನ್ನು  ನ್ಯಾಯಂಗ ತನಿಖೆ ನಡೆಸಬೇಕು,ಅಥಾವ ಸಿ.ಐ.ಡಿ., ಎಸ್.ಐ.ಟಿ ಗೆ ವಹಿಸಬೇಕು ಶೀಘ್ರವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ಕಾನೂನು ರಚಿಸಿ ಕಠಿಣ ಶಿಕ್ಷೆ ನೀಡುವುದಕ್ಕೆ ಕ್ರಮ ಕೈಗೊಳ್ಳಬೇಕು. ಸಂತ್ರಸ್ಥ ಕುಟುಂಬಗಳಿಗೆ 1ಕೋಟಿ ಪರಿಹಾರ ನೀಡಬೇಕು ಹಾಗೂ 10 ಎಕರೆ ಕೃಷಿ ಭೂಮಿ,ಸರಕಾರಿ ನೌಕರಿ ನೀಡಬೇಕು ಹಾಗೂ ಕುಟುಂಬದವರಿಗೆರಕ್ಷಣೆನೀಡಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ರಾಜ್ಯ ಸಮಾಜ ಕಲ್ಯಾಣ ಸಚಿವ ಕೆ.ಹೆಚ್. ಮುನಿಯಪ್ಪ ಮಾತನಾಡಿ ಈ ಘಟನೆ ಕೇವಲ ದಲಿತ ಸಮುದಾಯಕ್ಕೆ ಸಂಬಂದಿಸಿದ ವಿಷಯವಲ್ಲ. ಒಬ್ಬ ಹೆಣ್ಣುಮಗಳ ಮೇಲೆ ನಡೆದಿರುವ ಇಂತಹ ಅಮಾನವೀಯ ಘಟನೆ ಇಡೀ ರಾಜ್ಯವೇ ತಲೆತಗ್ಗಿಸುವಂತಹದ್ದು. ಇದು ಸಾಮಾನ್ಯ ಘಟನೆಯಲ್ಲ; ಇಂತಹ ಘಟನೆಗಳು ಮರುಕಳಿಸದಂತೆ ಸಮಾಜದಲ್ಲಿ ಶಾಶ್ವತ ಬದಲಾವಣೆ ತರಬೇಕಿದೆ.  ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಂದ ಘಟನೆಗೆ ಸಂಬಂದಿಸಿದ ಮಾಹಿತಿಯನ್ನು ನಿರಂತರವಾಗಿ ಪಡೆಯುತ್ತಿದ್ದು ಮಾಜಿ ಸಚಿವರಾದ ಎನ್.ಎಸ್. ಬೋಸರಾಜ್ ಅವರೂ ನಿರಂತರವಾಗಿ ಸಂಪರ್ಕದಲ್ಲಿದ್ದು, ಪರಿಸ್ಥಿತಿಯ ಕುರಿತು ಸಮಯಕ್ಕೆ ತಕ್ಕಂತೆ ಚರ್ಚಿಸುತ್ತಿದ್ದರೆ ರಾಜ್ಯ ಸರಕಾರ ಎಲ್ಲಾ ಪ್ರಕರಣಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿದರು.
ಮಾಜಿ ಸಚಿವರು ಹಾಗೂ ವಿಧಾನಪರೀಷತ್ ಸದಸ್ಯರಾದ ಎನ್.ಎಸ್.ಬೋಸರಾಜು, ಶಾಸಕ ಹಂಪಯ್ಯನಾಯಕ ಜಿಲ್ಲಾಧಿಕಾರಿ ಪೂವಿತಾ.ಎಸ್,  ಜಿಲ್ಲಾ ಪಂಚಾಯಿತಿ ಸಿ.ಇ.ಓ. ಈಶ್ವರಕಂದೂ, ಸರ್ಕಾರದ ಕಾರ್ಯದರ್ಶಿ ಮೊಹನ್ ರಾಜ್,ಆಯುಕ್ತರಾದ ರಾಕೇಶ್ ಕುಮಾರ್,ಹಾಗೂ ಮುಖಂಡರಾದ  ನಯೋಪ್ರ ಅಧ್ಯಕ್ಷರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಬ್ದುಲ್ ಗಪೂರ್ ಸಾಬ್, ಕೆ ಶಾಂತಪ್ಪ, ರುದ್ರಪ್ಪ ಅಂಗಡಿ, ಜಯಣ್ಣ, ನರಸಿಂಹಲು ಮಾಡಿಗಿರಿ, ದಲಿತ ಮುಖಂಡರಾದ ಎ.ಬಾಲಸ್ವಾಮಿಕೊಡ್ಲಿ,ಅಂಬಣ್ಣ ಅರೋಲಿ, ,ನಾಗಲಿಂಗಸ್ವಾಮಿ.ಕೆ, ಅಬ್ರಹಾಂ ಹೊನ್ನಾಟ್ಟಿಗಿ, ಪ್ರಭುರಾಜ್ ಕೋಡ್ಲಿ, ಶಿವರಾಜ ಜಾನೆಕಲ್ ,ಶಿವರಾಜ ಉಮಳಿ ಹೊಸೂರು.ವಿರೂಪಾಕ್ಷಿ. ಚಂದ್ರಶೇಖರ ಕುರ್ಡಿ ಸೇರಿದಂತೆ ಅನೇಕ ದಲಿತ ಪರ ಮುಖಂಡರುಗಳು, ಗ್ರಾಮಸ್ಥರು ಇದ್ದರು.
ವರದಿ :ಆಂಜನೇಯ ನಸಲಾಪುರ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸೌತ್ ಅಪ್ರಿಕಾ ತಂಡಕ್ಕೆ 11 ರನ್ ಗಳ ವಿಜಯಸಾಲ ಮನ್ನಾಕ್ಕೆ ನೆರವು ಕೋರಿ ದೆಹಲಿಗೆ ಸರ್ವಪಕ್ಷ ನಿಯೋಗ: ಡಿ. ಕೆ ಶಿವಕುಮಾರ್ ನಿಂತಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ : 8 ವಿದ್ಯಾರ್ಥಿಗಳು ದಾರುಣ ಸಾವು ಇಂದಿನಿಂದ ಪ್ರಜಾಸೇವೆ ಅಭಿಯಾನ ಆರಂಭ : ಚಿಟಿಕೆಯಲ್ಲಿ ದೂರು ಸಲ್ಲಿಸಲು ಅವಕಾಶ ಕೂಲಿ ಕಾರ್ಮಿಕರ ಕೆಲಸ ಮಾಡುತ್ತಿದ್ದ ವೇಳೆ 14 ಚಿನ್ನದ ನಾಣ್ಯಗಳು ಪತ್ತೆಮಹಿಳಾ ಏಸಿಯಾ ಕಪ್: ನಾಳೆ ಭಾರತ-ಪಾಕ್ ಪಂದ್ಯ ಸೆ. 9 ರಂದು ಪಾಕಿಸ್ತಾನ- ಇಂಗ್ಲೆಂಡ್ ತೃತೀಯ ಟೆಸ್ಟ್ ಶೀಘ್ರದಲ್ಲೇ ಬರಪೀಡಿತ ತಾಲೂಕುಗಳ 2ನೇ ಪಟ್ಟಿ ಘೋಷಣೆ: ಡಿ.ಕೆ.ಶಿವಕುಮಾರ್ ಶೀಘ್ರದಲ್ಲಿಯೇ ಬಸ್ ಟಿಕೆಟ್ ದರ ಏರಿಕೆ: ಸಚಿವ ಬೈರತಿ ಸುರೇಶ್ ಸುಳಿವು ಚೊಕ್ಕಸಂದ್ರದ ಶ್ರೀ ಕೃಷ್ಣ ದೇವಸ್ಥಾನದಲ್ಲಿ ವಿಶೇಷ ಪೂಜೆ, ದೇವರ ದರ್ಶನ ಪಡೆದ ನಾಗರಾಜ್ ಯಾದವ್ ದಂಪತಿ