Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹೈದರಾಬಾದ್‌ನಲ್ಲಿ ಪದ್ಮಶ್ರೀ ಮಂದಕೃಷ್ಣ ಮಾದಿಗರ ಭೇಟಿ ಮಾಡಿದ : ಬಿ. ನರಸಪ್ಪ ದಂಡೋರ

Advertisement
ಗುರುಮಠಕಲ್ : ಶನಿವಾರ ಹೈದರಾಬಾದ್ ನಗರದಲ್ಲಿ ಮಾದಿಗರ ಹೋರಾಟದ ಮುಂಚೂಣಿ ನಾಯಕರು ಹಾಗೂ ಒಳ ಮೀಸಲಾತಿ ಜಾರಿಗೆ ರೂವಾರಿ ಪದ್ಮಶ್ರೀ ಪುರಸ್ಕೃತ ಮಂದಕೃಷ್ಣ ಮಾದಿಗ ಅವರನ್ನು ಕರ್ನಾಟಕ ಮಾದಿಗ ದಂಡೋರ (MRPS) ರಾಜ್ಯಾಧ್ಯಕ್ಷರಾದ ಬಿ. ನರಸಪ್ಪ ದಂಡೋರ ಅವರು ನಗರದ ಸೆಂಟ್ರಲ್ ಕೋರ್ಟ್ ಬಳಿಯ ಖಾಸಗಿ ಹೋಟೆಲ್‌ನಲ್ಲಿ ಭೇಟಿಯಾಗಿ ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ಒಳ ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರ ಮಾಡಿದ ಎಡವಟ್ಟಿನಿಂದಾಗಿ ಗೌರವಾನ್ವಿತ ರಾಜ್ಯಪಾಲರ ಲೋಕಭವನದಿಂದ ಒಳ ಮೀಸಲಾತಿ ವರದಿ ವಾಪಸ್ ಹೋಗಿರುವ ವಿಷಯವನ್ನು ಮಂದಕೃಷ್ಣ ಮಾದಿಗರ ಗಮನಕ್ಕೆ ತರಲಾಯಿತು.



ಕರ್ನಾಟಕ ಕಾಂಗ್ರೆಸ್ ಸರ್ಕಾರವು ಪರಿಶಿಷ್ಟ ಜಾತಿಗೆ ಒಳಪಡುವ 101 ಜಾತಿಗಳಿಗೆ ನ್ಯಾಯ ಒದಗಿಸದೇ, ವೋಟ್ ಬ್ಯಾಂಕ್ ರಾಜಕೀಯ ನಡೆಸುತ್ತಿದ್ದು, ಮಾದಿಗರಿಗೆ ಮೋಸ ಮಾಡುವ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಕರ್ನಾಟಕ ಮಾದಿಗ ದಂಡೋರ ರಾಜ್ಯ ಅಧ್ಯಕ್ಷ ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ವಿಚಾರ ಗಳ ಕುರಿತು ವಿವರಣೆಯಾಗಿ ಒಳ ಮೀಸಲಾತಿ ಸೇರಿದಂತೆ ಹಲವಾರು ಪ್ರಮುಖ ವಿಚಾರಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು. ಶೀಘ್ರದಲ್ಲೇ ಕರ್ನಾಟಕ ರಾಜ್ಯಕ್ಕೆ ಭೇಟಿ ನೀಡುವುದಾಗಿ ಪದ್ಮಶ್ರೀ ಮಂದಕೃಷ್ಣ ಮಾದಿಗರು ಬಿ. ನರಸಪ್ಪ ದಂಡೋರ ಅವರಿಗೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಯಾದಗಿರಿ ಜಿಲ್ಲಾ ಅಧ್ಯಕ್ಷರಾದ ಕಾಶಪ್ಪ ಮಾದಿಗ ಹೆಗ್ಗಣಗೇರಾ, ರಾಯಚೂರು ಜಿಲ್ಲಾ ಯುವ ಸೇನೆ ಅಧ್ಯಕ್ಷರಾದ ರಂಜಿತ್ ದಂಡೋರ, ರಾಯಚೂರು ತಾಲೂಕು ಅಧ್ಯಕ್ಷರಾದ ದುಳ್ಳಯ್ಯ ಗುಂಜಹಳ್ಳಿ, ವಕೀಲರಾದ ಯೇಸುರಾಜು ಹಾಗೂ ಮಾದಿಗ ದಂಡೋರ ತಾಲೂಕು ಮುಖಂಡರಾದ ಭೀಮೇಶ್ ತುಂಟಾಪುರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವರದಿ : ರವಿ ಬುರನೋಳ್
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ