
ಬೆಳಗಾವಿ ಜಿಲ್ಲೆ ಚಿಕ್ಕೋಡಿ ಉಪವಿಭಾಗದ ಸೇಡಬಾಳ ಗ್ರಾಮದ ಸಿದ್ದಾಂತ ನಾಯಿಕಬಾ ಗಡದೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಗಿಟ್ಟಿಸಿಕೊಂಡಿದ್ದಾನೆ.
ಶೇಡಬಾಳ ಗ್ರಾಮದ ಆಚಾರ್ಯ ಸುಬಲಸಾಗರ ಫ್ರೌಢ ವಿದ್ಯಾಮಂದಿರದಲ್ಲಿ ಓದುತ್ತಿದ್ದ ವಿದ್ಯಾರ್ಥಿಯ ಸಾಧನೆಗೆ
ಗುರುವೃಂದ ಸಿಹಿ ತಿನಿಸಿ ಸಂಭ್ರಮಿಸಿದ್ದಾರೆ.
ಇಂಗ್ಲೀಷ ಹೊರತು ಪಡಿಸಿ ಎಲ್ಲ ವಿಷಯಗಳಲ್ಲೂ ಸಮಾನ ಅಂಕ ಪಡೆದ ವಿದ್ಯಾರ್ಥಿ ಸಿದ್ದಾಂತ ಬಡ ರೈತ ಕುಟುಂಬದ ವಿದ್ಯಾರ್ಥಿಯಾಗಿದ್ದು ಈತನ ಸಾಧನೆಗೆ ಗ್ರಾಮಸ್ಥರು ಅಭಿನಂದನೆ ತಿಳಿಸಿದ್ದಾರೆ.
ವರದಿ ರಾಜು ಮುಂಡೆ .

