ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಇಸ್ಕಾನ್ ದೇವಾಲಯವನ್ನು ಗುರಿಯಾಗಿಸಿ ದಾಳಿ ನಡೆಸುವುದಾಗಿ ಹೇಳಿಕೊಂಡಿದೆ.ಈ ಮೇಲ್‌ನ್ನು ಐಎಸ್‌ಐಎಸ್‌ನಿಂದ ಕಳುಹಿಸಲಾಗಿದೆ ಎಂದು ದೇವಾಲಯದ ಸಿಬ್ಬಂದಿ ತಿಳಿಸಿದ್ದಾರೆ.
ಸ್ಥಳೀಯ ಪೊಲೀಸರು ಬಾಂಬ್ ಸ್ಕ್ವಾಡ್‌ಗಳು ಮತ್ತು ಶ್ವಾನ ಘಟಕಗಳನ್ನು ಬಳಸಿಕೊಂಡು ದೇವಾಲಯದಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಆದರೆ ಯಾವುದೇ ಸ್ಫೋಟಕಗಳು ಕಂಡುಬಂದಿಲ್ಲ.
ಕೇವಲ ಮೂರು ದಿನಗಳಲ್ಲಿ ತಿರುಪತಿಗೆ ಬಂದಿರುವ ನಾಲ್ಕನೇ ಹುಸಿ ಬಾಂಬ್ ಬೆದರಿಕೆ ಬಂದಿದೆ. ಇದು ನಿವಾಸಿಗಳು ಮತ್ತು ಭಕ್ತರಲ್ಲಿ ಆತಂಕವನ್ನು ಹೆಚ್ಚಿಸಿದೆ.
ಕಳೆದ ವಾರದ ಹಿಂದೆ, ತಿರುಪತಿಯ ಮೂರು ಹೋಟೆಲ್‌ಗಳಿಗೂ ಇದೇ ರೀತಿಯ ಇಮೇಲ್ ಬೆದರಿಕೆಗಳು ಬಂದಿದ್ದು, ದೇವಾಲಯದ ಪಟ್ಟಣದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಇದಕ್ಕೆ ಪ್ರತಿಯಾಗಿ ತಿರುಪತಿ ಪೂರ್ವ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಬೆದರಿಕೆ ಇಮೇಲ್‌ಗಳ ಸರಣಿಯ ಬಗ್ಗೆ ತನಿಖೆ ಆರಂಭಿಸಿದ್ದಾರೆ.

