Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಾಡ ಭಾಂಬ್ ಸ್ಫೋಟ: ಎತ್ತುಗಳು ಸ್ಥಳದಲ್ಲೇ ಸಾವು

Advertisement
ಹಾನಗಲ್ : ಕಾಡು ಪ್ರಾಣಿಗಳನ್ನ ಬೇಟೆಯಾಡಲು ಇಟ್ಟಿದ್ದ ನಾಡ ಬಾಂಬ್ ಸ್ಫೋಟ ಪರಿಣಾಮ ಎತ್ತುಗಳು ಮೃತಪಟ್ಟಿರುವ ಘಟನೆ ಹಾನಗಲ್ ತಾಲೂಕಿನ ಹೀರೂರು ಗ್ರಾಮದ ಹೊರವಲಯದ ಅರಣ್ಯಪ್ರದೇಶದಲ್ಲಿ ನಡೆದಿದೆ.

ಗ್ರಾಮದ ಹೊರವಲಯದ ಸಿಗಿಗುಂಡಿ ಪ್ರದೇಶದ ಕಾಡಿನಲ್ಲಿ ವನ್ಯಜೀವಿಗಳು ನೀರು ಕುಡಿಯಲೆಂದು ತೊಡಲಾಗಿದ್ದ ನೀರಿನ ಗುಂಡಿಯ ಬಳಿ ಯಾರೋ ಕಿಡಿಗೇಡಿಗಳು ನಾಡ ಬಾಂಬ್ ಇಟ್ಟಿದ್ದರು ಎನ್ನಲಾಗಿದೆ.

ನೀರು ಕುಡಿಯಲು ತೆರಳಿದ್ದ ಎರಡು ಹೋರಿಗಳು ನಾಡ ಬಾಂಬ್ ಅನ್ನು ಕಚ್ಚಿದ ಪರಿಣಾಮ ಭಾರೀ ಸ್ಫೋಟ ಸಂಭವಿಸಿದೆ. ಸ್ಫೋಟದಿಂದ ಹೋರಿಗಳ ಬಾಯಿ ಛಿದ್ರ-ಛಿದ್ರಗೊಂಡು ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿವೆ.

ಮೃತ ಹೋರಿಗಳು ಹೀರೂರು ಗ್ರಾಮದ ರೈತ ಶೇಖಪ್ಪ ಮೇಳ್ಳಿಹಳ್ಳಿ ಅವರಿಗೆ ಸೇರಿದ್ದವು ಎಂದು ತಿಳಿದುಬಂದಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಹೋರಿಗಳನ್ನು ಕಳೆದುಕೊಂಡ ರೈತ ಶೇಖಪ್ಪ ಅವರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ಪರಿಶೀಲನೆ:

ಇನ್ನು ಘಟನೆಯ ಮಾಹಿತಿ ತಿಳಿದ ತಕ್ಷಣ ಹಾನಗಲ್ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಾಡಿನ ನೀರಿನ ಗುಂಡಿಯ ಸುತ್ತಮುತ್ತ ಇನ್ನೂ ನಾಡ ಬಾಂಬ್‌ಗಳು ಇರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಅಧಿಕಾರಿಗಳು ಸುದೀರ್ಘ ಪರಿಶೀಲನೆ ಕೈಗೊಂಡಿದ್ದಾರೆ.

ಸದ್ಯ ಈ ಸಂಬAಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ನಾಡ ಬಾಂಬ್ ಇಟ್ಟವರ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಫೋಟೋ : ನಾಡ ಬಾಂಬ್ ಸ್ಪೋಟ- ಎರಡು ಹೋರಿಗಳು ಸಾವು..!

ವರದಿ : ರಮೇಶ್ ತಾಳಿಕೋಟಿ
Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಿಂಬಾಬ್ವೆ ವಿರುದ್ಧ ಸುಲಭವಾಗಿ ಗೆದ್ದ ಭಾರತ ಕಾಂಗ್ರೆಸ್ ತಿಗಣೆಗಳು ಹೋಗಿ ಜಿರಳೆಗಳ ಜೊತೆ ಸೇರಿಕೊಂಡಿದ್ದಾರೆ : ಪ್ರತಾಪ್ ಸಿಂಹ ನಂದಿನಿ ತುಪ್ಪದ ಬೆಲೆ ಪ್ರತಿ ಕೆಜಿಗೆ 15 ರೂ. ಹಾಗೂ ಬೆಣ್ಣೆಯ ದರ ಪ್ರತಿ ಕೆಜಿಗೆ 22 ರೂ. ಹೆಚ್ಚಳ ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲಿಯೇ ಮಯಾಂಕ ಯಾದವ್‌ಗೆ ವಿಕೆಟ್  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆ ಅಂಗಳದಲ್ಲಿ ಗಿಡ ನಾಟಿ ಕಾರ್ಯಕ್ರಮ ಜಾತ್ರೆಗೆ ಹೋಗುವ ವಿಚಾರಕ್ಕೆ ದಂಪತಿ ನಡುವೆ ಜಗಳ : ದೂದಗಂಗಾ ನದಿಗೆ ಹಾರಿದ ಪತ್ನಿ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವಂತಿಲ್ಲ : ರಾಜ್ಯ ಸರ್ಕಾರ ಆದೇಶ ಹೆಣ್ಣು ಮಗು ಎಂಬ ಕಾರಣಕ್ಕೆ ನೀರಿನ ಸಂಪ್ ಗೆ ಎಸೆದು ಕೊಂದು ಪಾಪಿ ತಂದೆಸುಳ್ಳು ಸುದ್ದಿ ಪ್ರಕಟ : ಸಂಪಾದಕ ಆನಂದ್ ಕೌಶಿಕ್ 6 ತಿಂಗಳು ಸಜೆ ಮತ್ತು 1 ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಲಯಬಾಗಲಕೋಟೆ ಬೇಕರಿ ತಪಾಸಣೆ ತಾಜಾ ಎಣ್ಣೆ ಬಳಸಿ : ಸಿಲಿಂಡರ್ ಹೊರಗಿಡಿ ಉಪಲೋಕಾಯುಕ್ತರ ಎಚ್ಚರಿಕೆ