Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನರೇಗಾ ಯೋಜನೆ ಕಾರ್ಮಿಕರಿಗೆ ಸೂಕ್ತ ಸೌಲಭ್ಯ ಕಲ್ಪಿಸುವಂತೆ ಆಗ್ರಹ

Advertisement
ಸಿರುಗುಪ್ಪ : -ನಗರದ ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾಯಕ ಬಂದುಗಳಿಗೆ ಒಪ್ಪಿಗೆ ಪತ್ರದ ಆದೇಶ ವಾಪಾಸಾತಿ ಹಾಗೂ ಎನ್.ಎಮ್.ಎಮ್.ಎಸ್ ಹಾಜರಾಗಿ ಒಂದೇ ಸಲಕ್ಕೆ ಕಡ್ಡಾಯಗೊಳಿಸುವಂತೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತರಿಗೆ ತಾಲೂಕು ಪಂಚಾಯಿತಿ ವ್ಯವಸ್ಥಾಪಕಿ ಸುಜಾತ ಅವರ ಮೂಲಕ ಮನವಿ ಸಲ್ಲಿಸಲಾಯಿತು



ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕಾಧ್ಯಕ್ಷ ವಿ.ಮಾರುತಿ ಮಾತನಾಡಿ ತಾಲೂಕಿನಲ್ಲಿ ಈಗಾಗಾಲೇ ಬಿರುಬಿಸಿಲಿನಿಂದ ಭೀಕರ ಬರಗಾಲ ಬಂದೊದಗಿದ್ದು,
ಪಂಚಾಯಿತಿಗಳಲ್ಲಿ ಅರ್ಜಿ ನಮೂನೆ-6ರ ಮೂಲಕ ಬೇಡಿಕೆಯ ಅರ್ಜಿ ಸಲ್ಲಿಸಿದಾಗಿನಿಂದ 100ದಿನಗಳ ಕಾಲ ಉದ್ಯೋಗವನ್ನು ನೀಡಬೇಕು.



ಹಲವು ಪಂಚಾಯಿತಿಗಳಲ್ಲಿ ಉದ್ಯೋಗ ನೀಡಲು ನಿರ್ಲಕ್ಷ್ಯ ದೋರಣೆ ತೋರುತ್ತಿರುವುದರಿಂದ ಕೃಷಿ ಅವಲಂಭಿತ ರೈತ ಕುಟುಂಬಗಳು ಗುಳೇ ಹೋಗುತ್ತಿದ್ದಾರೆ. ಪಂಚಾಯಿತಿಗಳಿಗೆ ಮೇಟಿಗಳು ಅಲೆದು ಕೆಲಸ ಕೇಳಿದರೂ ಜಿ.ಪಿ.ಎಸ್ ನೆಪವೊಡ್ಡಿ ಕಾಲಹರಣ ಮಾಡುತ್ತಿದ್ದಾರೆ.

ಕೆಲವು ಪಂಚಾಯಿತಿಗಳಲ್ಲಿ ಜನಪ್ರತಿನಿಧಿಗಳ ಅಣತಿಯಂತೆ ಅಭಿವೃದಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು, ಅಂತಹವರ ವಿರುದ್ದ ಕ್ರಮ ಜರುಗಿಸಬೇಕು. ಮೇಟಿಗಳಿಗೆ ಸೂಕ್ತ ಕಿಟ್‌ಗಳನ್ನು ನೀಡಬೇಕು.

ಅರ್ಜಿ ಸಲ್ಲಿಸಿದ ನಂತರ ಉದ್ಯೋಗವನ್ನು ಕಾಲಮಿತಿಯೊಳಗೆ ನೀಡದಿದ್ದಲ್ಲಿ ನಿರುದ್ಯೋಗ ಭತ್ಯೆಯನ್ನು ನೀಡಬೇಕು.
ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲಸವನ್ನು ನೀಡಿ ಗ್ರಾಮಗಳ ಅಭಿವೃದ್ದಿಗೆ ನೆರವಾಗಬೇಕು. ದೂರದ ಪ್ರಯಾಣಕ್ಕೆ ಸುರಕ್ಷಿತ ವಾಹನಗಳಲ್ಲಿ ಕರೆದೊಯ್ಯಬೇಕು. ಕೆಲಸದ ಸ್ಥಳದಲ್ಲಿ ಶುದ್ದ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದರು.

ಇದೇ ವೇಳೆ ತಾಲೂಕು ಖಜಾಂಚಿ ಬಿ.ರಾಮಣ್ಣ, ಸಮಿತಿ ಸದಸ್ಯರಾದ ಹುಸೇನಪ್ಪ, ಸಣ್ಣ ಹುಲುಗಪ್ಪ, ಶಾಂತಮೂರ್ತಿ, ಮಾಸ್ತಿ ಪ್ರಕಾಶ, ಸಿ.ರವಿಕುಮಾರ, ದಿವಾಕರ, ಬಸಪ್ಪ ಇನ್ನಿತರರಿದ್ದರು.

ವರದಿ.ಶ್ರೀನಿವಾಸ ನಾಯ್ಕ
Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಿಂಬಾಬ್ವೆ ವಿರುದ್ಧ ಸುಲಭವಾಗಿ ಗೆದ್ದ ಭಾರತ ಕಾಂಗ್ರೆಸ್ ತಿಗಣೆಗಳು ಹೋಗಿ ಜಿರಳೆಗಳ ಜೊತೆ ಸೇರಿಕೊಂಡಿದ್ದಾರೆ : ಪ್ರತಾಪ್ ಸಿಂಹ ನಂದಿನಿ ತುಪ್ಪದ ಬೆಲೆ ಪ್ರತಿ ಕೆಜಿಗೆ 15 ರೂ. ಹಾಗೂ ಬೆಣ್ಣೆಯ ದರ ಪ್ರತಿ ಕೆಜಿಗೆ 22 ರೂ. ಹೆಚ್ಚಳ ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲಿಯೇ ಮಯಾಂಕ ಯಾದವ್‌ಗೆ ವಿಕೆಟ್  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆ ಅಂಗಳದಲ್ಲಿ ಗಿಡ ನಾಟಿ ಕಾರ್ಯಕ್ರಮ ಜಾತ್ರೆಗೆ ಹೋಗುವ ವಿಚಾರಕ್ಕೆ ದಂಪತಿ ನಡುವೆ ಜಗಳ : ದೂದಗಂಗಾ ನದಿಗೆ ಹಾರಿದ ಪತ್ನಿ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವಂತಿಲ್ಲ : ರಾಜ್ಯ ಸರ್ಕಾರ ಆದೇಶ ಹೆಣ್ಣು ಮಗು ಎಂಬ ಕಾರಣಕ್ಕೆ ನೀರಿನ ಸಂಪ್ ಗೆ ಎಸೆದು ಕೊಂದು ಪಾಪಿ ತಂದೆಸುಳ್ಳು ಸುದ್ದಿ ಪ್ರಕಟ : ಸಂಪಾದಕ ಆನಂದ್ ಕೌಶಿಕ್ 6 ತಿಂಗಳು ಸಜೆ ಮತ್ತು 1 ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಲಯಬಾಗಲಕೋಟೆ ಬೇಕರಿ ತಪಾಸಣೆ ತಾಜಾ ಎಣ್ಣೆ ಬಳಸಿ : ಸಿಲಿಂಡರ್ ಹೊರಗಿಡಿ ಉಪಲೋಕಾಯುಕ್ತರ ಎಚ್ಚರಿಕೆ