Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರ ಗುರುತು ಬಹಿರಂಗಪಡಿಸುವಂತಿಲ್ಲ : ಡಿಜಿಪಿ ಖಡಕ್ ಆದೇಶ 

Advertisement
ಬೆಂಗಳೂರು: ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರ ಗುರುತು ಬಹಿರಂಗಪಡಿಸುವಂತಿಲ್ಲ ಎಂದು ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕ ಎಂ.ಎ. ಸಲೀಂ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯುವ ಅತ್ಯಾಚಾರ ಮತ್ತು ಪೋಕ್ಸೊ ಪ್ರಕರಣಗಳಲ್ಲಿ ದಾಖಲು ಮಾಡುವ ಸಂದರ್ಭದಲ್ಲಿ ದೂರು ಅರ್ಜಿ, ಪ್ರಥಮ ವರ್ತಮಾನ ವರದಿ ಮತ್ತು ತನಿಖಾ ವರದಿಗಳಲ್ಲಿ ನೊಂದ ಮಹಿಳೆ ಅಥವಾ ಅಪ್ರಾಪ್ತರ ಹೆಸರು ಮತ್ತು ವಿಳಾಸಗಳ ಗೌಪತ್ಯೆಯನ್ನು ಕಾಪಾಡುವ ಬಗ್ಗೆ ಸೂಚಿಸಿದ್ದಾರೆ.

ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯುವ ಅತ್ಯಾಚಾರ ಮತ್ತು ಪೋಕೋ ಪ್ರಕರಣಗಳಲ್ಲಿ ದಾಖಲು ಮಾಡುವ ಸಂದರ್ಭದಲ್ಲಿ ದೂರು ಅರ್ಜಿ, ಪ್ರಥಮ ವರ್ತಮಾನ ವರದಿ ಮತ್ತು ತನಿಖಾ ವರದಿಗಳಲ್ಲಿ ನೊಂದ ಮಹಿಳೆ ಅಥವಾ ಅಪ್ರಾಪ್ತರ ಹೆಸರು ಮತ್ತು ವಿಳಾಸಗಳ ಗೌಪತ್ಯೆಯನ್ನು ಕಾಪಾಡುವ ಸಂಬಂಧ ಉಲ್ಲೇಖಿ-(1)ರ ಮಾನ್ಯ ಸರ್ವೋಚ್ಛ ನ್ಯಾಯಾಲಯದ ತೀರ್ಪಿನಲ್ಲಿ ಪಾಲಿಸುವಂತೆ ಆದೇಶಿಸಲಾಗಿರುತ್ತದೆ.

ಅದರಂತೆ ನ್ಯಾಯಾಲಯದ ಆದೇಶದಂತೆ ಮಹಿಳೆ ಮತ್ತು ಅಪ್ರಾಪ್ತ ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳಾದ ಅತ್ಯಾಚಾರ ಮತ್ತು ಪೋಕೋ ಪ್ರಕರಣಗಳಲ್ಲಿ ನೊಂದ ಮಹಿಳೆ ಅಥವಾ ಅಪ್ರಾಪ್ತರ ಹೆಸರು, ಗುರುತು ಮತ್ತು ವಿಳಾಸವನ್ನು ಪೊಲೀಸ್ ಠಾಣಾಧಿಕಾರಿಗಳು ಸಾರ್ವಜನಿಕಗೊಳಿಸದಂತೆ ಗೌಪ್ಯತೆ ಕಾಪಾಡಿಕೊಳ್ಳುವಂತೆ ಈ ಕಛೇರಿಯಿಂದ ಉಲ್ಲೇಖಿತ-2ರ ಸ್ಥಾಯಿ ಆದೇಶದಲ್ಲಿ ಸೂಚನೆ ನೀಡಲಾಗಿತ್ತು.

ಆದರೆ ಈ ಕಛೇರಿಯು ಸ್ಥಾಯಿ ಆದೇಶ ಸಂ. 1024 ರಲ್ಲಿ ನ್ಯಾಯಾಲಯದ ತೀರ್ಪಿನಲ್ಲಿ ನೀಡಿದ ಸೂಚನೆಗಳನ್ನು ನೀಡಿದ್ದರು ಸಹ ಕೆಲವು ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳು ಮತ್ತು ತನಿಖಾಧಿಕಾರಿಗಳು ಮಹಿಳೆಯರ ಮತ್ತು ಅಪ್ರಾಪ್ತ ಮಕ್ಕಳ ಮೇಲೆ ನಡೆಯುವ ಅತ್ಯಾಚಾರ ಮತ್ತು ಪೋಕೋ ಪ್ರಕರಣಗಳನ್ನು ದಾಖಲಿಸುವ ಸಂದರ್ಭದಲ್ಲಿ ಪ್ರಥಮ ವರ್ತಮಾನ ವರದಿಯಲ್ಲಿ ನೊಂದ ಮಹಿಳೆ ಅಥವಾ ಅಪ್ರಾಪ್ತರ ಹೆಸರು ಮತ್ತು ವಿಳಾಸಗಳನ್ನು ಸಾರ್ವಜನಿಕಗೊಳಿಸುವ ಮತ್ತು ತನಿಖಾ ವರದಿಯಲ್ಲಿಯೂ ಸಹ ಗೌಪ್ಯತೆಯನ್ನು ಕಾಪಾಡಿಕೊಳ್ಳದೇ ಇರುವುದು ಕಂಡುಬಂದಿದ್ದು, ಇದರಿಂದ ಪ್ರಕರಣಗಳು ನ್ಯಾಯಾಲಯದ ವಿಚಾರಣೆ ಸಂದರ್ಭದಲ್ಲಿ ಆಕ್ಷೇಪಣೆ ವ್ಯಕ್ತಪಡಿಸುವ ಸಾಧ್ಯತೆ ಇರುತ್ತದೆ, ಆದುದರಿಂದ ಇನ್ನುಮುಂದೆ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳು ಮತ್ತು ತನಿಖಾಧಿಕಾರಿಗಳಿಗೆ ಅತ್ಯಾಚಾರಕ್ಕೆ ಒಳಗಾದ ಮಹಿಳೆ ಮತ್ತು ಅಪ್ರಾಪ್ತರ ಹೆಸರು ಮತ್ತು ವಿಳಾಸಗಳ ಗೌಪ್ಯತೆಯನ್ನು ಕಾಪಾಡಿ, ಸಲ್ಲಿಸುವ ದಾಖಲಾತಿಗಳಲ್ಲಿ ಹೆಸರು, ಗುರುತು ಮತ್ತು ವಿಳಾಸವನ್ನು ಗೌಪ್ಯತೆ ಕಾಪಾಡುವ ಕುರಿತಂತೆ ಈ ಕೆಳಗಿನ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿದೆ.

1. ಮೂಲ ದೂರು ಅರ್ಜಿಯಲ್ಲಿ ನೊಂದ ಮಹಿಳೆ ಅಥವಾ ಅಪ್ರಾಪ್ತರ ಹೆಸರು, ವಿಳಾಸ ಮತ್ತು ಗುರುತುಗಳ ವಿವರಗಳ ಇರತಕ್ಕದ್ದು.

2. ದೂರು ಸ್ವೀಕರಿಸಿದ ನಂತರ ಠಾಣಾಧಿಕಾರಿ/ ತನಿಖಾಧಿಕಾರಿಯು ಸದರಿ ಮೂಲ ದೂರಿನಲ್ಲಿನ ನೊಂದವರ ಗುರುತುಗಳ ಗೌಪ್ಯತೆ ಕಾಪಾಡಲು ಮೂಲ ಹೆಸರಿನ ಬದಲು ಬೇರೆ ಹೆಸರನ್ನು ಅಥವಾ ಅಕ್ಷರಗಳನ್ನು ನೀಡಿ ನ್ಯಾಯಾಲಯಕ್ಕೆ ಮೂಲ ದೂರು ಮತ್ತು ಯಾವ ಬದಲಿ ಹೆಸರು ನೀಡಲಾಗಿದೆ ಎಂಬುದನ್ನು ಸೀಲ್ಡ್ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವುದು ಕಡ್ಡಾಯ.

3. ಪ್ರಥಮ ವರ್ತಮಾನ ವರದಿಯಲ್ಲಿ ನೊಂದವರ ಮೂಲ ಹೆಸರು ದಾಖಲಿಸದೇ ಬದಲಿಸಿದ ಹೆಸರನ್ನು ಅಥವಾ ಅಕ್ಷರಗಳನ್ನು ಸ್ಪಷ್ಟವಾಗಿ ನಮೂದಿಸುವುದು ಮತ್ತು ಹೆಸರು ಬದಲಾಯಿಸಲಾಗಿದೆ ಎಂದು ಟಿಪ್ಪಣಿಯಲ್ಲಿ ನಮೂದಿಸುವುದು.

4. ನೊಂದವರ ಬದಲಾಯಿಸಿದ ಹೆಸರಿನಲ್ಲಿಯೇ ಇತರೆ ವ್ಯವಹಾರಗಳನ್ನು ಮಾಡುವುದು.

5. ತನಿಖೆಯಲ್ಲಿ ದಾಖಲು ಮಾಡಿಕೊಳ್ಳುವ ಸಾಕ್ಷಿದಾರರ ಹೇಳಿಕೆಗಳಲ್ಲಿ ನೊಂದವರ ಮೂಲ ಹೆಸರು ಮತ್ತು ಗುರುತಿಸುವಿಕೆಯನ್ನು ದಾಖಲು ಮಾಡಿಕೊಂಡ ನಂತರ ಆ ಹೇಳಿಕೆಗಳನ್ನು ಸೀಲ್ಡ್ ಲಕೋಟೆಯಲ್ಲಿ ಇರಿಸಿ ನೊಂದ ಮಹಿಳೆ ಅಥವಾ ಅಪ್ರಾಪ್ತರ ಬದಲಾಯಿತ ಹೆಸರಿನಲ್ಲಿ ಹೇಳಿಕೆಯ ಪ್ರತಿಗಳನ್ನು ನಿತ್ಯದ ತನಿಖೆಗಳಲ್ಲಿ ಬಳಸಿಕೊಳ್ಳುವುದು.

6. ದೋಷಾರೋಪಣಾ ವರದಿಯಲ್ಲಿ ನೊಂದ ಮಹಿಳೆ ಅಥವಾ ಅಪ್ರಾಪ್ತರ ಗುರುತು, ವಿಳಾಸವಿರುವ ವಿವರಗಳನ್ನು ಸ್ಪಷ್ಟವಾಗಿ ನಮೂದಿಸಿ ಆರೋಪಿಯ ವಿರುದ್ಧ ದೋಷಾರೋಪಣೆಯನ್ನು ರಚಿಸುವುದು ಮತ್ತು ಸದರಿ ದೋಷಾರೋಪಣಾ ವರದಿಯನ್ನು ಸೀಲ್ಡ್ ಕವರ್‌ನಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವುದು.

ಇದಕ್ಕೆ ಪ್ರತಿಯಾಗಿ ಮತ್ತೊಂದು ದೋಷಾರೋಪಣಾ ವರದಿಯ ಪ್ರತಿಯಲ್ಲಿ ನೊಂದ ಮಹಿಳೆ ಅಥವಾ ಅಪ್ರಾಪ್ತರ ಬದಲಾಯಿತ ಹೆಸರನ್ನು ಬಳಸಿಕೊಂಡು ದೋಷಾರೋಪಣಾ ಪ್ರತಿಯನ್ನು ತಯಾರಿಸುವುದು. ಸದರಿ ದೋಷಾರೋಪಣಾ ವರದಿಯ ಪ್ರತಿಯನ್ನು ಆರೋಪಿ ಮತ್ತು ಅಭಿಯೋಜಕರಿಗೆ ಪೂರೈಸಲು ಕ್ರಮ ಕೈಗೊಳ್ಳಲು ನ್ಯಾಯಾಲಯಕ್ಕೆ ನಿವೇದಿಸಿಕೊಳ್ಳಬೇಕು.

7. ನೊಂದ ಮಹಿಳೆ ಅಥವಾ ಅಪ್ರಾಪ್ತರ ನೈಜ ಹೆಸರು ಮತ್ತು ಗುರುತು ಇರುವ ಪ್ರಥಮ ವರ್ತಮಾನ ವರದಿ, ದೋಷಾರೋಪಣಾ ವರದಿಯ ದಾಖಲಾತಿಗಳನ್ನು ಸಾರ್ವಜನಿಕಗೊಳಿಸದಂತೆ ಎಲ್ಲಾ ಕ್ರಮಗಳನ್ನು ತನಿಖಾಧಿಕಾರಿಗಳು ಕೈಗೊಳ್ಳತಕ್ಕದ್ದು.

8. ಪೊಲೀಸ್ ಇಲಾಖೆಯ ಪ್ರಥಮ ವರ್ತಮಾನ ವರದಿಗಳು ಸಾರ್ವಜನಿಕವಾಗಿ ಲಭ್ಯವಾಗುವಂತೆ ಕೈಗೊಂಡಿರುವ ಡಿಜಿಟಲ್ ಪೋರ್ಟಲ್‌ಗಳಲ್ಲಿ ಮಹಿಳಾ ಬಲಾತ್ಕಾರ, ದೌರ್ಜನ್ಯ ಹಾಗೂ ಪೋಕೋ ಪ್ರಕರಣಗಳ ಪ್ರಥಮ ವರ್ತಮಾನ ವರದಿಗಳು ಸಾರ್ವಜನಿಕರಿಗೆ ಲಭ್ಯವಾಗದಂತೆ ಗೌಪ್ಯತೆಯನ್ನು ಕಾಪಾಡಿಕೊಂಡು ಸೂಕ್ತ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳುವುದು.

ಮೇಲ್ಕಾಣಿಸಿದ ಸೂಚನೆಗಳನ್ನು ಮತ್ತು ಉಲ್ಲೇಖಿತ ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳನ್ನು ರಾಜ್ಯದ ಎಲ್ಲಾ ಪೊಲೀಸ್ ಠಾಣಾಧಿಕಾರಿಗಳು ಹಾಗೂ ತನಿಖಾಧಿಕಾರಿಗಳು ಕಡ್ಡಾಯವಾಗಿ ಪಾಲಿಸತಕ್ಕದ್ದು. ಒಂದು ವೇಳೆ ಸೂಚನೆಗಳನ್ನು ಪಾಲಿಸದೇ ನಿರ್ಲಕ್ಷ್ಯತೆ ತೋರಿದಲ್ಲಿ ಅದನ್ನು ಗಂಭೀರ ಕರ್ತವ್ಯಲೋಪವೆಂದು ಪರಿಗಣಿಸಿ ಇಲಾಖಾ ಶಿಸ್ತು ಕೈಗೊಳ್ಳಲಾಗುವುದು.

ಘಟಕದ ಮುಖ್ಯಸ್ಥರು ಉಲ್ಲೇಖಿತ ಸರ್ವೋಚ್ಚ ನ್ಯಾಯಾಲಯ ತೀರ್ಪು, ಸ್ಥಾಯಿ ಆದೇಶ ಸಂಖ್ಯೆ:1024 ಮತ್ತು ಸುತ್ತೋಲೆಯಲ್ಲಿ ಮೇಲೆ ನೀಡಿರುವ ಸೂಚನೆಗಳನ್ನು ತಮ್ಮ ಅಧೀನ ಅಧಿಕಾರಿಗಳು ಕಡ್ಡಾಯವಾಗಿ ಪಾಲನೆ ಮಾಡುತ್ತಿರುವ ಬಗ್ಗೆ ಸೂಕ್ತ ಮೇಲ್ವಿಚಾರಣೆ ಮಾಡತಕ್ಕದ್ದು. ಅತ್ಯಾಚಾರಕ್ಕೆ ಒಳಗಾದ ಮಹಿಳೆ ಅಥವಾ ಅಪ್ರಾಪ್ತರ ಹೆಸರು ಮತ್ತು ಗುರುತುಗಳು ಸಾರ್ವಜನಿಕವಾಗದಂತೆ ನೋಡಿಕೊಂಡು ಗೌಪ್ಯತೆಯನ್ನು ಕಾಪಾಡಿಕೊಳ್ಳುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದು ಎಂದು ಹೇಳಲಾಗಿದೆ.

 

 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ