Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಿವಿಧ ಸರಕಾರಿ ಖಾಸಗಿ ಶಾಲೆಗಳಿಗೆ ಹಾಗೂ ಆಸ್ಪತ್ರೆಗಳಿಗೆ ಆಯೋಗದ ಸದಸ್ಯರ ಧಿಡೀರ್ ಭೇಟಿ

Advertisement
ಇಳಕಲ್:- ನಗರ ಸೇರಿದಂತೆ ತಾಲೂಕಿನ ವಿವಿಧ ಸರಕಾರಿ ಮತ್ತು ಖಾಸಗಿ ಶಾಲೆಗಳಿಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ ಕೋಸಂಬಿ ಮತ್ತು ಶೇಖರಗೌಡ ರಾಮತ್ನಾಳ ಶುಕ್ರವಾರದಂದು ಧಿಡೀರ್ ಭೇಟಿ ನೀಡಿ ಪರಿಶೀಲನೆ ಮಾಡಿದರು.
ನಗರದ ಕನ್ನಡ ಕಟ್ಟೆಯ ಹತ್ತಿರ ಇರುವ ಅಂಜುಮನ್ ಅರೇಬಿಕ್ ಜೋಡಮಸಜಿದ ಕಾಲೇಜಿಗೆ ಭೇಟಿ ನೀಡಿ ಅಲ್ಲಿನ ಕಡತಗಳನ್ನು ಮತ್ತು ವ್ಯವಸ್ಥೆಯನ್ನು ಪರಿಶೀಲನೆ ನಡೆಸಿದರು.



ನಂತರ ಅನಧಿಕೃತವಾಗಿ ಟ್ಯೂಶನ್ ಕ್ಲಾಸುಗಳನ್ನು ನಡೆಸುವ ಹಲವಾರು ಸಂಸ್ಥೆಗಳಿಗೆ ಭೇಟಿ ನೀಡಿ ಅವುಗಳ ಜನುಮವನ್ನು ಜಾಲಾಡಿದ ಅಧಿಕಾರಿಗಳಿಗೆ ಕಂದಗಲ್ಲ ಗ್ರಾಮದ ರಸ್ತೆಯ ಮಾರ್ಗವಾಗಿ ಹೋಗುವಾಗ ಬಾಲಕನೊಬ್ಬ ಕುರಿ ಕಾಯುತ್ತಿರುವದನ್ನು ಕಂಡು ಆ ಮಗುವನ್ನು ತಮ್ಮ ಬಳಿ ಕರೆದುಕೊಂಡು ಅವನನ್ನು ಆತ್ಮೀಯವಾಗಿ ಮಾತನಾಡಿಸಿ ಶಾಲೆಗೆ ಹೋಗುವುದನ್ನು ಬಿಟ್ಟು ಕುರಿ ಯಾಕೆ ಕಾಯುತ್ತಿದ್ದಿಯಾ ಎಂದು ಕೇಳಿದರು.



ನಂತರ ಅಲ್ಲಿಯೇ ಇದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲ್ಲೇದಾರ ಅವರಿಗೆ ಬಾಲಕನನ್ನು ಶಾಲೆಗೆ ಸೇರಿಸುವಂತೆ ಆತನ ಪಾಲಕರ ಮೇಲೆ ಒತ್ತಡ ತನ್ನಿ ಎಂದು ಹೇಳಿದರು.ಬಾಲಕ ಇಳಕಲ್ಲ ಅಲಂಪೂರಪೇಟೆಯ ಕೊರವರ ಸರಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯಾಗಿದ್ದು ಆಯೋಗದ ಸದಸ್ಯರು ಬಾಲಕನನ್ನು ಶಾಲೆಗೆ ಕರೆದುಕೊಂಡು ಬಂದು ಅಲ್ಲಿ ಮುಖ್ಯ ಗುರುಗಳ ಜೊತೆಗೆ ಮಾತನಾಡಿ ಶಾಲೆಗೆ ಸೇರಿಸಿದರು.

ನಂತರ ನಗರದಲ್ಲಿನ ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು.ಈ ಸಮಯದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಮುರಳೀಧರ ದೇಶಪಾಂಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲ್ಲೇದಾರ , ಜಿಲ್ಲಾ ಸಂಯೋಜನಾಧಿಕಾರಿ ಅಮರೇಶ ಎಚ್, ತಾಲೂಕಾ ವಸತಿ ನಿಲಯದ ಮೇಲ್ವಿಚಾರಕ ಸಂಗಮೇಶ ಗಡೇದ, ಸಿಡಿಪಿಓ ಗಿರಿತಿಮ್ಮಣ್ಣನವರ, ಡಿಎಚ್‌ಓ ಅಂಗಡಿ, ಮಲ್ಲಿಕಾರ್ಜುನ ಕಟ್ಟಿಮನಿ, ಪಿಎಸ್ ಐ ಎಸ್.ಆರ್.ನಾಯಕ ಮತ್ತಿತರ ಅಧಿಕಾರಿಗಳು ಇದ್ದರು.

ವರದಿ ದಾವಲ್ ಶೇಡಂ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ