
ಪ್ರವಾದಿಯವರ ಜನ್ಮದಿನಾರಣೆ ಅಂಗವಾಗಿ ರೋಗಿಗಳಿಗೆ ಹಾಲು ಬ್ರೆಡ್ ವಿತರಣೆ ಪ್ರವಾದಿ ಹಜರತ್ ಮಹ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವ ಸ್ವಲ್ಲಂ ಅವರ 1499 ನೇ ಜನ್ಮ ದಿನಾಚರಣೆಯ ಅಂಗವಾಗಿ ಮುಸ್ಲಿಂ ಬಾಂಧವರು "ಈದ್ ಮಿಲಾದ್ " ಹಬ್ಬವನ್ನು ಅತ್ಯಂತ ಅದ್ದೂರಿಯಾಗಿ ಆಚರಿಸುತ್ತಾರೆ ಹಜರತ್ ಹುಸೇನಿ ಆಲಂ ಆಶೂರ್ ಖಾನಾ ಕಮೀಟಿ ವತಿಯಿಂದ ಅಧ್ಯಕ್ಷ ಎಸ್.ಎ.ನಯೀಮ್ ಜುನೈದಿ ಅವರ ನೇತೃತ್ವದಲ್ಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಾಲು ಬ್ರೆಡ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮೌಲಾನಾ ಮಹಮ್ಮದ್ ಹಾಶೀಮ್, ಕಮೀಟಿ ಅಧ್ಯಕ್ಷ ಎಸ್.ಎ.ನಯೀಮ್, ಮೌಲಾನಾ ಅಬ್ದುಲ್ ಘನಿ, ಡಾ॥ ಚಂದ್ರಕಾಂತ, ಡಾ॥ ವಿನೋದ ಕುಮಾರ, ಮುಕ್ತುಮ್ ಸಾಬ್, ರಹೆಮಾನ ದೂಲಾ, ಜುಬೇರ ಪಾಷಾ, ಎಸ್.ಎನ್.ಖಾದ್ರಿ, ಇಕ್ಬಾಲ್ ಜಮೀನದಾರ, ಗಫೂರ್ ಖಾನ್, ತಸ್ಲೀಮ್ ಮುಲ್ಲಾ, ಇಸ್ಮಾಯಿಲ್ ಕೊಳ್ಳಿ, ಹನೀಫ್ ಖಾನ್, ಶಮಶಾವಲಿ, ರಾಜಾಸಾಬ್ ಖುರೇಶಿ, ರಹೀಮುದ್ದೀನ್ ಪಟೇಲ್, ಖಯ್ಯೂಮ್ ಶಾ, ಅಬ್ದುಲ್ ಘನಿ ಶಾ, ಖಾಲೀದ್ ಉಪಸ್ಥಿತರಿದ್ದರು.
ವರದಿ:- ಮಂಜುನಾಥ ಕುಂಬಾರ

