ಸೇಡಂ:ತಾಲೂಕಿನ ಸಿಲಾರಕೋಟ್ ಗ್ರಾಮದಲ್ಲಿ ಸೇಡಂ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಡಾಕ್ಟರ್ ಶರಣಪ್ರಕಾಶ್ ಪಾಟೀಲ್ ಅವರನ್ನು ಉಪಮುಖ್ಯಮಂತ್ರಿ ಮಾಡಲಿ ಕಾಂಗ್ರೆಸ್ ಮುಖಂಡರಾದ ಭೀಮರೆಡ್ಡಿ ದೇವಾಡಿ ಅವರ ನೇತೃತ್ವದಲ್ಲಿ ಶ್ರೀರಾಮ ಮಂದಿರದಲ್ಲಿ ವಿಶೇಷ ಪೂಜಾ ಮಾಡಿದರು.
ಈ ವೇಳೆ ಮಾತನಾಡಿದ ಭೀಮರೆಡ್ಡಿ ಅವರು ಕಾಂಗ್ರೆಸ್ ಹೈಕಮಾಂಡ್ ನಿರ್ಣಯದಂತೆ ಸಿಎಂ ಬದಲಾವಣೆ ಆಗುತ್ತಿದ್ದು ಹೊಸ ಮಂತ್ರಿಮಂಡಲ ರಚನೆಯಲ್ಲಿ ನಮ್ಮ ನೆಚ್ಚಿನ ನಾಯಕರಾದ ಡಾಕ್ಟರ್ ಶರಣಪ್ರಕಾಶ್ ಪಾಟೀಲ್ ಅವರನ್ನು ಉಪಮುಖ್ಯಮಂತ್ರಿ ಮಾಡಬೇಕು ಎಂದು ಮಾದ್ಯಮದ ಮುಖಾಂತರ ಮನವಿ ಮಾಡಿದರು.
ಇದೇ ವೇಳೆ ಮಹಿಪಾಲರೆಡ್ಡಿ ಆಕುದೊಟ ಅವರು ಮಾತನಾಡಿ ಶಾಸಕರಾದ ಡಾಕ್ಟರ್ ಶರಣಪ್ರಕಾಶ್ ಪಾಟೀಲ್ ಅವರು ಈ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಮತ್ತು ಎರಡು ಬಾರಿ ಮಂತ್ರಿಯಾಗಿ ಜನಸೇವೆಯಲ್ಲಿ ನಿರತರಾಗಿದ್ದಾರೆ.
ಸೇಡಂ ಕ್ಷೇತ್ರದ ಅಭಿವೃದ್ಧಿಯ ಹರಿಕಾರರೆಂದೇ ಹೆಸರುವಾಸಿಯಾಗಿರುವ ನಮ್ಮ ಕ್ಷೇತ್ರದ ಶಾಸಕರು ಹಾಗೂ ಸಚಿವರಾದ ಡಾಕ್ಟರ್ ಶರಣಪ್ರಕಾಶ್ ಪಾಟೀಲ್ ಅವರಿಗೆ ನೂತನವಾಗಿ ರಚನೆಯಾಗುತ್ತಿರುವ ಮಂತ್ರಿಮಂಡಲದಲ್ಲಿ ಉಪಮುಖ್ಯಮಂತ್ರಿ ಸ್ಥಾನ ನೀಡಿ ಪಕ್ಷಬಲಿಷ್ಟಕ್ಕೆ ಒತ್ತುಕೊಡಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಸದಸ್ಯರಾದ ಭೀಮರೆಡ್ಡಿ ದೇವಾಡಿ, ಮುಖಂಡರಾದ ಮಹಿಪಾಲರೆಡ್ಡಿ ಆಕುದೋಟ, ಬಸವರಾಜ ಸಾಹುಕಾರ್, ಸಾಯಿರೆಡ್ಡಿ ಇಟ್ಲಾಪುರ, ರಾಮಕೃಷ್ಣ ಹಡಪದ್, ರಮೇಶ್ ಪೂಜಾರಿ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.
ವರದಿ :ವೆಂಕಟಪ್ಪ ಕೆ ಸುಗ್ಗಾಲ್

