Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಒಂದೇ ದಿನ ತಿಮ್ಮಪ್ಪ ಹುಂಡಿಗೆ 96.98 ಕೋಟಿ ರೂ ದೇಣಿಗೆ ಸಂಗ್ರಹ 

Advertisement

ತಿರುಮಲ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಮಂಗಳವಾರ ಕಾಣಿಕೆ ಹುಂಡಿ ಸಂಗ್ರಹದಲ್ಲಿ ದಾಖಲೆಯಾಗಿದ್ದು, ಒಂದೇ ದಿನ 96.98 ಕೋಟಿ ರೂಪಾಯಿ ಸಂಗ್ರಹವಾಗಿದೆ.ಬುಧವಾರ ಟಿಟಿಡಿ ವತಿಯಿಂದ ಹೊಸ ದೇಣಿಗೆ ನೀತಿ ಪ್ರಕಟಿಸಲಾಗಿತ್ತು.

ಹೊಸ ರೀತಿ ಜಾರಿಯಾದ ನಂತರವೂ ಮಂಗಳವಾರದ ಒಳಗೆ ದೇಣಿಗೆ ನೀಡಿದವರಿಗೆ ದೇವಾಲಯದಲ್ಲಿನ ಹಳೆಯ ಸೌಲಭ್ಯಗಳು ಮುಂದುವರೆಯಲಿವೆ ಎಂದು ಘೋಷಣೆ ಮಾಡಲಾಗಿತ್ತು. ಈಗಾಗಿ ಮಂಗಳವಾರ ಭಾರೀ ದೇಣಿಗೆ ಹರಿದು ಬಂದಿದೆ.

ದೇವಾಲಯಕ್ಕೆ ಕಾಣಿಕೆ ನೀಡಿದ ಭಕ್ತರಲ್ಲಿ ಮಧ್ಯಮ ವರ್ಗದವರೇ ಹೆಚ್ಚಾಗಿದ್ದಾರೆ. 2460 ಮಂದಿ ಅಧಿಕೃತ ವೇದಿಕೆಗಳ ಮೂಲಕ ಕಾಣಿಕೆ ನೀಡಿದ್ದಾರೆ. 2354 ಜನ ಆನ್ಲೈನ್ ಮೂಲಕ, ಅಪಾರ ಭಕ್ತರು ಆಫ್ ಲೈನ್ ನಲ್ಲಿ ಕಾಣಿಕೆ ನೀಡಿದ್ದಾರೆ.

ಇದರಲ್ಲಿ ಇಬ್ಬರು ಭಕ್ತರು ತಲಾ ಒಂದು ಕೋಟಿ ರೂ. ದೇಣಿಗೆ ನೀಡಿದ್ದಾರೆ. ಈ ಮೂಲಕ ಕಳೆದ ಮಂಗಳವಾರ ಕಾಣಿಕೆ ಹುಂಡಿ ಸಂಗ್ರಹದಲ್ಲಿ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ದಾಖಲೆ ಬರೆದಿದ್ದು, ಒಂದೇ ದಿನ 96.98 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ ಎಂದು ಹೇಳಲಾಗಿದೆ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST