Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನರೇಗಾ ಯೋಜನೆಯಲ್ಲಿ ಹೂಳೆತ್ತಿದ್ದ ಟ್ರ್ಯಾಕ್ಟರ್ ಬಾಡಿಗೆ ನೀಡುವಂತೆ ಒತ್ತಾಯ

Advertisement
ಸಿರುಗುಪ್ಪ : ನರೇಗಾ ಯೋಜನೆಯಲ್ಲಿ ಹೂಳು ತೆಗೆಯುವಲ್ಲಿ ಬಳಸಲಾದ ಟ್ರ್ಯಾಕ್ಟರ್ ಗಳ ಬಾಡಿಗೆಯನ್ನು ನೀಡುವಂತೆ ಒತ್ತಾಯಿಸಿ ನಗರದ ತಾಲೂಕು ಪಂಚಾಯಿತಿ ಕಛೇರಿಯಲ್ಲಿ ಹೆರಕಲ್ ಮತ್ತು ಕೆಂಚನಗುಡ್ಡ ಗ್ರಾಮದ ಟ್ರ್ಯಾಕ್ಟರ್ ಗಳ ಮಾಲೀಕರು ಇ.ಓ ಅವರಿಗೆ ವ್ಯವಸ್ಥಾಪಕ ಬಸವರಾಜ ಅವರ ಮೂಲಕ ಮನವಿ ಸಲ್ಲಿಸಿದರು.

ಕೆಂಚನಗುಡ್ಡ ಗ್ರಾಮದ ಮುಖಂಡ ಬಿ.ಸುರೇಶ ಮಾತನಾಡಿ ಕೆಂಚನಗುಡ್ಡ ಗ್ರಾಮ ಪಂಚಾಯಿತಿ ವತಿಯಿಂದ ನರೇಗಾ ಯೋಜನೆಯಡಿಯಲ್ಲಿ ಮಾಳಾಪುರ ಕೆರೆಯಲ್ಲಿ ಹೆರಕಲ್ ಮತ್ತು ಕೆಂಚನಗುಡ್ಡ ಗ್ರಾಮದ ಖಾತ್ರಿ ಯೋಜನೆಯ ಕಾರ್ಮಿಕರು ತೆಗೆದ ಹೂಳೆತ್ತಲು ಬಿಡಲಾದ ಟ್ರ್ಯಾಕ್ಟರ್ ಗಳ ಬಾಡಿಗೆ ಹಣವನ್ನು ಎರಡು ವರ್ಷಗಳೇ ಕಳೆದರೂ ನೀಡಿರುವುದಿಲ್ಲ.

ಆ ಸಮಯದಲ್ಲಿ ಸದರಿ ಕಾಮಗಾರಿಯನ್ನು ನಮ್ಮ ಸ್ವಂತ ಖರ್ಚಿನಲ್ಲೇ ಟ್ರ್ಯಾಕ್ಟರ್ ಡೀಸೆಲ್, ಚಾಲಕನ ಭತ್ಯೆಯನ್ನು ನೀಡಿದ್ದು, ನಮಗೆ ಇಲ್ಲಿಯವರೆಗೂ ಯೋಜನೆಯಿಂದ ಹಣ ಬಾರದೇ ನಮಗೆ ಅನ್ಯಾಯವಾಗಿದೆ. ಈ ವಿಷಯವಾಗಿ ನಾವುಗಳು ಕೆಂಚನಗುಡ್ಡ ಗ್ರಾಮ ಪಂಚಾಯಿತಿಗೆ ಹೋಗಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.

ಆದಕಾರಣ ತಾವು ಕೂಡಲೇ ಸಂಬಂದಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದು ನಮಗೆ ಬರಬೇಕಾದ ಬಾಡಿಗೆ ಹಣವನ್ನು 10 ದಿನಗಳೊಳಗೆ ಕೊಡಿಸಬೇಕು.

ಈ ಬಗ್ಗೆ ಕ್ರಮಕೈಗೊಳ್ಳದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಕಛೇರಿಗೆ ಬೀಗ ಹಾಕಿ ಉಗ್ರ ಹೋರಾಟ ಮಾಡಬೇಕಾಗುವುದು.

ಆದ್ದರಿಂದ ಇದಕ್ಕೆ ಅವಕಾಶ ಮಾಡಿಕೊಡದೇ ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಿ ನಮಗೆ ಬರಬೇಕಾದ ಹಣವನ್ನು ಬಿಡುಗಡೆಗೊಳಿಸಿ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.

ಇದೇ ವೇಳೆ ಹೆರಕಲ್ ಮತ್ತು ಕೆಂಚನಗುಡ್ಡ ಗ್ರಾಮದ ಮುಖಂಡರಾದ ರಾಮಪ್ಪ, ಬಿ.ವೀರೇಶ, ಬಿ.ಶರಣಪ್ಪ, ಎಮ್.ಅಡಿವೆಪ್ಪ, ಎಮ್.ಅಂಬರೇಶ, ಬಿ.ಹನುಮಂತ, ಕೆ.ವೀರೇಶ, ಕೆ.ಗೋವಿಂದ, ಕೆ.ಮುತ್ತಣ್ಣ, ಕೆ.ಜಿತೇಂದ್ರ ಇದ್ದರು.

ವರದಿ: ಶ್ರೀನಿವಾಸ ನಾಯ್ಕ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ