
ಈ ವೇಳೆ ಮೀನಾಕ್ಷಿ ಪಾಟೀಲ್ ಅವರು ಮಾತನಾಡಿ ಸೇಡಂ ತಾಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ ಪದವಿ ಅಥವಾ ಉನ್ನತಶಿಕ್ಷಣ ಪಡೆದ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಇದ್ದಲ್ಲಿ ಅ ಕೇಂದ್ರವನ್ನು ಆಯ್ಕೆ ಮಾಡಿ ಮತ್ತು ಮಕ್ಕಳ ಶಿಕ್ಷಣ ಗುಣಮಟ್ಟವು ಪೂರ್ವ ಶಿಕ್ಷಣದಿಂದ ಬೆಳೆಯಬೇಕು ಎನ್ನುವ ದೃಷ್ಟಿಯಿಂದ ಸರ್ಕಾರವು ಈ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿದರು.
ಇದೇ ವೇಳೆ ಗ್ರಾಮ ಪಂಚಾಯಿತಿ ಸದಸ್ಯರಾದ ಆನಂದ್ ಶಿವನೊಳ್ ಮಾತನಾಡಿ ಗ್ರಾಮದ ಅಭಿವೃದ್ಧಿಯ ಜೊತೆಯಲ್ಲಿ ಶಾಲೆಗಳ ಅಭಿವೃದ್ಧಿ ಮೂಲಭೂತ ಸೌಕರ್ಯಗಳು ಮತ್ತು ಮಕ್ಕಳ ಶಿಕ್ಷಣದ ಗುಣಮಟ್ಟ ಪಾಠದ ಜೊತೆಯಲ್ಲಿ ಆಟವು ಮುಖ್ಯ ಎಂದು ಹೇಳಿ ಪ್ರತಿ ಶಾಲೆಗೆ ಕ್ರೀಡಾ ಕಿಟ್ ಗಳನ್ನು ನೀಡಲಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಸದಸ್ಯರುಗಳಾದ ಲಾಲಪ್ಪ ಯಾದವ್, ಶಶಿಕುಮಾರ್, ನರ್ಮದಾ, ಸಮೀನ ಬೇಗಂ ಶಿಕ್ಷಕರುಗಳಾದ ನಾರಾಯಣರೆಡ್ಡಿ, ಸತೀಶ್ ಢಗೆ, ಶಿಲ್ಪಾ, ದೇವೀಂದ್ರಮ್ಮ ಅಂಗನವಾಡಿ ಶಿಕ್ಷಕಿ, ಸಾವಿತ್ರಮ್ಮ ಸಹಾಯಕಿ, ಶಿಕ್ಷಣ ಪ್ರೇಮಿಗಳು, ಮಕ್ಕಳ ಪೋಷಕರು, ಶಾಲಾ ಮಕ್ಕಳು ಇದ್ದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.

