
ಗ್ರಾಮ ಪಂಚಾಯಿತಿಯಿಂದ ಅಮೃತ ಸರೋವರವರೆಗೂ ಶಾಲಾ ಮಕ್ಕಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಿಂದ ತಿರಂಘಾ ಯಾತ್ರೆ ಜರಗಿತು. ಎನ್ ಸಿಸಿ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯ ಕೈಗೊಂಡು ಸಂಭ್ರಮಕ್ಕೆ ಸಾಥ್ ನೀಡಿದರು.

ಈ ಸಂದರ್ಭದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಹಾಂತೇಶ ಗೋಡಿ, ಐಇಸಿ ಸಂಯೋಜಕ ಬಸವರಾಜ ಕೊಪ್ಪದ, ಗ್ರಾಮ ಅಧ್ಯಕ್ಷ ಹನುಮಂತ ಆಡಿನ, ತಾಂತ್ರಿಕ ಸಹಾಯಕ ಅಜಿತ್ ಕೊಣ್ಣೂರ, ಅಕೌಂಟೆಂಟ್ ಹನುಮಂತ ಕುರಿ, ಡಾಟಾ ಎಂಟ್ರಿ ಆಪರೇಟರ್ ಮುನ್ನಾ, ಬಿಎಫ್ ಟಿ ರಾಜು ವಾಲಿಕಾರ್, ಗ್ರಾಪಂ ಸದಸ್ಯರಾದ ಶರಣಪ್ಪ ಮಾಲಗಿತ್ತಿ, ಪರಶುರಾಮ ಮಾದರ, ನೀಲಪ್ಪ ಚಿಮ್ಮಲಗೇರಿ, ಜಗದೀಶ್ ಕೆಂದೂರ, ಕಲ್ಲಿನಾಥ ಸಾಲಿಮಠ, ಹನುಮಂತಗೌಡ ಪಾಟೀಲ, ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ, ಶಾಲಾ ಶಿಕ್ಷಕರು, ಎನ್ ಸಿಸಿ ವಿದ್ಯಾರ್ಥಿಗಳು, ಶಾಲಾ ಮಕ್ಕಳು, ಗ್ರಾಮಸ್ಥರು ಉಪಸ್ಥಿತರಿದ್ದರು.

