Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

KUWSDB ಅಮೃತ್‌ 2.0 ಕೆಲಸದಲ್ಲಿ ಪಾಲಿಸುತ್ತಿಲ್ಲ ವೈಜ್ಞಾನಿಕ ನಿಯಮ

Advertisement
ರಸ್ತೆಗಳಲ್ಲಿ ನಿರ್ಮಿಸಿದ ಬೃಹತ್‌ ಗುಂಡಿಗಳಿಂದ ಜನರ ಜೀವಕ್ಕೆ ಕಾದಿದೆ ಸಂಚಕಾರ

ಚಿಕ್ಕಮಗಳೂರು :ಜಿಲ್ಲೆಯ ಮೂಡಿಗೆರೆ ಪಟ್ಟಣ ಭಾಗದ ಜನರಿಗೆ ನಿರಂತರ ನೀರೊದಗಿಸುವ ಬಹು ನಿರಕ್ಷಿತ ಯೋಜನೆಗಳಲ್ಲಿ ಒಂದಾದ ಪ್ರತಿ ಮನೆಗೆ ಗಂಗೆ ಯೋಜನೆಯ ಕಾಮಗಾರಿಯು ಬಹುತೇಕ ಅವೈಜ್ಞಾನಿಕ ಕ್ರಮದಿಂದ ಕೂಡಿದ್ದು ನೋಡಿದರೆ ಇಲ್ಲಿ ನಡೆಯುತ್ತಿರುವ ಕಾಮಗಾರಿ ಬಹುತೇಕ ಕಳಪೆ ಹಾಗು ಅವೈಜ್ಞಾನಿಕವಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಬಹುತೇಕ ಚರ್ಚೆಗೆ ಗ್ರಾಸವಾಗಿದೆ.

ಬಹುತೇಕ ಒಂದು ವರ್ಷದಿಂದ ಪಟ್ಟಣದಲ್ಲಿ ಶಾಸ್ವತ ಕುಡಿಯುವ ನೀರಿನ ಸಂಪರ್ಕಕ್ಕೆ ಕೈಗೆತ್ತಿಕೊಂಡ ಕಾಮಗಾರಿಯು ಪಟ್ಟಣದಾದ್ಯಂತ ಹಲವಾರು ರಸ್ತೆ ಸೇರಿದಂತೆ ವಿದ್ಯುತ್‌ ಸಂಪರ್ಕ, ನೀರು, ಹಾಗು ಇನ್ನಿತರ ಮೂಲ ಸೌಕರ್ಯ ಕಡಿತಗೊಂಡು ಇಲ್ಲಿನ ಜನರು ಪಡಬಾರದ ಕಷ್ಟ ಪಟ್ಟಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು.

[caption id="attachment_200967" align="alignnone" width="225"] ಯಾವುದೇ ಸರಕಾರಿ ಇಂಜಿನಿಯರ್ ಸ್ಥಳದಲ್ಲಿ ಇಲ್ಲದೆ ಭರದಿಂದ ಸಾಗುತ್ತಿದೆ ಓವರ್ ಹೆಡ್ ಟ್ಯಾಂಕ್ ಕಾಮಗಾರಿ[/caption]

ಇಲ್ಲಿ ನಡೆಯುತ್ತಿರುವ ಕಾಮಗಾರಿಯ ಗುಣಮಟ್ಟ ಹಾಗು ವೈಜ್ಞಾನಿಕ ನಿಯಮವನ್ನು ಪಾಲಿಸಲು ಸಂಭಂದಪಟ್ಟ ಗುತ್ತಿಗೆದಾರರೊಂದಿಗೆ ಸರ್ಕಾರದಿಂದ ನೇಮಿಸಲ್ಪಟ್ಟ ಹಾಗು ಈ ಒಂದು ಪ್ರಸ್ತುತ ಕಾಮಗಾರಿಗೆ ಸಂಭಂದಪಟ್ಟ ಇಂಜಿನಿಯರ್‌ ಸ್ಥಳದಲ್ಲಿ ಇದ್ದು ನಿರ್ಮಾಣ ಕಾಮಗಾರಿಯಲ್ಲಿ ವೈಜ್ಞಾನಿಕ ಸೂಚನೆ ಹಾಗು ಗುಣಮಟ್ಟವನ್ನು ಪರಿಶೀಲಿಸಬೇಕು ಅದು ಅವರ ಕರ್ತವ್ಯ. ಅದನ್ನು ಬಿಟ್ಟು ಇಲ್ಲಿ ಗುತ್ತಿಗೆದಾರರಾಗಲಿ ಇದರ ಅನ್ವಯ ಸರ್ಕಾರದಿಂದ ನೇಮಿಸಲ್ಪಟ್ಟ KUWSDB ಉಸ್ತುವಾರಿ ಇಂಜಿನಿಯರ್‌ ʼಮಾರುತಿ, ಅವರೂ ಕೂಡ ಸಕಾಲದಲ್ಲಿ ಸ್ಥಳದಲ್ಲಿ ಇರದೇ ಕಳಪೆ ಹಾಗು ಅವೈಜ್ಞಾನಿಕ ಕೆಲಸಕ್ಕೆ ಕೈಜೊಡಿಸಿದ್ದು ಎದ್ದು ಕಾಣುತ್ತದೆ.

[caption id="attachment_200969" align="alignnone" width="300"] ಪೈಪ್ ಅಳವಡಿಸಿ ಯಾವುದೇ ಸೂಚನಾ ಫಲಕ ಇಲ್ಲದೆ ಮುಚ್ಚದಿರುವ ಗುಂಡಿ[/caption]

ಪ್ರಸ್ತುತ ಕಾಮಗಾರಿಯ KUWSDB ಸಹಾಯಕ ಕಾರ್ಯಪಾಲಕ ಅಭಿಯಂತರರಾದ ʼಆನಂದ್‌, ಅವರಿಗೆ ಈ ಎಲ್ಲಾ ಬೆಳವಣಿಗೆಗಳು ತಿಳಿದಿದ್ದರೂ ತನಗೂ ಅದಕ್ಕೂ ಯಾವುದೇ ಸಂಭಂದವಿಲ್ಲ ಎಂಬಂತೆ ಕೇವಲ ಇವರ ಅಧೀನದಲ್ಲಿ ಬರುವ ಇಂಜಿನಿಯರ್‌ ಗಳು ನೀಡಿದ ಮಾಹಿತಿಗೆ ಟೇಬಲ್‌ ಟು ಟೇಬಲ್‌ ಸಹಿ ಮಾಡಿ ಕುರ್ಚಿಯನ್ನು ಬೆಚ್ಚಗೆ ಮಾಡುವ ಇಂತಹ ಅಧಿಕಾರಿಗಳಿಂದ ಯಾವುದೇ ಬದಲಾವಣೆ ನೀರಿಕ್ಷೆ ಮಾಡಲು ಸಾದ್ಯವಿಲ್ಲ.

[caption id="attachment_200968" align="alignnone" width="169"] ಕಳಪೆ ಕಾಮಗಾರಿ ಮೂಲಕ 6 ಇಂಚು ಕಾಂಕ್ರೀಟ್ ಬದಲು 2 ಇಂಚು ಹಾಕಿ ರೋಡಿನ ಚರೆಂಡಿ ಮುಚ್ಚಿರುವುದು[/caption]

ಒಟ್ಟಿನಲ್ಲಿ ಬಹು ನಿರೀಕ್ಷಿತ ಯೋಜನೆಯ ಕಾಮಗಾರಿಯು ನಡೆಯುವಾಗ ಕೆಲವೊಂದು ಸುರಕ್ಷತಾ ಕ್ರಮವನ್ನು ತೆಗೆದು ಕೊಳ್ಳುವುದು ಅಧಿಕಾರಿಗಳ ಜವಬ್ದಾರಿ ಅದನ್ನು ಬಿಟ್ಟು ಇಂತಹ ಕಾಮಗಾರಿ ನಡೆಯುವಾಗ ಅವ್ಯಜ್ಞಾನಿಕ ನಡೆ ಹಾಗು ಬೇಜವಬ್ದಾರಿ ಕಾಮಾಗಾರಿಗಳಿಂದ ದ್ವಿಚಕ್ರ ವಾಹನಗಳು ಗುಂಡಿಗೆ ಬಿದ್ದು ಎಷ್ಟೋ ಜನರಿಗೆ ಕಷ್ಟದ ಜೊತೆಗೆ ಬಹಳಷ್ಟು ನಷ್ಟವಾಗಿದ್ದು ಇಂತಹ ಬೇಜವಬ್ದಾರಿ ಅಧಿಕಾರಿಗಳಿಂದ ಸರ್ಕಾರಕ್ಕೂ ನಷ್ಟ ಹಾಗು ಇಲ್ಲಿನ ಜನರ ನೆಮ್ಮದಿಗೂ ನಷ್ಟ.

ಮೂಡಿಗೆರೆ ಪಟ್ಟಣದಲ್ಲಿ ನಡೆಯುತ್ತಿರುವ ಹಾಗು ಬಹುತೇಕ ಮುಕ್ತಾಯದ ಅಂತದಲ್ಲಿ ಇರುವ ಈ ಒಂದು ಕಾಮಗಾರಿ ನಡೆಯುವ ಸ್ಥಳಕ್ಕೆ ಜನರ ಸುರಕ್ಷತೆ ಹಾಗು ಕಾಮಗಾರಿಯ ಗುಣಮಟ್ಟದ ಪಾರದರ್ಶಕತೆಯ ಸಲುವಾಗಿ ಜಿಲ್ಲಾಧಿಕಾರಿಗಳು ಗಮನ ಹರಿಸಿ ಕಟ್ಟು ನಿಟ್ಟಿನ ಕ್ರಮವನ್ನು ಕೈಗೊಳ್ಳಬೇಕಾಗಿದೆ. ಹಾಗು ಈ ಸಂಭಂದ ಸಾಮಾಜಿಕ ಕಳಕಳಿಯನ್ನು ಒತ್ತು ಪತ್ರಿಕೆಯು ನಿರಂತರವಾಗಿ ಈ ಒಂದು ವಿಚಾರವಾಗಿ ಉನ್ನತ ಮಟ್ಟದ ಅಧಿಕಾರಿಗಳ ಗಮನವನ್ನು ಸೆಳೆಯುವ ನಿಟ್ಟಿನಲ್ಲಿ ಇನ್ನಷ್ಟು ಲೋಪಗಳ ಕುರಿತು ವಸ್ತುನಿಷ್ಟ ವರಧಿಯನ್ನು ಪ್ರಕಟಿಸಲಿದೆ.

ವರದಿ :ನಿತೀಶಗೌಡ ತಡಸ ಪಾಟೀಲ್
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ೨೦೬ ರನ್‌ಗಳ ಗೆಲುವಿನ ಗುರಿನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್