
ರೈತ ಮಹಿಳೆ ಭಾರತಿ (48) 3 ದಿನಗಳ ಹಿಂದೆ ಸಂಶಯಾಸ್ಪದವಾಗಿ ಸಾವಿಗೀಡಾಗಿದ್ದಳು. ಗ್ರಾಮದ ಶ್ರೀ ಮಸಣವ್ವ ದೇವಸ್ಥಾನದಲ್ಲಿ ಕೆಲವರು ಕಳ್ಳತನದಲ್ಲಿ ತೊಡಗಿದ್ದಾಗ ಮಹಿಳೆ ನೋಡಿದ್ದಾಳೆ ಎಂಬ ಕಾರಣಕ್ಕೆ ಕಳ್ಳರು ಮಹಿಳೆಯನ್ನು ಬಾವಿಗೆ ನೂಕಿ ಕೊಲೆ ಮಾಡಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಮೃತ ಮಹಿಳೆಯ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಧೈರ್ಯ ತುಂಬಿ, ಸಾಂತ್ವನ ಹೇಳಿದ ಸಚಿವರು, ಘಟನೆಯ ತನಿಖೆಯನ್ನು ಚುರುಕುಗೊಳಿಸುವಂತೆ ಪೊಲೀಸರಿಗೆ ಸೂಚಿಸಿದರು.
ವರದಿ ಪ್ರತೀಕ ಚಿಟಗಿ

