Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮೋದಿಯವರು ಮತ್ತೊಮ್ಮೆ ಪ್ರಧಾನಿ ಆದರೆ

Advertisement
ಬೆಳಗಾವಿ:- ಮೋದಿಯವರು ಮತ್ತೊಮ್ಮೆ ಪ್ರಧಾನಿ ಆದರೆ ಕಾಮನ್ ಸಿವಿಲ್ ಕೋರ್ಟ್ ದೇಶಾದ್ಯಂತ ಜಾರಿಗೆ ತರುತ್ತೇವೆ. ಅಧಿಕಾರಕ್ಕೆ ಬಂದ ಮೇಲೆ ಮುಂದಿನ ಐದು ವರ್ಷದ ಕೆಲಸಗಳು ಮೊದಲೇ ಜಾರಿಗೆ ತಂದು, ಭ್ರಷ್ಟಾಚಾರ ರಹಿತ ಆಡಳಿ ಮಾಡುತ್ತೇವೆ. ನಾನು ಲೋಕಸಭೆಗೆ ಆಯ್ಕೆ ಆದರೆ ಬೆಳಗಾವಿ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ತಿಳಿಸಿದರು.‌



ಶುಕ್ರವಾರ ಬೆಳಗಾವಿ ಕೋರ್ಟ್ ಆವರಣದಲ್ಲಿ ಇರುವ ವಕೀಲರ ಸಂಘದ ಸಭಾ ಭವನದಲ್ಲಿ ಆಯೋಜನೆ ಮಾಡಲಾಗಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಾನು ಯಾವುದಾದರೂ ಯೋಜನೆ ಹಾಕಿಕೊಂಡರೆ ಅದನ್ನು ಕಾರ್ಯರೂಪಕ್ಕೆ ತಂದೆ ತರುತ್ತೇನೆ. ಹುಬ್ಬಳ್ಳಿ ಮಾದರಿಯಲ್ಲಿ ಬೆಳಗಾವಿಯಲ್ಲೂ ಕೂಡಾ ಕೋರ್ಟ್ ಆವರಣ ಅಭಿವೃದ್ಧಿ ಪಡಿಸಲಾಗುವುದು ಎಂದು ಭರವಸೆ ನೀಡಿದರು.‌



ನಾನು ರಾಜಕಾರಣಿ ಎನ್ನುವುದಕ್ಕಿಂತ ನಾನೊಬ್ಬ ವಕೀಲ.‌ ಇಡೀ ರಾಜ್ಯದಲ್ಲಿ ದೊಡ್ಡದಾದ ಬಾರ್ ಅಸೋಸಿಯೇಷನ್ ಅಂದರೆ ಅದು ಬೆಳಗಾವಿ ಬಾರ್ ಅಸೋಸಿಯೇಷನ್. 15 ವರ್ಷ ಹುಬ್ಬಳ್ಳಿ ಧಾರವಾಡ ಕೋರ್ಟ್ ನಲ್ಲಿ ವಕೀಲನಾಗಿ ತರಬೇತಿ ಪಡೆದಿದ್ದೇನೆ.‌ 1994 ರಲ್ಲಿ ಶಾಸಕನಾದಾಗಿ ಕೇಲಸದ ಒತ್ತಡದಲ್ಲಿ ತರಬೇತಿ ಮುಂದು ವರೆಸಲು ಆಗಲಿಲ್ಲ ಎಂದು ತಿಳಿಸಿದರು.‌



ನ್ಯಾಯಾಲಯ ಆವರಣ ಎಂದರೆ ಎಲ್ಲ ವರ್ಗದ ಜನರು ಬಂದೆ ಬರುತ್ತಾರೆ.‌ ವಕೀಲರಾಗಿ ತರಬೇತಿ ಪಡೆಯುವರು ಸಾಕಷ್ಟು ಜನ ಸಚಿವರಾಗಿದ್ದಾರೆ, ಮುಖ್ಯಮಂತ್ರಿಗಳು ಆಗಿದ್ದಾರೆ.‌ ಈ ಲೋಕಸಭಾ ಕ್ಷೇತ್ರದಲ್ಲಿ ನಾನು ಸ್ಪರ್ಧೆ ಮಾಡುತ್ತಿದ್ದೇನೆ. ಈ ಹಿಂದೆ ವಕೀಲರು ಎಲ್ಲರೂ ನಮ್ಮ ಪಕ್ಷಕ್ಕೆ ಬೆಂಬಲ ನೀಡಿದ್ದಂತೆ ನನಗು ಬೆಂಬಲ ನೀಡಿಬೇಕು. ವಕೀಲರ ಸಮಸ್ಯೆ ಕೂರಿತು ವಿಧಾನ ಸಭೆಯಲ್ಲಿ ಸಾಕಷ್ಟು ಸಲ ಧ್ವನಿ ಎತ್ತಿದ್ದೇನೆ. 1994 ರಲ್ಲಿ ಮೋದಲ ಬಾರಿ ಶಾಸಕನಾದಾಗ ವಕೀರೆ ನಿಂತು, ಕಾರ್ಯಕರ್ತಾರಾಗಿ ಕೆಲಸ ಮಾಡಿದ್ದಾಗ ನಾನು ಜಯಗಳಿಸಿದೆ ಎಂದು ಹೇಳಿದರು.‌

ದೂರ ದೃಷ್ಟಿ ಇಟ್ಟುಕೊಂಡು ದೇಶದಲ್ಲಿ ನರೇಂದ್ರ ಮೋದಿಯವರು ಕೆಲಸ ಮಾಡುತ್ತಿದ್ದಾರೆ.‌ ಸ್ವದೇಶಿ ಉತ್ಪನ್ನಗಳಿಂದ ದೇಶದ ಹಲವಾರು ಜನರಲ್ಲಿ ಸ್ವಾಭಿಮಾನ ಮೂಡಿದೆ. ಆರ್ಟಿಕಲ್ 370 ತೆಗೆದು ಹಾಕಿದ್ದರಿಂದ ಬೆಳಗಾವಿ ಜನರು ಕೂಡಾ ಕಾಶ್ಮಿರಕ್ಕೆ ಹೊಗಿ ಆಸ್ತಿ ಖರೀದಿ ಮಾಡಬಹುದು, ಅದ್ದರಿಂದ ಕಾಶ್ಮೀರ ತುಂಬಾ ಅಭಿವೃದ್ಧಿ ಆಗಿದೆ‌. ಮುಂದಿನ ದಿನಗಳಲ್ಲಿ ಸ್ವಿಜರ್ಲ್ಯಾಂಡ್ ಹೋಗುವ ಬದಲು ನಾವು ಕಾಶ್ಮೀರಕ್ಕೆ ಹೋಗಿ ಪ್ರವಾಸ ಮಾಡಬಹುದು.
ನಾವು ಪ್ರಣಾಳಿಕೆಯಲ್ಲಿ ಹೇಳಿದಂತೆ ಎಲ್ಲಾ ಕೆಲಸಗಳು ಆಗುತ್ತಿದೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ಅದು ರಾಮಮಂದಿರ ನಿರ್ಮಾಣ ಮಾಡಿದ್ದು ಎಂದು ತಿಳಿಸಿದರು.

30 ವರ್ಷದ ನಂಟು ಬೆಳಗಾವಿ ಜೊತೆ ನನಗೆ ಇದೆ. ಮೊದಲ ಬಾರಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಪ್ರವಾಹದಿಂದ ಹಾನಿಯಾದ ಮನೆಗಳಿಗೆ ಪರಿಹಾರ ನೀಡಿದ್ದೇವೆ. ಎರಡನೆ ಸಲ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಸಂದರ್ಭದಲ್ಲಿ ಆಕ್ಸಿಜನ್ ನೀಡುವ ಕೆಲ ಮಾಡಿದ್ದೇವೆ ಎಂದು ತಿಳಿಸಿದರು.‌

ಬೆಳಗಾವಿಯನ್ನು ಪ್ರಮಾಣಿಕವಾಗಿ ಅಭಿವೃದ್ಧಿ ಪಡಿಸಲು ಕೆಲಸ ಮಾಡುತ್ತೇನೆ. ಎಲ್ಲಾ ಹಂತದ ಯೋನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಿತ್ತೇವೆ. ಬೆಳಗಾವಿ ಅಭಿವೃದ್ಧಿಗೆ ಕಂಕಣಬದ್ದವಾಗಿ ಕೆಲಸ ಮಾಡುತ್ತೇವೆ ಎಂದು ತಳಿಸಿದರು.

ಉಡಾಣ ಯೋಜಯಡಿ ಮಂಗಳ ಅಂಡಿಯವರು ಎರಡನೆ ಟರ್ಮಿನಲ್ ಗಾಗಿ 310 ಕೊಟಿ ರೂ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಬೆಂಗಳೂರನ್ನು ಬಿಟ್ಟರೆ ಬೆಳಗಾವಿ ವಿಮಾನ ನಿಲ್ದಾಣ ಅತ್ಯಂತ ಬ್ಯೂಜಿ ನಿಲ್ದಾಣ ಆಗಿದೆ.‌ ಮುಂದಿನ ದಿನದಲ್ಲಿ ಅಂತರಾಷ್ಟ್ರಿಯ ವಿಮಾನ ನಿಲ್ದಾಣ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.‌

ಈ ವೇಳೆ ಬಿಜೆಪಿ ಉಪಾದ್ಯಕ್ಷ ಅನಿಲ ಬೆನಕೆ, ಬಿಜೆಪಿ ರಾಜ್ಯ ವಕ್ತಾರ ಎಂ ಬಿ ಜಿರಳಿ, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಮುರಗೇಂದ್ರಗೌಡಾ ಪಾಟೀಲ್, ಬೆಳಗಾವಿ ವಕೀಲ ಸಂಘದ ಉಪದ್ಯಕ್ಷಾರಾದ ವಿಜಯ ಪಾಟೀಲ್ , ಬಸವರಾಜ ಮುಗಳಿ, ವಕೀಲರ ಸಂಘದ ಜನರಲ್ ಸಕ್ರೇಟ್ರಿ ಯಲ್ಲಪ್ಪ ದೇವಟೆ, ಹನಮಂತ ಕೊಂಗಾಲಿ ಸೇರಿದಂತೆ ನೂರಾಜನ ಉಪಸ್ಥಿತರಿದ್ದರು

ವರದಿ:ಪ್ರತೀಕ ಚಿಟಗಿ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ