Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಗಣೇಶ ಹಬ್ಬ ,ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಸಭೆ

Advertisement
ಸಿಂದಗಿ:-   ಸಾರ್ವಜನಿಕರಿಗೆ ತೊಂದರೆ ಆಗದ ಹಾಗೆ ಹಬ್ಬಗಳನ್ನು ಆಚರಿಸಿ DYSP ಜಗದೀಶ ಹೇಳಿಕೆ, ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬಗಳ ಆಚರಣೆಯ ಪ್ರಯುಕ್ತ ಸಿಂದಗಿ ಪೊಲೀಸ್ ಇಲಾಖೆ ಯಿಂದ ಪೂರ್ವಭಾವಿ ಶಾಂತಿ ಸಭೆ ನಡೆಯಿತು. ಸಿಂದಗಿ ನಗರದ ಗುಂದಗಿ ಫಂಕ್ಷನ್ ಹಾಲ್ ನಲ್ಲಿ ಶಾಂತಿ ಸಭೆ ನಡೆಯಿತು.

ಸಭೆಯಲ್ಲಿ ಸಿಂದಗಿ ನಗರದ ವಿವಿಧ ಗಜಾನನ ಮಂಡಳಿಯ ಮುಖಂಡರುಗಳು ಹಾಗೂ ಎಲ್ಲಾ ಸಂಘಟನೆಗಳ ಮುಖಂಡರುಗಳು ಸಭೆಯಲ್ಲಿ ಭಾಗವಹಿಸಿ ಕಾನೂನಿನ ನಿಯಮಗಳ ಬಗ್ಗೆ ಇಂಡಿ ಡಿವೈಎಸ್ಪಿ ಜಗದೀಶ ಅವರು ಮಾತನಾಡಿ ಸರಕಾರದ ಸೂಕ್ತ ಸುರಕ್ಷಾ ಕ್ರಮಗಳ ಬಗ್ಗೆ ಸಂಪೂರ್ಣವಾಗಿ ವಿವರಿಸಿ ಹೇಳಿ ತಾಲೂಕಿನ ಬೇರೆ ಬೇರೆ ಇಲಾಖೆಗಳ ನೆರವು ಪಡೆದು ಸುರಕ್ಷಿತವಾಗಿ ಯಾವುದೇ ಸಾರ್ವಜನಿಕ ಆಸ್ತಿ ಹಾನಿ ಆಗದ ಹಾಗೆ ಶಾಂತಿಯುತವಾಗಿ ಗಣೇಶ ಹಬ್ಬವನ್ನು ಆಚರಿಸಬೇಕು ನಿಮ್ಮ ಸಹಕಾರ ನಮಗೆ ಕೊಡಿ ನಮ್ಮ ಸಹಕಾರ ನಿಮಗೆ ಇರುತ್ತೆ
ಹಬ್ಬಗಳನ್ನು ವಿಜೃಂಭನೆಯ ಜೊತೆಗೆ ಸುರಕ್ಷತೆಯಿಂದ ನೀವೆಲ್ಲರೂ ಜವಾಬ್ದಾರಿವಹಿಸಿ ಗಣೇಶ್ ಪ್ರತಿಷ್ಟಾಪನೆ ಹಾಗೂ ವಿಸರ್ಜನೆ ಮಾಡಬೇಕು ಮನವಿ
ಮಾಡಿದರು

ಸಿಂದಗಿ ತಹಶೀಲ್ದಾ‌ರ್ ಪ್ರದೀಪ್ ಕುಮಾರ್ ಹಿರೇಮಠ್ ಹಾಗೂ ಸಿಂದಗಿ ಪೊಲೀಸ್  ವೃತ್ತ ನಿರೀಕ್ಷಕರಾದ ನಾನಾಗೌಡ ಆರ್ ಪೊಲೀಸ್ ಪಾಟೀಲ ಇನ್ನೂ ಶಾಂತಿ ಸಭೆಯಲ್ಲಿ ತಾಲೂಕಿನ ವಿವಿಧ ಗಜಾನನ ಮಂಡಳಿ ಮುಖಂಡರು ಹಾಗೂ ಸಂಘಟನೆಗಳ ಮುಖಂಡರುಗಳ ಜೊತೆ ಚರ್ಚಿಸಿ ಗಣೇಶ ಹಬ್ಬದಲ್ಲಿ ತಮಗೆ ಎಲ್ಲಾ ರೀತಿಯಿಂದ ಅನುಕೂಲ ಆಗುವ ಹಾಗೆ ಸಿಂಗಲ್ ವಿಂಡೋ ತೆರೆದಿದ್ದೇವೆ ಇಲ್ಲಿ ಒಂದೇ ಕಡೆ ನಿಮಗೆ ಪರವಾನಿಗೆ ಪತ್ರ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿ ಎಲ್ಲರೂ ನಮಗೆ ಸಹಕಾರ ನೀಡಬೇಕು ಇಲಾಖೆಯಿಂದ ನಿಮಗೆ ನಮ್ಮ ಸಹಕಾರ ಇರುತ್ತೆ ಶಾಂತಿಯುತವಾಗಿ ಹಬ್ಬವನ್ನು ಆಚರಿಸೋಣ ಎಂದು ಸಲಹೆ ನೀಡಿದರು.

ಇನ್ನುಳಿದಂತೆ ತಹಶೀಲ್ದಾರ ಪ್ರದೀಪ್ ಕುಮಾರ್ ಹಿರೇಮಠ್ ಮಾತನಾಡಿ ಗಣೇಶ್ ಹಬ್ಬದ ಹಿಂದಿರುವ ಇತಿಹಾಸ ಹಾಗೂ ಉದ್ದೇಶಗಳ ಬಗ್ಗೆ ಸವಿಸ್ತಾರವಾಗಿ ವಿವರಣೆ ನೀಡಿದರು, ತಾವು ಗಣೇಶ್ ಮಂಡಳಿಯ ಎಲ್ಲಾ ಪ್ರಮುಖರು ನಮ್ಮ ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಸಹಕರಿಸಿ ನಾವು ಕೂಡ ಗಣೇಶ್ ಹಬ್ಬದ ಕಾರ್ಯಕ್ರಮಗಳಲ್ಲಿ ತಮ್ಮೊಡನೆ ಭಾಗವಹಿಸುವ ಅವಕಾಶ ನೀಡಬೇಕು ಎಂದರು

ಸಿಂದಗಿ ಪುರಸಭೆ ಅಧಿಕಾರಿ ಎಚ್ ಎಮ್ ಯಲಗೋಡ ಮಾತನಾಡಿ ನಮ್ಮ ಇಲಾಖೆ ಯಿಂದ ಮಾಡಬಹುದಾದ ವ್ಯವಸ್ಥೆಗಳು ನಾವು ಸಂಪೂರ್ಣ ಸಮರ್ಪಕವಾಗಿ ನೀಡುತ್ತೇವೆಇನ್ನುಳಿದಂತೆ ಯಾವುದಾದರು ಸಮಸ್ಯೆಗಳಿದ್ದರೆ ನಮ್ಮ ಇಲಾಖೆ ಅಂದರೆ ನಾವು ರಕ್ಷಣಾ ಅದನ್ನು ಬಗೆಹರಿಸುತ್ತೇವೆ ಎಂದರು

ಶಾಂತಿಸಭೆಯಲ್ಲಿ ತಹಶೀಲ್ದಾರ್ ಪ್ರದೀಪ್ ಕುಮಾರ್ ಹಿರೇಮಠ್, ಇಂಡಿ (ಡಿವೈಎಸ್ಪಿ ) ಜಗದೀಶ (ಸಿಪಿಐ) ನಾನಾಗೌಡ ಆರ್ ಪೊಲೀಸ್ ಪಾಟೀಲ (ಪಿಎಸ್ಐ) ಆರೀಫ್ ಮೂಸಪುರೆ,ಪುರಸಭೆ ಅಧಿಕಾರಿ ಎಚ್ ಎಮ್ ಯಲಗೋಡ, ಹಾಗೂ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಗಜಾನನ ಮಂಡಳಿಯ ಮುಖಂಡರುಗಳು ಹಾಗೂ ಸಂಘಟನೆಗಳ ಮುಖಂಡರುಗಳು, ಹಿರಿಯರು ಉಪಸ್ಥಿತರಿದ್ದರು.

(ಕೋಟ್ ಮಾಡಿ)ಸರ್ಕಾರ ಹಾಗೂ ಇಲಾಖೆಗಳು ಯಾವುದಾದರೂ ಒಂದು ನಿಯಮಗಳು ಅಳವಡಿಸಲು ಹೇಳಿದರೆ ಅದು ಸಾರ್ವಜನಿಕರ ಅನುಕೂಲಕ್ಕಾಗಿ ಹೊರತು ಇಲಾಖೆಯ ಒಳತಿಗಾಗಿ ಅಲ್ಲ ದಯವಿಟ್ಟು, ದಯವಿಟ್ಟು ಯಾವುದೇ ಅನ್ಯ ಧರ್ಮೀಯರಿಗೆ ತೊಂದರೆ ಆಗದ ಹಾಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗದ ಹಾಗೆ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬಗಳು ಆಚರಿಸಿ ತಾವು ನಮ್ಮ ಇಲಾಖೆಗೆ ಸಹಕರಿಸಿ ಇಲಾಖೆ ತಮ್ಮನ್ನು ಸಹಕರಿಸುತ್ತದೆ,

ವರದಿ:- ಗಪೂರ ಮುಜಾವರ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ