Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶಬರಿಮಲೆಯ ಪ್ರಸಾದದಲ್ಲಿ ಕೀಟನಾಶಕ ಪತ್ತೆ : 5.5 ಕೋಟಿ ರೂ. ಮೌಲ್ಯದ ಪ್ರಸಾದ ಹಾಳು 

Advertisement
ತಿರುವನಂತಪುರ: ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬ ಪತ್ತೆಯಾದ ಬಳಿಕ ಕೇರಳದ ಶಬರಿಮಲೆಯ ಪ್ರಸಾದದಲ್ಲಿ ಕೀಟನಾಶಕವಿರುವುದು ಪತ್ತೆಯಾಗಿದೆ. ಇದೀಗ ಶಬರಿಮಲೆಯ ಸುಮಾರು 5.5 ಕೋಟಿ ರೂ.ಯ ಅರವಣ ಪಾಯಸವನ್ನು ಗೊಬ್ಬರವನ್ನಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ.

ಅರವಣ ಪಾಯಸದಲ್ಲಿ ಬಳಸಲಾಗಿರುವ ಏಲಕ್ಕಿಯಲ್ಲಿ ಅನುಮತಿಸಿರುವುದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಕೀಟನಾಶಕ ಬಳಕೆ ಮಾಡಲಾಗಿದೆ ಎಂದು ದೂರು ಬಂದಿದೆ. ಈ ಹಿನ್ನೆಲೆ ಸುಮಾರು 6.65 ಲಕ್ಷ ಕಂಟೈನರ್‌ನಷ್ಟು ಅರವಣವನ್ನು ಬಳಕೆ ಮಾಡದೇ ಬಿಡಲಾಗಿದೆ.


ಅರವಣ ಸೇವನೆಗೆ ಯೋಗ್ಯವಾಗಿದ್ದರೂ ಸುಮಾರು 5.5 ಕೋಟಿ ರೂ. ಮೌಲ್ಯದ ದಾಸ್ತಾನನ್ನು ಗೊಬ್ಬರ ಮಾಡಲು ದೇವಸ್ಥಾನವನ್ನು ನಿರ್ವಹಣೆ ಮಾಡುವ ಟ್ರಾವಂಕೂರ್‌ ದೇವಸ್ವಂ ಬೋರ್ಡ್‌ ನಿರ್ಧರಿಸಿದೆ.


ಭಾರೀ ಪ್ರಮಾಣದ ಅರವಣವನ್ನು ವಿಲೇವಾರಿ ಮಾಡವುವುದು ಸವಾಲಾಗಿತ್ತು. ಇದನ್ನು ಕಾಡಿನಲ್ಲಿ ವಿಲೇವಾರಿ ಮಾಡಲು ವಿರೋಧ ವ್ಯಕ್ತವಾಗಿತ್ತು. ಭಕ್ತರ ಭಾವನೆಗೆ ಧಕ್ಕೆಯಾಗದಂತೆ ವಿಲೇವಾರಿ ಮಾಡಲು ಟಿಡಿಬಿ ಬಯಸಿದ್ದರಿಂದ ವೈಜ್ಞಾನಿಕ ವಿಲೇವಾರಿಗೆ ಟೆಂಡರ್‌ ಆಹ್ವಾನಿಸಿತ್ತು.


ಕೇರಳ ಮೂಲದ ಇಂಡಿಯನ್‌ ಸೆಂಟಿಫಿಗ್‌ ಎಂಜಿನಿಯರಿಂಗ್‌ ಸೆಲೂಷನ್ಸ್‌ ಸಂಸ್ಥೆ ಇದರ ಬಿಡ್‌ ಗೆದ್ದುಕೊಂಡು ಅರವಣವನ್ನು ಗೊಬ್ಬರ ಮಾಡುವ ಕೆಲಸವನ್ನು ವಹಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ೨೦೬ ರನ್‌ಗಳ ಗೆಲುವಿನ ಗುರಿನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್