Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರಪಂಚ ಆರ್ಯವೈಶ್ಯ ಮಹಾಸಭಾದಿಂದ ಪ್ರತಿಭಾ ಪುರಸ್ಕಾರ ಸಮಾರಂಭ

Advertisement
ಸಿರುಗುಪ್ಪ :- ನಗರದ ಶ್ರೀ ಶ್ರೀನಿವಾಸ ಆಂಜನೇಯ್ಯ ಶನೇಶ್ವರ ದೇವಸ್ಥಾನದಲ್ಲಿ ಪ್ರಪಂಚ ಆರ್ಯವೈಶ್ಯ ಮಹಾಸಭಾ ಕರ್ನಾಟಕ ವಿಭಾಗ ಹಾಗೂ ತಾಲೂಕು ಘಟಕದಿಂದ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ತಾಲೂಕು ವಾಮ್ ಅಧ್ಯಕ್ಷ ಬಾದ್ಮಿ ಜಯರಾಮಶೆಟ್ಟಿ ಉದ್ಘಾಟಿಸಿದರು.



ಆರ್ಯವೈಶ್ಯ ಪಾದಯಾತ್ರೆ ಸಮಿತಿ ಅಧ್ಯಕ್ಷ ಹೆಚ್.ಜೆ.ಹನುಮಂತಯ್ಯ, ಮಾತನಾಡಿ ಹಣದ ಕೊರತೆಯಿಂದಾಗಿ ವಿದ್ಯಾಭ್ಯಾಸದಿಂದ ದೂರ ಉಳಿಯಬಾರದೆಂದು ನಮ್ಮ ಮಹಾಸಭಾದಿಂದ ಬಡ್ಡಿರಹಿತ ಸಾಲವ ಸೌಲಭ್ಯವಿದ್ದು, ಬಡ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕೆಂದರು.



ಸಿ.ಎನ್.ಎನ್. ಶಾಲೆಯ ಅಧ್ಯಕ್ಷ ಚಾಗಿ ಸುಬ್ಬಯ್ಯಶೆಟ್ಟಿ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಗಳ ಸಾಧನೆಯ ಹಿಂದೆ ನಿಮ್ಮ ಪೋಷಕರ ಪರಿಶ್ರಮವಿರುತ್ತದೆ. ಆದಕಾರಣ ಮುಂದೆ ತಂದೆತಾಯಂದಿರನ್ನು ಚೆನ್ನಾಗಿ ನೋಡಿಕೊಳ್ಳಬೇಕು.ವಿದ್ಯಾಭ್ಯಾಸಕ್ಕೆಂದು ಸರ್ಕಾರದಿಂದಲೂ ಹಲವು ಯೋಜನೆಗಳಿವೆ. ಅದರೊಂದಿಗೆ ನಮ್ಮ ಮಹಾಸಭಾದ ಯೋಜನೆಗಳನ್ನು ಪಡೆಯಬಹುದೆಂದರು.

ವಾಮ್‌ನ ಕರ್ನಾಟಕ ವಿಭಾಗದ ಸಂಘಟನಾ ಕಾರ್ಯದರ್ಶಿ ಕೆ.ರಾಘವೇಂದ್ರ ಅಮಿತ್ ಮಾತನಾಡಿ ಪ್ರಪಂಚ ಆರ್ಯವೈಶ್ಯ ಮಹಾಸಭಾ(ವಾಮ್) ಅಧ್ಯಕ್ಷ ರಾಮಕೃಷ್ಣ ತಂಗುತುರಿ, ಉಪಾಧ್ಯಕ್ಷ ಹಾಗೂ ರಾಜ್ಯಾಧ್ಯಕ್ಷ ಸಿ.ಎಂ.ಎಲ್.ದಿಲೀಪ್ ಅವರ ಮಾರ್ಗದರ್ಶನದ ಮೇರೆಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದಕ್ಕೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯವಾಗಿದೆಂದರು.



ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿ, ಸಿ.ಎ, ಮೆಡಿಕಲ್ ಪಾರ್ಮುಸಿ, ಬಿಎಎಮ್‌ಎಸ್, ಬಿಕಾಂ, ಬಿಸಿಎ, ಬಿ.ಇ, ಬಿ.ಎಸ್.ಇ ಅಗ್ರಿ ಇನ್ನಿತರ ಕೋರ್ಸ್ ಗಳಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಇದೇ ವೇಳೆ ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಯು.ಸಿ.ರಾಮಾಂಜಿನೇಯ್ಯ, ಶ್ರೀ ಶ್ರೀನಿವಾಸ ಆಂಜನೇಯಸ್ವಾಮಿ ಶನೇಶ್ವರ ಟ್ರಸ್ಟಿನ ಅಧ್ಯಕ್ಷ ಅಮರಾವತಿ ಸುನೀಲ್ ದತ್ತ, ವಿಶ್ವಜ್ಯೋತಿ ಮಾಂಟೇಸ್ಸರಿ ಶಾಲೆಯ ಮುಖ್ಯಶಿಕ್ಷಕಿ ಡಿ.ಆರ್.ರಾಜೇಶ್ವರಿ, ಯಶಸ್ವಿನಿ ಮಹಿಳಾ ಮಂಡಳಿ ಅಧ್ಯಕ್ಷೆ ಬಿ.ಇ.ರಾಧಾ, ಎಸ್.ಇ.ಎಸ್. ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಬಿ.ಇ.ಅವಿನಾಶ್, ಕಿಡ್ಸ್ ಪ್ಯಾರಾಡೈಸ್ ಸ್ಕೂಲ್ ಅಧ್ಯಕ್ಷೆ ಬಿ.ಇ.ಗೋದಾವರಿ, ಗಾಯತ್ರಿ ವಿದ್ಯಾ ಮಂದಿರ ಶಾಲೆಯ ಅಧ್ಯಕ್ಷೆ ನಸ್ರೀನಾ ಸುಲ್ತಾನ್, ಇನ್ನಿತರ ಸಂಘಟನೆಯ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಪೋಷಕರು ಇದ್ದರು.

ವರದಿ:- ಶ್ರೀನಿವಾಸ ನಾಯ್ಕ
Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಿಂಬಾಬ್ವೆ ವಿರುದ್ಧ ಸುಲಭವಾಗಿ ಗೆದ್ದ ಭಾರತ ಕಾಂಗ್ರೆಸ್ ತಿಗಣೆಗಳು ಹೋಗಿ ಜಿರಳೆಗಳ ಜೊತೆ ಸೇರಿಕೊಂಡಿದ್ದಾರೆ : ಪ್ರತಾಪ್ ಸಿಂಹ ನಂದಿನಿ ತುಪ್ಪದ ಬೆಲೆ ಪ್ರತಿ ಕೆಜಿಗೆ 15 ರೂ. ಹಾಗೂ ಬೆಣ್ಣೆಯ ದರ ಪ್ರತಿ ಕೆಜಿಗೆ 22 ರೂ. ಹೆಚ್ಚಳ ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲಿಯೇ ಮಯಾಂಕ ಯಾದವ್‌ಗೆ ವಿಕೆಟ್  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆ ಅಂಗಳದಲ್ಲಿ ಗಿಡ ನಾಟಿ ಕಾರ್ಯಕ್ರಮ ಜಾತ್ರೆಗೆ ಹೋಗುವ ವಿಚಾರಕ್ಕೆ ದಂಪತಿ ನಡುವೆ ಜಗಳ : ದೂದಗಂಗಾ ನದಿಗೆ ಹಾರಿದ ಪತ್ನಿ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವಂತಿಲ್ಲ : ರಾಜ್ಯ ಸರ್ಕಾರ ಆದೇಶ ಹೆಣ್ಣು ಮಗು ಎಂಬ ಕಾರಣಕ್ಕೆ ನೀರಿನ ಸಂಪ್ ಗೆ ಎಸೆದು ಕೊಂದು ಪಾಪಿ ತಂದೆಸುಳ್ಳು ಸುದ್ದಿ ಪ್ರಕಟ : ಸಂಪಾದಕ ಆನಂದ್ ಕೌಶಿಕ್ 6 ತಿಂಗಳು ಸಜೆ ಮತ್ತು 1 ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಲಯಬಾಗಲಕೋಟೆ ಬೇಕರಿ ತಪಾಸಣೆ ತಾಜಾ ಎಣ್ಣೆ ಬಳಸಿ : ಸಿಲಿಂಡರ್ ಹೊರಗಿಡಿ ಉಪಲೋಕಾಯುಕ್ತರ ಎಚ್ಚರಿಕೆ