
ಈ ವೇಳೆ ದಸಂಸ ಜಿಲ್ಲಾದ್ಯಕ್ಷ ಯರಿಯೂರು ರಾಜಣ್ಣ ಮಾತನಾಡಿ, ಸರಕಾರವು ಹೊರಗುತ್ತಿಗೆ ನೇಮಕಾತಿಗಳಲ್ಲಿ ಮೀಸಲಾತಿ ನಿಯಮಗಳನ್ನು ಜಾರಿಗೆ ತರಲು ಆದೇಶ ನೀಡಿರುವುದನ್ನು ದಲಿತ ಸಂಘರ್ಷ ಸಮಿತಿಯು ಸ್ವಾಗತಿಸುತ್ತದೆ. ಆದರೆ, ಸರಕಾರದ ಸುತ್ತೋಲೆಯ 1 ಮತ್ತು 6 ನೇ ಷರತ್ತುಗಳು ಸರಕಾರದ ಸದುದ್ದೇಶದ ಹೊರಗುತ್ತಿಗೆಯಲ್ಲಿನ ಮೀಸಲಾತಿ ನೀತಿಗೆ ವಿರುದ್ಧವಾಗಿದೆ. 1 ಮತ್ತು 6 ನೇ ಶರತ್ತನ್ನು ಮಾರ್ಪಾಡುಗೊಳಿಸಿ ಉದ್ಯೋಗಗಳನ್ನು ಸಂಖ್ಯೆ ಎಷ್ಟೇ ಇರಲಿ ಮತ್ತು ಎಷ್ಟೇ ಅವಧಿಯದ್ದಾಗಿರಲಿ ಅಲ್ಲಿ "ರೋಸ್ಟರ್ ನಿಯಮ"ಗಳ ಅನುಸಾರವಾಗಿ ನೇಮಕಾತಿ ಪ್ರಕ್ರಿಯೆಗಳು ಕಡ್ಡಾಯವಾಗಿ ಇರಲೇಬೇಕು ಎಂದು ಆಗ್ರಹಿಸಿದರು.ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ವರದಿ :ಸ್ವಾಮಿ ಬಳೇಪೇಟೆ

