Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಆಯುರ್ವೇದ ಆರೋಗ್ಯ ಶಿಬಿರ:ಸತ್ಸಂಗದಿಂದ ಮನದ ಮಾಲಿನ್ಯ ಶುದ್ಧಿ

Advertisement
ಗುರುಮಠಕಲ್‌ :ತಾಲ್ಲೂಕಿನ ಮಲ್ಲಾಪುರ ಗ್ರಾಮದಲ್ಲಿ ಗುರುವಾರ 'ಉಸೇನಪ್ಪ ‍ಅವರ ಉಚಿತ ಆಯುರ್ವೇದ ಆರೋಗ್ಯ ಶಿಬಿರವು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟನೆ ಮಾಡಿದ ಶ್ರೀಗಳು.

ಗಡಿಭಾಗದ ಮಲ್ಲಾಪುರ ಗ್ರಾಮದಲ್ಲಿ ಕೃಷ್ಣಾನಂದ ಸ್ವಾಮೀಜಿ ಮಾತನಾಡಿ ಮೈ-ಕೈ ಮತ್ತು ಬಟ್ಟೆಗಳ ಹೊಲಸಾದರೆ ಮಾರುಕಟ್ಟೆಯಲ್ಲಿ ವಿವಿಧ ಸಾಬೂನುಗಳಿವೆ ಆದರೆ ಮನಸ್ಸು ಹೊಲಸಾದರೆ ಹೇಗೆ ಗುರುಗಳ ಸಾನಿಧ್ಯ ಮತ್ತು ಸತ್ಸಂಗವು ಮನದ ಮಾಲನ್ಯವನ್ನು ಶುದ್ಧಗೊಳಿಸುತ್ತದೆ ಎಂದು ಕೃಷ್ಣಗಿರಿಯ ಮಹಾರಾಜ ಯೋಗಿ ಕೃಷ್ಣಾನಂದ ಸ್ವಾಮೀಜಿ ಹೇಳಿದರು

ತಾಲ್ಲೂಕಿನ ಮಲ್ಲಾಪುರ ಗ್ರಾಮದಲ್ಲಿ ಗುರುವಾರ ಉಸೇನಪ್ಪ ‍ಅವರ ಉಚಿತ ಆಯುರ್ವೇದ ಆರೋಗ್ಯ ಶಿಬಿರ'ದಲ್ಲಿ ಅವರು ಮಾತನಾಡಿದ‍ರು

ಇತ್ತೀಚೆಗೆ ಕ್ಯಾನ್ಸರ್‌ ರೋಗ ಹೆಚ್ಚುತ್ತಿದೆ ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ಎಂದ ತಕ್ಷಣ ಭೀತರಾಗುತ್ತೇವೆ ಆದರೆ ತಲೆನೋವಿನಂತೆ ಕ್ಯಾನ್ಸರ್ ಎಂದು ಧೈರ್ಯದಿಂದಿರಿ ನಮ್ಮಲ್ಲಿ ದೃಢತೆ ಮತ್ತು ಧೈರ್ಯವಿದ್ದರೆ ಅದೇ ನಿಜವಾದ ಔಷಧವಾಗುತ್ತದೆ ಎಂದರು

ತಾಯಿ ತಂದೆ ಮತ್ತು ಗುರುಗಳು ಭಗವಂತನೇ ಹೌದು ಈ ಮೂವರ ಸೇವೆ ಮತ್ತು ಅವರನ್ನು ಗೌರವಿಸುವುದರಿಂದ ಅನ್ನ ಅರಿವು ಆಶ್ರಯದ ಸಮಸ್ಯೆಯಾಗದು ಬಡ ಜನತೆಯ ಸೇವೆಯೇ ನಮ್ಮ ಗುರಿ. ಅದರಂತೆ ಸೇವೆಗೆ ತೊಡಗುವುದು ಮುಖ್ಯ ಎಂದು ಹೇಳಿದರು

ಆರೋಗ್ಯವು ನಮ್ಮಲ್ಲಿದ್ದರೆ ಯಾವ ಐಶ್ವರ್ಯವೂ ಬೇಡ. ಎಲ್ಲಾ ಬಗೆಯ ಭಾಗ್ಯಗಳಿದ್ದು, ಪಂಚಭಕ್ಷಗಳಿದ್ದಾಗ ಆರೋಗ್ಯ ಇಲ್ಲವಾದರೆ? ರೋಗಿಯಾದರೆ ಏನನ್ನೂ ಸವಿಯಲಾಗದು. ಆದ್ದರಿಂದ ಆರೋಗ್ಯಕ್ಕೆ ಆಧ್ಯತೆ ನೀಡಿ ಎಂದು ಸಲಹೆ ನೀಡಿದರು.

ಮದ್ಯ ಸೇವನೆ ಮತ್ತು ಮಾಂಸ ಭಕ್ಷಣೆ ತ್ಯಜಿಸಿ. ಮಾತೆ ಮಾಣಿಕೇಶ್ವರಿಯವರ ಆಶಯದಂತೆ ಅಹಿಂಸಾ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ. ಈ ಹಿಂದೆ ಗವಿ ಸಿದ್ದಲಿಂಗೇಶ್ವರ ಪ್ರದೇಶದಲ್ಲಿದ್ದೆ. ಈ ಭಾಗದಲ್ಲಿ ಹಲವು ಔಷಧೀಯ ಸಸಿಗಳಿವೆ. ನಾನೂ ತಿಂಗಳಿಗೊಮ್ಮೆ ಇಲ್ಲಿಗೆ ಬರುವೆ ಎಂದು ಭರವಸೆ ನೀಡಿದರು.

ಆಯೋಜಕ ಉಷನಪ್ಪ ಹಾಗೂ ಮುಖಂಡ ಶಿವರೆಡ್ಡಿ ಮಾತನಾಡಿದರು.ಜಗನ, ಲಕ್ಷ್ಮಣ, ನರಸಿಂಹ, ಸದಾಶಿವರೆಡ್ಡಿ, ಶ್ರೀನಿವಾಸರೆಡ್ಡಿ, ವೆಂಕಟರೆಡ್ಡಿ, ವೆಂಕಟಪ್ಪ, ಶಿವ, ರಮೇಶ, ಕಿಶನ್, ಸಾಬಣ್ಣ, ರಮುನಾಯಕ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ವರದಿ : ರವಿ ಬುರನೋಳ್
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ