ಜಾರಿ ನಿರ್ದೇಶನಾಲಯದಲ್ಲಿ ಹೊಸ ಜಾರಿ ನಿರ್ದೇಶಕರಾಗಿ ರಾಹುಲ್ ನವೀನ್ ಅವರ ನೇಮಕವನ್ನು ಸಂಪುಟದ ನೇಮಕಾತಿ ಸಮಿತಿ ದೃಢಪಡಿಸಿದೆ.
ಪ್ರಸ್ತುತ ಜಾರಿ ನಿರ್ದೇಶನಾಲಯದಲ್ಲಿ(ED) ವಿಶೇಷ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ನವೀನ್, 1993 ರ ಬ್ಯಾಚ್‌ನ ಭಾರತೀಯ ಕಂದಾಯ ಸೇವಾ ಅಧಿಕಾರಿ.ಅವರ ನೇಮಕಾತಿಯು ಅವರು ಹುದ್ದೆಯ ಪ್ರಭಾರವನ್ನು ವಹಿಸಿಕೊಂಡ ದಿನಾಂಕದಿಂದ ಜಾರಿಗೆ ಬರಲಿದೆ. ಎರಡು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶಗಳನ್ನು ಹೊರಡಿಸುವವರೆಗೆ ಇರುತ್ತದೆ.

