
ಈ ಸಂದರ್ಭದಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ ಸ್ವಾಮೀಜಿಗಳು, ಭಕ್ತಾದಿಗಳು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು, ವಿವಿಧ ಮಠಗಳ ಶ್ರೀಗಳಾದ ಹೂಲಿ, ಕಾರಂಜಿ, ಸಂಗೊಳ್ಳಿ, ತುರುಮುರಿ, ಹುಲಿಕಟ್ಟಿ, ಬಡೆಕೊಳ್ಳ ಮಠ, ಎಂಕೆ ಹುಬ್ಬಳ್ಳಿ ದರ್ಗಾದ ಆರಾಧಕ ಪೀರಾ, ಸವದತ್ತಿ ಹಾಗೂ ಕೇದಾರನಾಥ ದೇವಸ್ಥಾನದ ಮುಖ್ಯ ಅರ್ಚಕರು ಹಾಗೂ ವಿವಿಧ ಶಾಸ್ತ್ರಿಗಳು ಹಾಗೂ ಭಕ್ತಾದಿಗಳು ಬಾಗವಹಿಸಿದ್ದರು. ಮುತ್ನಾಳ ಗ್ರಾಮದ ಸಮಸ್ತ ಹಿರಿಯರ ನೇತೃತ್ವದಲ್ಲಿ ಹನುಮಂತ ದೇವಸ್ಥಾನದಲ್ಲಿ ಶ್ರೀಗಳ ಪುಣ್ಯರಾಧನೆ ನಿಮಿತ್ಯ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು, ಒಟ್ಟಾರೆ ಅರ್ಥಪೂರ್ಣವಾಗಿ ಈ ಪುಣ್ಯರಾಧನೆ ಕಾರ್ಯಕ್ರಮ ಸಂಪನ್ನಗೊಂಡಿತು
ವರದಿ:- ಬಸವರಾಜು.

