Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜನುಮದಿನದ ನಿಮಿತ್ತವಾಗಿ "ರನ್ ಫಾರ್ ಯುನಿಟಿ" ಅಂದರೆ "ಏಕತೆಗಾಗಿ ಓಟ"

Advertisement
ಬೆಳಗಾವಿ :- ಭಾರತೀಯ ಜನತಾ ಪಾರ್ಟಿ ಬೆಳಗಾವಿ ಜಿಲ್ಲೆಯ ವತಿಯಿಂದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನುಮದಿನದ ನಿಮಿತ್ತವಾಗಿ "ರನ್ ಫಾರ್ ಯುನಿಟಿ" ಅಂದರೆ "ಏಕತೆಗಾಗಿ ಓಟ" ಹಮ್ಮಿಕೊಳ್ಳಲಾಗಿತ್ತು.ದೇಶ ಕಂಡ ಅಪ್ರತಿಮ ನಾಯಕ ಸರ್ದಾರ್ ವಲ್ಲಭಭಾಯ್ ಪಟೇಲ್: ಭಾ.ಜ.ಪಾ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ಅಭಿಮತ



ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಸ್ಮರಣಾರ್ಥ ಏಕ್ ಭಾರತ್ ಶ್ರೇಷ್ಠ ಭಾರತ್ ಲಕ್ಷ್ಯದೊಂದಿಗೆ ಆಚರಿಸಲ್ಪಡುವ ಏಕತಾ ಓಟಕ್ಕೆ ಚಾಲನೆ ನೀಡಿ ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಂತರ ಜಿಲ್ಲಾಧ್ಯಕ್ಷರಾದ ಸುಭಾಷ್ ಪಾಟೀಲ ಮಾತನಾಡಿ 1947ರ ಆಗಸ್ಟ್‌ 5ರಂದು ದಾಖಲೆಗಳಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರೆಯಿತು. ಆದರೆ ದೇಶದಾದ್ಯಂತ ಹಬ್ಬಿದ್ದ ನೂರಾರು ರಾಜಸಂಸ್ಥಾನಗಳನ್ನು ಭಾರತ ಒಕ್ಕೂಟದಲ್ಲಿ ವಿಲೀನಗೊಳಿಸುವುದು ಸವಾಲೇ ಆಗಿತ್ತು. ಈ ಕೆಲಸವನ್ನು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ರೈತ ಚಳವಳಿಯ ರೂವಾರಿ, ಗೃಹಸಚಿವರಾಗಿದ್ದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಸಮರ್ಥವಾಗಿ ಮಾಡಿದರು. ಪ್ರೀತಿ ಬಳಸುವಲ್ಲಿ ಪ್ರೀತಿಯಿಂದ, ದಂಡಪ್ರಯೋಗ ಮಾಡಬೇಕಾದಲ್ಲಿ ಅದರಿಂದ ಕೆಲಸ ಸಾಧಿಸಿದರು.

ಒಕ್ಕೂಟ ಭಾರತವನ್ನು ಕಟ್ಟಿದರು. ಇಂದು ಭಾರತವೊಂದು ಒಕ್ಕೂಟವಾಗಿ ಉಳಿದಿದ್ದರೆ ಅದು ಅವರಿಂದಲೇ. ಅವರ ನೆನಪಿನಲ್ಲೇ ಪ್ರಧಾನಿ ನರೇಂದ್ರ ಮೋದಿಜಿ ಅವರ ನೇತೃತ್ವದ ಸರಕಾರ ಪಟೇಲ್‌ ಅವರ ಜನ್ಮದಿನವಾದ ಅಕ್ಟೋಬರ್‌ 31ನ್ನು ‘ಏಕತಾ ದಿವಸ್‌’ ಎಂದು ಘೋಷಿಸಿದೆ ಎಂದು ಹೇಳಿದರು.

ನಂತರ ಮಾಜಿ ಶಾಸಕ ಸಂಜಯ್ ಪಾಟೀಲ್ ಮಾತನಾಡಿ 1919ರಲ್ಲಿ ಗುಜರಾತಿನ ಖೇಡಾ ಪ್ರಾಂತ ತೀವ್ರ ಕ್ಷಾಮದಿಂದ ತತ್ತರಿಸುತ್ತಿದ್ದು, ಅಲ್ಲಿಯ ರೈತರು ಕರ ವಿನಾಯಿತಿಗೆ ಬೇಡಿಕೆಯಿಟ್ಟರು. ಪಟೇಲರು ಹಳ್ಳಿಹಳ್ಳಿ ತಿರುಗಿ, ರಾಜ್ಯವ್ಯಾಪಿ  ಆಂದೋಲನದಲ್ಲಿ ತೊಡಗಿಸಿದರು. ರಾಜ್ಯದೆಲ್ಲೆಡೆ ಎಲ್ಲರಿಗೂ ಪಟೇಲರ ನಾಯಕತ್ವ ಒಪ್ಪಿಗೆಯಾಯಿತು. ಬ್ರಿಟಿಷ್‌ ಅಧಿಕಾರಿಗಳ ದೌರ್ಜನ್ಯದ ನಡುವೆಯೂ ಹಿಂಸಾತ್ಮಕವಾಗಿ
ಸಾಗಿದ ಈ ಚಳವಳಿಗೆ ಸರಕಾರ ಮಣಿದು, ಕರವನ್ನು ಮುಂದೂಡಿತು. ಪಟೇಲರು ಈ ಸತ್ಯಾಗ್ರಹದಿಂದ ಮಹಾನಾಯಕ ಎಂದು ಗುಜರಾತಿ ಜನಮನ್ನಣೆ ಪಡೆದರು. 1919ರಿಂದ  1928ರವರೆಗೆ ಪಟೇಲರು, ಅಸ್ಪೃಶ್ಯತೆ, ಮದ್ಯಪಾನದ ವಿರುದಟಛಿ ವ್ಯಾಪಕ ಚಳವಳಿ ನಡೆಸಿದರು. 1922ರಲ್ಲಿ ಅಹಮದಾಬಾದಿನ ಮುನಿಸಿಪಾಲಿಟಿಯ ಅಧ್ಯಕ್ಷ ರಾಗಿ ವಿದ್ಯುತ್‌ ಸರಬರಾಜು, ಚರಂಡಿ ಹಾಗೂ ನೈರ್ಮಲ್ಯ ವ್ಯವಸ್ಥೆ, ಹಾಗೂ ಶಿಕ್ಷ ಣ ವ್ಯವಸ್ಥೆಗಳಲ್ಲಿ ಭಾರಿ ಸುಧಾರಣೆ ತಂದರು. 1928ರಲ್ಲಿ ಬಾರ್ಡೋಲಿಯು ಕ್ಷಾಮಕ್ಕೀಡಾಯಿತು.

ಸರಕಾರ ಕಂದಾಯವನ್ನು ಹೆಚ್ಚು ಮಾಡಿತು. ಇದರ ವಿರುದ್ಧ ಪಟೇಲರು ಜನಸಮೂಹವನ್ನು ಒಟ್ಟುಗೂಡಿಸಿ ನಡೆಸಿದ ಪ್ರತಿಭಟನೆ ದೇಶದಲ್ಲೆಲ್ಲ ಹೆಸರು ಮಾಡಿತು ಎಂದು ಹೇಳಿದರು. ಈ ಸಂದರ್ಭದಲ್ಲಿ ಭಾ.ಜ.ಪಾ ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ, ಶಾಸಕ ವಿಠ್ಠಲ್ ಹಲಗೆಕರ್, ಮಹಾನಗರ ಜಿಲ್ಲಾಧ್ಯಕ್ಷರಾದ ಗೀತಾ ಸುತಾರ, ಮಹಾಪೌರರಾದ ಸವಿತಾ ಕಾಂಬಳೆ, ಮಾಜಿ ಶಾಸಕ ಅರವಿಂದ ಪಾಟೀಲ,ಭಾ.ಜ.ಪಾ ಮುಖಂಡ ರವಿ ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಮಾದಮ್ಮನವರ, ರಾಜ್ಯ ಸಾಮಾಜಿಕ ಜಾಲತಾಣ ಸದಸ್ಯ ನಿತಿನ್ ಚೌಗಲೆ, ಜಿಲ್ಲಾ ಮಾಧ್ಯಮ ಪ್ರಮುಖ್ ಸಚಿನ್ ಕಡಿ, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ಮಹೇಶ್ ಮೋಹಿತೆ, ಪ್ರಶಾಂತ್ ಅಮ್ಮಿನಭಾವಿ, ಸುಭಾಷ್ ಸಣ್ಣವೀರಪ್ಪನವರ, ಚೇತನ್ ಅಂಗಡಿ, ಪ್ರಸಾದ್ ದೇವರಮನಿ, ವಿಠ್ಠಲ್ ಸಾಯಣ್ಣವರ,ಮನೋಜ್ ಪಾಟೀಲ್, ಪ್ರವೀಣ್ ಶಿಂಗಾರಿ, ನಾಗಪ್ಪ ಸಂಗೊಳ್ಳಿ , ಶ್ರೀಕಾಂತ್ ಬೆಲ್ಲದ, ಧನ್ಯಕುಮಾರ ಪಾಟೀಲ್ ಹಾಗೂ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು..

ವರದಿ:- ಪ್ರತೀಕ ಚಿಟಗಿ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ