Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅನುಸೂಚಿತ ಜಾತಿ, ಅನುಸೂಚಿತ ಪಂಗಡಗಳ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ

Advertisement
ಬೆಳಗಾವಿ :-ಸಮಾಜದ‌‌ ಮುನ್ನೆಲೆಗೆ ತರುವ ಕಾರ್ಯವಾಗಬೇಕು : ಪಿ.ಎಂ.ನರೇಂದ್ರ‌ಸ್ವಾಮಿ



ಬೆಳಗಾವಿ.ನ.16(ಕರ್ನಾಟಕ ವಾರ್ತೆ): ಸಾಮಾಜಿಕ ಅಸಮಾನತೆಯನ್ನು ತೊಡೆದು ಹಾಕಲು, ದುರ್ಬಲ ವರ್ಗಕ್ಕೆ ಉತ್ತಮವಾದಂತಹ ಯೋಜನೆ ನಿರ್ಮಿಸುವುದರ ಮೂಲಕ ಪರಿಶಿಷ್ಟರನ್ನು ಸಮಾಜದ‌ ಮುನ್ನೆಲೆಗೆ ತರಬಹುದಾಗಿದೆ. ಅಧಿಕಾರಿಗಳು ಇದನ್ನು ಅರಿತುಕೊಂಡು ಶ್ರಮಿಸಬೇಕು ಎಂದು ಕರ್ನಾಟಕ ವಿಧಾನ ಮಂಡಳ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಪಿ.ಎಂ.ನರೇಂದ್ರ ಸ್ವಾಮಿ ಅವರು ತಿಳಿಸಿದರು.

ಬೆಳಗಾವಿ ಸುವರ್ಣ‌ಸೌಧದಲ್ಲಿ ಶನಿವಾರ(ನ.16) ಜರುಗಿದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಯೋಜನೆಗಳು ಮತ್ತು ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.



ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗಾಗಿ ಪ್ರತ್ಯೇಕ ಕಾಯ್ದೆ ಜಾರಿಗೊಳಿಸಲಾಗಿದ್ದು, ಇಲಾಖಾ ಅನುದಾನದಲ್ಲಿ‌ ನಿರ್ದಿಷ್ಟಪಡಿಸಿದ ಅನುದಾನವನ್ನು ಕಾಲಮಿತಿ ಒಳಗಾಗಿ ವೆಚ್ಚ ಮಾಡುವುದರ ಜೊತೆಗೆ ಇಲಾಖೆ ಅನುದಾನದಲ್ಲಿ ಪರಿಶಿಷ್ಟರ ಕಲ್ಯಾಣಕ್ಕಾಗಿ ಮೀಸಲಿಟ್ಟ ಅನುದಾನದ‌ ಸದ್ಬಳಕೆ ಆಗಬೇಕು. ಸರ್ಕಾರ ನೀಡಿದ ಅನುದಾನ ಅಪವ್ಯಯವಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಶಾಲೆ ಸೇರಿದಂತೆ ವಿವಿಧ ಸ್ವತ್ತುಗಳ ನಿರ್ಮಾಣಕ್ಕೆ ಒತ್ತು ನೀಡಬೇಕು ಎಂದರು.

ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ‌ ಹಾಗೂ ಪರಿಶಿಷ್ಟ ಪಂಗಡಗಳ ಕುಟುಂಬಗಳ‌ ಸಂಖ್ಯೆಗೆ ಅನುಗುಣವಾಗಿ ವೈಯಕ್ತಿಕ ಶೌಚಾಲಯಗಳ‌ ನಿರ್ಮಾಣಕ್ಕೆ ಕ್ರಮ‌ ವಹಿಸಬೇಕು.

ಜಲ ಜೀವನ‌ ಮೀಷನ್ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪ.ಪಂಗಡಗಳ ಕಾಲನಿಯಲ್ಲಿನ‌ ಪ್ರತಿಯೊಂದು ಮನೆಗೂ ನಳ ಸಂಪರ್ಕ ಒದಗಿಸಿ ನೀರು ಒದಗಿಸಬೇಕು. ಈ‌ ಕುರಿತು ಸಮಾಜ‌ ಕಲ್ಯಾಣ ಇಲಾಖೆ ಅಧಿಕಾರಿಗಳು‌ ಖುದ್ದಾಗಿ ಭೇಟಿ‌ ನೀಡಿ ಕಾಮಗಾರಿಗಳನ್ನು ಪರಿಶೀಲಿಸಿ ಕಾಮಗಾರಿಗಳಲ್ಲಿ ಯಾವುದೇ ಲೋಪಗಳು ಆಗದಂತೆ ನಿಗಾ ವಹಿಸುವದರ ಜೊತೆಗೆ ಈ ಯೋಜನೆಯಡಿ ಅಳವಡಿಸಲಾಗುವ ಪೈಪಗಳ ಗುಣಮಟ್ಟವನ್ನು ಪರೀಶಿಲಿಸಬೇಕು. ಈ ಕುರಿತು ನೋಡೆಲ್‌ ಅಧಿಕಾರಿಗಳನ್ನು ನೇಮಿಸಿ ಪರಿಶೀಲಿಸಲು ಸೂಚನೆ‌ ನೀಡಿದರು.

ಜಿಲ್ಲಾ ಹಾಗೂ ತಾಲೂಕು ಮಟ್ಟದ ಕೆ.ಡಿ.ಪಿ‌. ಪ್ರಗತಿ ಪರಿಶೀಲನಾ ಸಭೆಯಲ್ಲಿ‌ ಜಲ ಜೀವನ ಮಿಷನ ಯೊಜನೆ ಕುರಿತು ಪ್ರಗತಿ ಪರಿಶೀಲನೆಯಾಗಬೇಕು ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ‌ ಪರಿಶಿಷ್ಟ ವರ್ಗಗಳ‌ ಕಲ್ಯಾಣ ಅಧಿಕಾರಿಗಳು ಈ‌ ಕುರಿತು ನಿಗಾ ವಹಿಸುವಂತೆ ನರೇಂದ್ರಸ್ವಾಮಿ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಆರೋಗ್ಯ ಸುಧಾರಣೆಗಾಗಿ ಇರುವ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಜಾರಿಗೊಳಿಸುವ ಮೂಲಕ ಅಪೌಷ್ಟಿಕತೆ ನಿವಾರಣೆಗೆ ಮುಂದಾಗಬೇಕು. ಅದೇ ರೀತಿ ಜಿಲ್ಲೆಯಲ್ಲಿ ದೇವದಾಸಿಯರಿಗೆ ಪುನರ್ವಸತಿ ಕಲ್ಪಿಸುವ ಯೋಜನೆಯಡಿ ನಿವೇಶನ ಹಾಗೂ ವಸತಿ ಇಲ್ಲದ ದೇವದಾಸಿಯರನ್ನು ಗುರುತಿಸಿ ಅವರಿಗೆ ಸಮರ್ಪಕವಾಗಿ ಪುನರ್ವಸತಿ ಕಲ್ಪಿಸುವ ಕಾರ್ಯವಾಗಬೇಕು. ಈ ಕಾರ್ಯದಲ್ಲಿ ಜಿಲ್ಲಾಡಳಿತದೊಂದಿಗೆ ಸಮಾಜ‌ ಕಲ್ಯಾಣ ಹಾಗೂ ಮಹಿಳಾ‌ ಇಲಾಖೆ‌ಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವಂತೆ ಸೂಚಿಸಿದರು.

ಅಲೆಮಾರಿ, ಅರೆ ಅಲೆಮಾರಿ ಜನಾಂಗದವರಿಗಾಗಿ ಜಾರಿಯಲ್ಲಿರುವ ಸರಕಾರದ ಯೋಜನೆ ಹಾಗೂ ಸವಬಲಭ್ಯಗಳು ದೊರಕಿಸಿ ಅವರನ್ನು ಕೂಡ ಸಮಾಜದ ಮುಖ್ಯವಾಹಿನಿಗೆ ತರುವಂತಹ‌ ಕಾರ್ಯವಾಗಬೇಕು.

ಜಾತಿ ನಿಂದನೆ‌‌ ಪ್ರಕರಣಗಳನ್ನು ಗಂಭಿರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ರೀತ್ಯ ಕಠಿಣ ಕ್ರಮ ಜರುಗಿಸುವಂತೆ ಸೂಚನೆ‌ ನೀಡಿದರು. ಸುಳ್ಳು ಜಾತಿ ಪ್ರಮಾಣ‌ ಪತ್ರ ಪಡೆದು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗಾಗಿ ಇರುವ ಯೋಜನೆಗಳನ್ನು‌ ದುರುಪಯೋಗ ಪಡೆಸಿಕೊಂಡವರ ವಿರುದ್ಧ ಕಠಿಣ ಕ್ರಮ ಜರುಗಿಸಲು ತಿಳಿಸಿದರು.

ನಗರಾಭಿವೃದ್ಧಿ ಇಲಾಖೆ‌ ಹಾಗೂ ಮಹಾನಗರ ಪಾಲಿಕೆಗಳ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಯೋಜನೆಯಡಿ ಹೆಚ್ಚಿನ‌ ಅನುದಾನವನ್ನು ಶಿಕ್ಷಣ‌ ಕ್ಷೇತ್ರಕ್ಕೆ ಮೀಸಲಿಡಲು ತಿಳಿಸಿದರು. ಅದರಲ್ಲೂ ಹೆಣ್ಣು ಮಕ್ಕಳು ಶಿಕ್ಷಣದಿಂದ‌ ವಂಚಿತರಾಗದಂತೆ ಎಲ್ಲ‌ ಸೌಲಭ್ಯಗಳನ್ನು ಒದಗಿಸಲು ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚನೆ:

ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಅಭಿವೃದ್ಧಿಗಾಗಿ ಹಮ್ಮಿಕೊಳ್ಳಲಾಗಿರುವ ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ‌ಯ ಗಂಭೀರತೆಯನ್ನು ಅರಿಯದೆ ಸಭೆಗೆ ಗೈರಾದ
ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಸಮಿತಿಯ ಅಧ್ಯಕ್ಷರಾದ ಪಿ.ಎಂ.ನರೇಂದ್ರಸ್ವಾಮಿ ಅವರು ಸೂಚನೆ ನೀಡಿದರು.

ಶಾಸಕರು ಹಾಗೂ ಸಮಿತಿ ಸದಸ್ಯರಾದ ಎನ್.ರವಿಕುಮಾರ ಅವರು‌ ಮಾತನಾಡಿ ಜಿಲ್ಲೆಯಲ್ಲಿ ಗ್ರಾಮ‌ ಪಂಚಾಯತಗಳಲ್ಲಿ ಖಾಲಿ ಇರುವ ಗ್ರೂಪ ಡಿ ಹುದ್ದೆಗಳ ಕುರಿತು ಮಾಹಿತಿ ಪಡೆದರು.

ಸ್ವಚ್ಛ ಭಾರತ ಮಿಷನ ಯೋಜನೆಯಡಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಅನಹದಾನ ಬಿಡುಗಡೆಯಾಗುತ್ತಿದ್ದು ಜಿಲ್ಲೆಯ ಪ.ಜಾತಿ, ಪ.ಪಂಗಡಗಳ ಕುಟುಂಬಗಳಿಗೆ ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಬೇಕು. ಈ ಯೋಜನೆಯಡಿ ಮನೆಗಳಿಗೆ ಶುದ್ಧ ಕುಡಿಯುವ‌ ನೀರನ್ನು ಪೂರೈಸಬೇಕು.

ಜಿಲ್ಲೆಯಲ್ಲಿರುವ ಪರಿಶಿಷ್ಟ ಜಾತಿ/ಪಂಗಡಗಳ ಕುಟುಂಬಗಳ ಮಾಹಿತಿ ಕುರಿತು ಸಮರ್ಪಕ ಮಾಹಿತಿಯನ್ನು ಒದಗಿಸದಿರುವುದಕ್ಕೆ ಸಮಿತಿಯ ಸದಸ್ಯ ಎನ್.ರವಿಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ನರೇಗಾ, ಜಲಜೀವನ ಮಿಷನ್ ಸೇರುದಂತೆ ಪ್ರತಿಯೊಂದು ಯೋಜನೆಗಳನ್ನು ಪರಿಶಿಷ್ಟರ ಕಾಲನಿಗಳಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಸಮಿತಿಯ ಸದಸ್ಯ ರವಿಕುಮಾರ್ ತಿಳಿಸಿದರು.
ಪರಿಶಿಷ್ಟ ಜಾತಿ ಮತ್ತು ವರ್ಗಗಳ ಪ್ರತಿ‌ಮನೆಗೆ ಶುದ್ಧ ಕುಡಿಯುವ ನೀರು ಮತ್ತು ಶೌಚಾಲಯ ಒದಗಿಸುವ ಮೂಲಕ ಅವರ ಜೀವನ ಮಟ್ಟವನ್ನು ಸುಧಾರಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಮಿತಿ‌ ಸದಸ್ಯರಾದ ಡಾ. ಡಿ.ತಿಮ್ಮಯ್ಯ ಅವರು‌ ಮಾತನಾಡಿ, ಎಸ್.ಸಿ.ಪಿ, ಟಿ.ಎಸ್.ಪಿ‌ ಅನುದಾನದಡಿ ಬಿಡುಗಡೆಯಾದಂತಹ‌ ಅನುದಾನದಲ್ಲಿ ಬಳಕೆಯಾದ ಹಾಗೂ ಬಾಕಿ ಉಳಿದ ಅನುದಾನದ ನಿಖರವಾದ ವಿವರಗಳನ್ನು‌ ಒದಗಿಸಲು‌ ಸೂಚನೆ‌ ನೀಡಿದರು.

ಜಿಲ್ಲೆಯಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಎಸ್.ಸಿ/ಎಸ್.ಟಿ ಮಕ್ಕಳ ಮಾಹಿತಿ ಪಡೆದು ಅಪೌಷ್ಟಿಕತೆಯಿಂದ‌ ಬಳಲುತ್ತಿರುವ ಮಕ್ಕಳ‌ ಬಗ್ಗೆ ಹೆಚ್ಚಿನ‌ ಹರಿಸಿ ಮಕ್ಕಳಿಗೆ ಅಗತ್ಯದ ಪೌಷ್ಠಿಕಾಂಶಗಳ ಕುರಿತು ಚಿಕಿತ್ಸೆ ಒದಗಿಸಬೇಕು. ಈ ಕುರಿತು ಆರೋಗ್ಯ ಇಲಾಖೆ ವತಿಯಿಂದ ನಿಯಮಿತವಾಗಿ ಪ್ರಗತಿ ಪರಿಶೀಲಿಸಬೇಕು‌ ಎಂದು ತಿಳಿಸಿದರು.

ಸಮಿತಿ ಸದಸ್ಯರಾದ ಕೃಷ್ಣಾ ನಾಯಕ ಅವರು ಮಾತನಾಡಿ, ಎಸ್.ಸಿ.ಎಸ್.ಪಿ. ಟಿ.ಎಸ್.ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪ.ಪಂಗಡಗಳ ಜನ ವಾಸಿಸುವ ಕಾಲನಿಗಳಲ್ಲಿ ಸ್ವತ್ತುಗಳ ನಿರ್ಮಾಣಕ್ಕೆ ಕ್ರಮ‌ ವಹಿಸಬೇಕು ಎಂದರು.

ಸಮಿತಿ ಸದಸ್ಯರಾದ ಡಿ.ಎಂ.ಐಹೋಳೆ ಅವರು‌ ಮಾತನಾಡಿ, ಜಲ ಜೀವನ‌ ಮಿಷನ್ ಯೋಜನೆಯೆಡಿ‌ ನಡೆದಂತಹ ಕಾಮಗಾರಿಗಳಿಂದಾಗಿ ಹಾಳಾದ ರಸ್ತೆಗಳನ್ನು ದುರಸ್ತಿ ಮಾಡಿಸಲು‌ ಕ್ರಮ ವಹಿಸಲು ತಿಳಿಸಿದರು.

ಶಾಲೆಗಳ ದುರಸ್ತಿಗಾಗಿ ಎಸ್.ಡಿ.ಆರ್.ಎಫ್. ಅಡಿ ಹತ್ತು ಕೋಟಿ ರೂಪಾಯಿ ಅನುದಾನವನ್ನು ನೀಡಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
ಈ ಅನುದಾನದಡಿ ದುರಸ್ತಿ ಅಗತ್ಯವಿರುವ ಪ್ರತಿ ಶಾಲೆಗೆ ತಲಾ ಎರಡು ಲಕ್ಷ ರೂಪಾಯಿ ಖರ್ಚು ಮಾಡಬಹುದು ಎಂದರು.

ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯ ಕ್ರಿಯಾ ಯೋಜನೆಯಲ್ಲಿ ಶೇ.35 ರಷ್ಟು ಅಂಗನವಾಡಿ ಮತ್ತು ಶಾಲೆಗಳ ಸುಧಾರಣಾ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ವಿವರಿಸಿದರು.

ಪ್ರತಿ ಗ್ರಾಮ ಪಂಚಾಯತಿಯಲ್ಲಿ ಕನಿಷ್ಠ ಐದು ಹುದ್ದೆಗಳಿದ್ದು, ಜನಸಂಖ್ಯೆ ಮತ್ತು ಓವರ್ ಹೆಡ್ ಟ್ಯಾಂಕ್ ಸಂಖ್ಯೆ ಆಧರಿಸಿ ಕೆಲವು ಪಂಚಾಯತಿಗಳಲ್ಲಿ ಐದಕ್ಕಿಂತ ಹೆಚ್ಚು ಹುದ್ದೆಗಳಿವೆ. ಜಿಲ್ಲಾ ಪಂಚಾಯಿತಿ ಅನುಮೋದಿತ ಸಿಬ್ಬಂದಿಗೆ ಪ್ರತಿ ತಿಂಗಳು ಸಮರ್ಪಕ ವೇತನವನ್ನು ನಿಯಮಿತವಾಗಿ ಪಾವತಿಸಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು 7.92 ಲಕ್ಷ ಜಾಬ್ ಕಾರ್ಡಗಳಿದ್ದು,
4.04 ಲಕ್ಷ ಕಾರ್ಡುಗಳು ಸಕ್ರಿಯವಾಗಿವೆ.
ಇದರಲ್ಲಿ ಪರಿಶಿಷ್ಟ ಜಾತಿ/ಪಂಗಡಗಳ ಜನರ ಒಟ್ಟು 1.55 ಲಕ್ಷ ಕಾರ್ಡ್ ಗಳಿದ್ದು, ಅದರಲ್ಲಿ 1.32 ಲಕ್ಷ ಕಾರ್ಡ್ ಗಳು ಸಕ್ರಿಯವಾಗಿವೆ.
ಬೇಸಿಗೆಯಲ್ಲಿ ಪ್ರತಿದಿನ ಒಂದು ಲಕ್ಷ ಜನರು ನರೇಗಾ ಕೆಲಸ ಮಾಡುತ್ತಿದ್ದಾರೆ ಎಂದು ರಾಹುಲ್ ಶಿಂಧೆ ವಿವರಿಸಿದರು.

ಸಭೆಯಲ್ಲಿ ಸಮಿತಿ ಸದಸ್ಯರುಗಳಾದ ಬಸವರಾಜ ಮತ್ತಿಮುಡು, ಶಾಂತಾರಾಮ‌ ಸಿದ್ಧಿ, ಸಮಾಜ ಕಲ್ಯಾಣ ಇಲಾಖೆಯ ರಾಕೇಶ್ ಕುಮಾರ, ಬೆಳಗಾವಿ‌ ವಿಭಾಗದ ಪ್ರಾದೇಶಿಕ ಆಯುಕ್ತರಾದ ಸಂಜಯ ಶೆಟ್ಟಣ್ಣವರ, ಜಿಲ್ಲಾಧಿಕಾರಿ‌ ಮೊಹಮ್ಮದ್‌ ರೋಷನ್, ಪೋಲಿಸ್ ಆಯುಕ್ತ ಯಡಾ ಮಾರ್ಟಿನ್‌ ಮಾರ್ನಬ್ಯಾಂಗ್ ಜಿಲ್ಲಾ‌ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಪ್ರಶಿಕ್ಷಣಾರ್ಥಿ ಐ.ಎ.ಎಸ್. ಅಧಿಕಾರಿ ದಿನೇಶ ಕುಮಾರ ಮೀನಾ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
************
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ