Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಫೋನ್ ಕೊಡಸದಕ್ಕೆ ಮಗ ಆತ್ಮಹತ್ಯೆ : ಮನನೊಂದು ತಂದೆಯೂ ಸಾವಿಗೆ ಶರಣು 

Advertisement
ಮಹಾರಾಷ್ಟ್ರದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದ್ದು, ಒಂದೇ ಹಗ್ಗದಲ್ಲಿ ನೇಣು ಬಿಗಿದುಕೊಂಡು ತಂದೆ-ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಹಾರಾಷ್ಟ್ರದ ನಾಂದೇಡ್ನಲ್ಲಿ ಈ ಘಟನೆ ನಡೆದಿದೆ. ಹದಿಹರೆಯದ ಹುಡುಗನ ಸ್ಮಾರ್ಟ್ಫೋನ್ ಆಸೆ ಮತ್ತು ಮೊಬೈಲ್ ಖರೀದಿಸಲು ಅವನ ಬಡ ತಂದೆಯ ಅಸಮರ್ಥತೆಯು ತಂದೆ-ಮಗನ ಜೀವವನ್ನು ಬಲಿ ತೆಗೆದುಕೊಂಡಿದೆ.

ಬಿಲೋಲಿ ತಹಸಿಲ್ನ ಮಿನಾಕಿಯಲ್ಲಿರುವ 16 ವರ್ಷದ ಹತ್ತನೇ ತರಗತಿ ಬಾಲಕ ಮತ್ತು ಅವನ ರೈತ ತಂದೆ ಗುರುವಾರ ತಮ್ಮ ಕುಟುಂಬದ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ತನ್ನ ಮಗ ಮರಕ್ಕೆ ನೇಣು ಬಿಗಿದಿರುವುದನ್ನು ನೋಡಿದಾಗ ಆತ ಕೂಡ ಅದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನಾಂದೇಡ್ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಮೃತ ಮಗ ಓಂಕಾರ್ ಮೂವರು ಸಹೋದರರಲ್ಲಿ ಕಿರಿಯವನಾಗಿದ್ದು, ಮಕರ ಸಂಕ್ರಾಂತಿಯನ್ನು ಆಚರಿಸಲು ಲಾತೂರ್ ಜಿಲ್ಲೆಯ ಉದ್ಗಿರ್ನಲ್ಲಿರುವ ತನ್ನ ಹಾಸ್ಟೆಲ್ನಿಂದ ಮನೆಗೆ ಮರಳಿದ್ದನು. ವರದಿಯ ಪ್ರಕಾರ, ಓಂಕಾರ್ ತನ್ನ ತಂದೆಗೆ ಶೈಕ್ಷಣಿಕ ಉದ್ದೇಶಗಳಿಗಾಗಿ ಸ್ಮಾರ್ಟ್ಫೋನ್ ಕೊಡಿಸುವಂತೆ ವಿನಂತಿಸಿದ್ದರು.

ಆದರೆ ಹಣಕಾಸಿನ ಸಮಸ್ಯೆಯಿಂದ ತಂದೆ ಮಗನಿಗೆ ಮೊಬೈಲ್ ಖರೀದಿಸಲು ಸಾಧ್ಯವಾಗಲಿಲ್ಲ.ಪ್ರಕರಣದ ತನಿಖೆ ನಡೆಸುತ್ತಿರುವ ಸಬ್ ಇನ್ಸ್ಪೆಕ್ಟರ್ ದಿಲೀಪ್ ಮುಂಡೆ, ಓಂಕಾರ್ ಅವರ ತಾಯಿಯ ಪ್ರಕಾರ, ಮಗ ತನ್ನ ತಂದೆಗೆ ಮೊಬೈಲ್ ಕೊಡಿಸಲು ನಿರಂತರವಾಗಿ ಕೇಳುತ್ತಿದ್ದನು ಎಂದು ಹೇಳಿದರು.

“ಓಂಕಾರ್ ಬುಧವಾರ ಸಂಜೆ ಮತ್ತೆ ಈ ವಿಷಯವನ್ನು ಎತ್ತಿದ್ದಾನೆ. ಆದರೆ ಅವರ ತಂದೆ ಕೃಷಿ ಮತ್ತು ವಾಹನಕ್ಕಾಗಿ ತೆಗೆದುಕೊಂಡ ಸಾಲವನ್ನು ಕಟ್ಟುತ್ತಿದ್ದರಿಂದ ಮೊಬೈಲ್ ಖರೀದಿಸಲು ಆಗಲ್ಲ ಎಂದಿದ್ದರು.

 

 
Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಿಂಬಾಬ್ವೆ ವಿರುದ್ಧ ಸುಲಭವಾಗಿ ಗೆದ್ದ ಭಾರತ ಕಾಂಗ್ರೆಸ್ ತಿಗಣೆಗಳು ಹೋಗಿ ಜಿರಳೆಗಳ ಜೊತೆ ಸೇರಿಕೊಂಡಿದ್ದಾರೆ : ಪ್ರತಾಪ್ ಸಿಂಹ ನಂದಿನಿ ತುಪ್ಪದ ಬೆಲೆ ಪ್ರತಿ ಕೆಜಿಗೆ 15 ರೂ. ಹಾಗೂ ಬೆಣ್ಣೆಯ ದರ ಪ್ರತಿ ಕೆಜಿಗೆ 22 ರೂ. ಹೆಚ್ಚಳ ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲಿಯೇ ಮಯಾಂಕ ಯಾದವ್‌ಗೆ ವಿಕೆಟ್  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆ ಅಂಗಳದಲ್ಲಿ ಗಿಡ ನಾಟಿ ಕಾರ್ಯಕ್ರಮ ಜಾತ್ರೆಗೆ ಹೋಗುವ ವಿಚಾರಕ್ಕೆ ದಂಪತಿ ನಡುವೆ ಜಗಳ : ದೂದಗಂಗಾ ನದಿಗೆ ಹಾರಿದ ಪತ್ನಿ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವಂತಿಲ್ಲ : ರಾಜ್ಯ ಸರ್ಕಾರ ಆದೇಶ ಹೆಣ್ಣು ಮಗು ಎಂಬ ಕಾರಣಕ್ಕೆ ನೀರಿನ ಸಂಪ್ ಗೆ ಎಸೆದು ಕೊಂದು ಪಾಪಿ ತಂದೆಸುಳ್ಳು ಸುದ್ದಿ ಪ್ರಕಟ : ಸಂಪಾದಕ ಆನಂದ್ ಕೌಶಿಕ್ 6 ತಿಂಗಳು ಸಜೆ ಮತ್ತು 1 ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಲಯಬಾಗಲಕೋಟೆ ಬೇಕರಿ ತಪಾಸಣೆ ತಾಜಾ ಎಣ್ಣೆ ಬಳಸಿ : ಸಿಲಿಂಡರ್ ಹೊರಗಿಡಿ ಉಪಲೋಕಾಯುಕ್ತರ ಎಚ್ಚರಿಕೆ