Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸುಕ್ಷೇತ್ರ ಶ್ರೀಗಚ್ಚಿನ ಮಠದ ಆವರಣದಲ್ಲಿ,ಶ್ರೀ ಸಿದ್ದರಾಮೇಶ್ವರ 854ನೇ ಜಯಂತ್ಯೋತ್ಸವ

Advertisement
ಅಥಣಿ : -ಶಿವಯೋಗಿ ಸಿದ್ದರಾಮೇಶ್ವರ ಅವರು ತಮ್ಮ ಬದುಕಿನುದ್ದಕ್ಕೂ ಬಸವಾದಿ ಶರಣರ ದಾರಿಯಲ್ಲಿ ನಡೆದು ನಾಡಿಗೆ ಮಹಾನ್ ಕೊಡುಗೆ ನೀಡಿದ್ದಾರೆ. ಅವರು ತಮ್ಮ ತಪಶಕ್ತಿಯಿಂದ ಸಂಕಲ್ಪ ಸಿದ್ದಿ ಪಡೆದವರು. ಅಂತವರ ಜಯಂತಿ ಆಚರಣೆ ಮಾಡುವದು ನಮ್ಮ ಪುಣ್ಯ ಎಂದು ಮಾಜಿ ಉಪಮುಖ್ಯಮಂತ್ರಿ ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.



ಸುಕ್ಷೇತ್ರ ಶ್ರೀಗಚ್ಚಿನ ಮಠದ ಆವರಣದಲ್ಲಿ, ತಾಲೂಕು ಆಡಳಿತ ಹಾಗೂ ಅಥಣಿ ಸಮಾಜ ಭಾಂದವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಸಿದ್ದರಾಮೇಶ್ವರ 854ನೇ ಜಯಂತ್ಯೋತ್ಸವ ಜರುಗಿತು. ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು

ಮಹಾತ್ಮರನ್ನು ಒಂದು ಜಾತಿಗೆ ಸೀಮಿತಗೊಳಿಸುವ ಪದ್ಧತಿ ಹೋಗಬೇಕು. ಅವರು ಇಡೀ ಮಾನವ ಕುಲಕ್ಕೆ ಸಂಬಂಧ ಪಟ್ಟವರು ಹಾಗಾಗಿ ಎಲ್ಲರೂ ಅವರಿಗೆ ಗೌರವ ಸಲ್ಲಿಸಬೇಕಾದ ಅಗತ್ಯವಿದೆ. ಬಸವಣ್ಣನವರ ಕಾಯಕ ತತ್ವವನ್ನೇ ನಂಬಿ ಕಾಯಕದಲ್ಲೇ ಕೈಲಾಸ ಕಂಡವರು.ಭೋವಿ ಜನಾಂಗದ ಜನರು ಅತ್ಯಂತ ವಿಶ್ವಾಸಿಕರು. ಮನೆ, ಮಠ ಎಲ್ಲ ನಿರ್ಮಾಣ ಮಾಡುವಲ್ಲಿ ಜನಾಂಗದ ಪಾತ್ರ ಹಿರಿದು. ಪ್ರತಿಯೊಬ್ಬರೂ ಅವರಿಗೆ ಗೌರವ ಸಲ್ಲಿಸಬೇಕು.ಪ್ರತಿವರ್ಷ ಅನೇಕ ಮಹಾತ್ಮರ ಸತ್ಪೂರುಷರ ಜಯಂತಿ ಆಚರಣೆ ಉದ್ದೇಶ ಅವರ ಚಿಂತನೆ ಆಚಾರ, ವಿಚಾರ ಇವುಗಳನ್ನು ತಿಳಿದು ಅವರು ಸಮಾಜಕ್ಕೆ ಕೊಟ್ಟ ಕೊಡುಗೆ ಸ್ಮರಣೆ ಮಾಡುವುದು ಆಚರಣೆಗೆ ತರುವುದಾಗಿದೆ ಎಂದು ಹೇಳಿದರು.

ದಿವ್ಯ ಸಾನಿಧ್ಯವನ್ನು ಪ.ಪೂ. ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿಗಳು ಬಾಗಲಕೋಟ/ಚಿತ್ರದುರ್ಗ ಅವರು ಆಶೀರ್ವಚನ ನೀಡುತ್ತಾ ಇಂದು ನಮ್ಮ ಸಮಾಜದ ಮಕ್ಕಳ ಕೈಯಲ್ಲಿ ಕಲ್ಲು ಕಟೀಯುವ ವಸ್ತು ಕೊಡುವ ಬದಲು ಪುಸ್ತಕ ಪೆನ್ನು ನೀಡಬೇಕು. ತಾಂತ್ರಿಕ ಯುಗಕ್ಕೆ ತಕ್ಕಂತೆ ಭೌದ್ಧಿಕ ಪರಿವರ್ತನೆ ಮಾಡಿಕೊಳ್ಳ ಬೇಕಾದ ಅಗತ್ಯವಿದೆ.ಸಮ ಸಮಾಜದ ಜೊತೆಗೆ ಜ್ಞಾನ ಪಡೆಯಬೇಕು. ನಮ್ಮ ಸ್ವಂತ ಬೌದ್ಧಿಕ ಶಕ್ತಿ ಸಾಮರ್ಥ್ಯದ ಮೇಲೆ ಬದುಕುವಂತಾಗಬೇಕು. ಸಿದ್ದರಾಮೇಶ್ವರರು ಅಸಹಾಯಕರು, ಶೋಷಣೆಗೆ ಒಳಗಾದವರ ದ್ವನಿಯಾದವರು. ಯೋಗಿಗಳ ಯೋಗಿಯಾದವರು. ಸಕಲ ಜೀವಾತ್ಮರಿಗೆ ಲೆಸನ್ನು ಬಯಸಿದವರು ಸಿದ್ದರಾಮೇಶ್ವರರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸ್ವಾಗತ ಪ್ರಾಸ್ತಾವಿಕವಾಗಿ ಮಾತನಾಡಿದ ವೆಂಕಟೇಶ ಎನ್. ಮಾನೆ ಅಧ್ಯಕ್ಷರು ತಾಲೂಕಾ ಭೋವಿ ಸಮಾಜ, ಅಥಣಿ ಭಾರತದ ಸ್ವಾತಂತ್ರ್ಯಕ್ಕೆ ಭೋವಿ ಸಮಾಜದ ಕೊಡುಗೆ ಅಪಾರವಾಗಿದೆ.ಭಾರತಕ್ಕೆ ಸ್ವಾತಂತ್ರ್ಯ ಬರಲು ಭೋವಿ ಸಮಾಜ ಕುಲರತ್ನಗಳಾದಂತಹ ಸುಭಾಸಚಂದ್ರಭೋಸ, ಓಡಿಸ್ಸಾ ರಾಜರಾದ ಕೃಷ್ಣಚಂದ್ರ ಗಜತಿರಾಜ, ಆಂದ್ರದ ಬಾಲವಡ್ಡರಾಜ ಹಾಗೂ ಆಂದ್ರದ ಸೈರಾನರಸಿಂಹರಡ್ಡಿಯ ಗೆಳೆಯ ಹಾಗೂ ಸೇನಾಧಿಪತಿ ಒಡ್ಡೆ ಒಬಣ್ಣ, ಪ.ಬಂಗಾಳದ ಪುಷ್ಪಲತಾ ಓಡ, ಬೆಳಗಾವಿ ಜಿಲ್ಲೆ ಕಿತ್ತೂರ ರಾಣಿ ಚನ್ನಮ್ಮ ಬಲಗೈ ಬಂಟ ರಾಯಣ್ಣನ ಆತ್ಮೀಯ ಗೆಳೆಯ ಬೆಳವಡಿ ಶಬ್ದವೇದಿ ವಡ್ಡರ ಯಲ್ಲಣ್ಣ ಹೀಗೆ ಸಾಕಷ್ಟು ಜನರನ್ನು ಸ್ವಾತಂತ್ರ್ಯಕ್ಕೆ ಸಮಾಜ ಕೊಡುಗೆ ನೀಡಿದೆ.

ಗಚ್ಚಿನಮಠ, ಅಥಣಿಯ ಶಿವಬಸವ ಸ್ವಾಮಿಗಳು, ತೆಲಸಂಗ ಕುಂಬಾರ ಗುಂಡಯ್ಯ ಸ್ವಾಮೀಜಿ, ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.

ಮುಖ್ಯ ಅತಿಥಿಗಳಾಗಿ ಶ್ರೀಮತಿ ಶಿವಲೀಲಾ ಎಸ್. ಬುಟಾಳಿ ಅಧ್ಯಕ್ಷರು, ಪುರಸಭೆ, ಅಥಣಿ, ಸದಾಶಿವ ಕೇ. ಬುಟಾಳಿ ಹಿರಿಯ ಕಾಂಗ್ರೇಸ್ ಮುಖಂಡರು, ಅಥಣಿ, ಅಶೋಕ ಗು. ಮಗದುಮ್ಮ ಅಧ್ಯಕ್ಷರು, TAPCMS ಅಥಣಿ, ರಮೇಶ ವಿ. ಪವಾರ ಸದಸ್ಯರು, ಪುರಸಭೆ, ಅಥಣಿ ಮುತ್ತಪ್ಪ ತಟ್ರೆ, ಸುರೇಶ ಗಾಡೀವಡ್ಡರ, ಶಂಕರ ಗಾಡಿವಡ್ಡರ,ಬಸವರಾಜ ಗಾಡೀವಡ್ಡರ, ರಾಮು ಗಾಡೀವಡ್ಡರ, ಮುರಗೇಶ ಗಾಡೀವಡ್ಡರ ಶಂಕರ ಪಾತ್ರುಟ ಶಂಕರ ಸಿ. ಗಾಡಿವಡ್ಡರ ಅಧ್ಯಕ್ಷರು ಶ್ರೀ ಶಿವಯೋಗಿ ಸಿದ್ದರಾಮೇಶ್ವರ ನೀರಾವರಿ ಸಂಘ, ಅಥಣಿ ಗೋಪಿ, ಜಿ. ಗಾಡಿವಡ್ಡರ ಯುವ ಅಧ್ಯಕ್ಷರು ಭೋವಿ ಸಮಾಜ, ಅಥಣಿ ಅಪ್ಪು ಶಂ. ಗಾಡಿವಡ್ಡರ ಯುವ ಉಪಾಧ್ಯಕ್ಷರು ಭೋವಿ ಸಮಾಜ, ಅಥಣಿ ಸೇರಿದಂತೆ ತಾಲೂಕಿನ ಸಮಾಜದ ಭಾಂದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನಿವೃತ್ತಿ ಅಬಕಾರಿ ಇನಸ್ಪೆಕ್ಟರ್, ಅಥಣಿ, ಶ್ರೀ ಮುರಗೇಶ ರಾ. ಗಾಡಿವಡ್ಡರ ಮಾಜಿ ಸೈನಿಕರು.ಸನ್ಮಾನ ಮಾಡಲಾಯಿತು.

ವರದಿ:-ರಾಜು ವಾಘಮಾರೆ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ