
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಸ್ವಾಮೀಜಿಯವರನ್ನು ಸ್ವಾಗತಿಸಿ, ಗೌರವಿಸಿದರು. ಮರಾಠಾ ಸಮಾಜದ ಸ್ಥಿತಿಗತಿ, ಮರಾಠಾ ಸಂಸ್ಕೃತಿ, ಮರಾಠ ಸಮುದಾಯಕ್ಕೆ ಶೈಕ್ಷಣಿಕ ಸೌಲಭ್ಯ ಸೇರಿದಂತೆ ಹಲವಾರು ವಿಷಯಗಳನ್ನು ಸ್ವಾಮೀಜಿಗಳು ಈ ಸಂದರ್ಭದಲ್ಲಿ ಚರ್ಚಿಸಿದರು.

ಅಲ್ಲದೆ ಮರಾಠ ಧರ್ಮದ ಕುರಿತು ಜಾಗೃತಿ ಮೂಡಿಸಲು, ಸಾಮಾಜಿಕ ಜಾಗೃತಿಗಾಗಿ ತಾವು ಕೈಗೊಂಡಿರುವ ಕೆಲಸಗಳ ಕುರಿತು ಮತ್ತು ಮುಂದೆ ಆಗಬೇಕಿರುವ ಕೆಲಸಗಳ ಕುರಿತು ಸ್ವಾಮೀಜಿಗಳು ಮಾಹಿತಿ ನೀಡಿದರು.ಬಾಳು ದೇಸೂರಕರ್, ಉಮೇಶ ಪಾಟೀಲ, ಯುವರಾಜ ಕದಂ, ಸಾತೇರಿ ಕೋಕಿತ್ಕರ್, ಪ್ರಹ್ಲಾದ ಚಿರಮುರಕರ್ ಮೊದಲಾದವರು ಇದ್ದರು.
ವರದಿ ಪ್ರತೀಕ ಚಿಟಗಿ

