Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಗವರ್ನರ್ ಅಂಕಿತವಿಲ್ಲದೇ ತಮಿಳುನಾಡಿನ 10 ಮಸೂದೆಗಳು ಜಾರಿ : ಸುಪ್ರೀಂ ಐತಿಹಾಸಿಕ ತೀರ್ಪು 

Advertisement
ಚೆನ್ನೈ: ಐತಿಹಾಸಿಕ ಬೆಳವಣಿಗೆಯೊಂದರಲ್ಲಿ 2020 ರಿಂದ ತಮಿಳುನಾಡು ವಿಧಾನಸಭೆಯು ಅಂಗೀಕರಿಸಿದ ಕನಿಷ್ಠ 10 ಮಸೂದೆಗಳಿಗೆ ರಾಜ್ಯಪಾಲ ಆರ್.ಎನ್. ರವಿ ಅವರು ಒಪ್ಪಿಗೆ ನಿರಾಕರಿಸಿದ್ದರು. ಆದರೆ ಇದೀಗ ಅಧಿಕೃತವಾಗಿ ಕಾನೂನುಗಳಾಗಿ ಮಾರ್ಪಟ್ಟಿವೆ.

ತಮಿಳುನಾಡು ವಿಧಾನಸಭೆಯಲ್ಲಿ ಒಪ್ಪಿಗೆಯಾದ 10 ಮಸೂದೆಗಳನ್ನು ರಾಜ್ಯಪಾಲರು ಅಥವಾ ರಾಷ್ಟ್ರಪತಿಗಳ ಅನುಮೋದನೆಯಿಲ್ಲದೇ ಕಾನೂನಿನ ರೂಪ ಪಡೆದಿವೆ ಎಂದು ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪು ಘೋಷಿಸಿದೆ.

ಈ ತೀರ್ಪಿನ ಮೂಲಕ ಡಿಎಂಕೆ ನೇತೃತ್ವದ ರಾಜ್ಯ ಸರ್ಕಾರಕ್ಕೆ ಭಾರೀ ಗೆಲುವು ಸಿಕ್ಕಂತಾಗಿದ್ದು, ರಾಜ್ಯಪಾಲ ಆರ್‌ ಎನ್‌ ರವಿ ಅವರೊಂದಿಗಿನ ದೀರ್ಘಕಾಲದ ಗೊಂದಲಕ್ಕೆ ಈಗ ಸುಪ್ರೀಂ ತೆರೆ ಎಳೆದಿದೆ.

ಈ ವಾರದ ಆರಂಭದಲ್ಲಿ, ತಮಿಳುನಾಡು ರಾಜ್ಯಪಾಲರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತು. 10 ಪ್ರಮುಖ ಮಸೂದೆಗಳಿಗೆ ಒಪ್ಪಿಗೆ ನೀಡುವುದನ್ನು ತಡೆಹಿಡಿಯುವ ನಿರ್ಧಾರವು ಕಾನೂನುಬಾಹಿರ ಎಂದು ಹೇಳಿತ್ತು.

ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರನ್ನೊಳಗೊಂಡ ಪೀಠವು, ರಾಜ್ಯಪಾಲರು ಒಪ್ಪಿಗೆ ನೀಡದೆ ರಾಷ್ಟ್ರಪತಿಗಳಿಗೆ ಮಸೂದೆಗಳನ್ನು ಕಾಯ್ದಿರಿಸಲು ಸಾಧ್ಯವಿಲ್ಲ, ಅದನ್ನು ಪಕ್ಕಕ್ಕೆ ಹಾಕಬೇಕು ಎಂದು ಹೇಳಿತ್ತು.

ರಾಜ್ಯಪಾಲರು 10 ಮಸೂದೆಗಳನ್ನು ರಾಷ್ಟ್ರಪತಿಗಳ ಅನುಮೋದನೆಗೆ ಕಳುಹಿಸಿದ್ದು ಕಾನೂನುಬಾಹಿರವಾಗಿದ್ದು, ಇದನ್ನು ರದ್ದುಗೊಳಿಸಬೇಕು ಎಂದು ನ್ಯಾಯಾಲಯ ತೀರ್ಪು ನೀಡಿತು.

ವಿಧಾನಸಭೆಯು ಮಸೂದೆಯನ್ನು ಯಾವುದೇ ಪ್ರಮುಖ ಬದಲಾವಣೆಗಳಿಲ್ಲದೇ ಮತ್ತೆ ಅಂಗೀಕರಿಸಿದರೆ, ರಾಜ್ಯಪಾಲರು ಅದನ್ನು ತಡೆಹಿಡಿಯಲು ಅಥವಾ ವಿಳಂಬಗೊಳಿಸಲು ಸಾಧ್ಯವಿಲ್ಲ ಎಂದು ಕೋರ್ಟ್‌ ಒತ್ತಿ ಹೇಳಿತು.
Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಿಂಬಾಬ್ವೆ ವಿರುದ್ಧ ಸುಲಭವಾಗಿ ಗೆದ್ದ ಭಾರತ ಕಾಂಗ್ರೆಸ್ ತಿಗಣೆಗಳು ಹೋಗಿ ಜಿರಳೆಗಳ ಜೊತೆ ಸೇರಿಕೊಂಡಿದ್ದಾರೆ : ಪ್ರತಾಪ್ ಸಿಂಹ ನಂದಿನಿ ತುಪ್ಪದ ಬೆಲೆ ಪ್ರತಿ ಕೆಜಿಗೆ 15 ರೂ. ಹಾಗೂ ಬೆಣ್ಣೆಯ ದರ ಪ್ರತಿ ಕೆಜಿಗೆ 22 ರೂ. ಹೆಚ್ಚಳ ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲಿಯೇ ಮಯಾಂಕ ಯಾದವ್‌ಗೆ ವಿಕೆಟ್  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆ ಅಂಗಳದಲ್ಲಿ ಗಿಡ ನಾಟಿ ಕಾರ್ಯಕ್ರಮ ಜಾತ್ರೆಗೆ ಹೋಗುವ ವಿಚಾರಕ್ಕೆ ದಂಪತಿ ನಡುವೆ ಜಗಳ : ದೂದಗಂಗಾ ನದಿಗೆ ಹಾರಿದ ಪತ್ನಿ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವಂತಿಲ್ಲ : ರಾಜ್ಯ ಸರ್ಕಾರ ಆದೇಶ ಹೆಣ್ಣು ಮಗು ಎಂಬ ಕಾರಣಕ್ಕೆ ನೀರಿನ ಸಂಪ್ ಗೆ ಎಸೆದು ಕೊಂದು ಪಾಪಿ ತಂದೆಸುಳ್ಳು ಸುದ್ದಿ ಪ್ರಕಟ : ಸಂಪಾದಕ ಆನಂದ್ ಕೌಶಿಕ್ 6 ತಿಂಗಳು ಸಜೆ ಮತ್ತು 1 ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಲಯಬಾಗಲಕೋಟೆ ಬೇಕರಿ ತಪಾಸಣೆ ತಾಜಾ ಎಣ್ಣೆ ಬಳಸಿ : ಸಿಲಿಂಡರ್ ಹೊರಗಿಡಿ ಉಪಲೋಕಾಯುಕ್ತರ ಎಚ್ಚರಿಕೆ